ಈ ರಾಶಿಯವರಿಗೆ ಇಂದು ಪತ್ನಿಯ ಸಹಕಾರದಿಂದ ಧನಾಗಮ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವ್ಯಾಪಾರದಲ್ಲಿ ಹೆಚ್ಚಿನ ಲಾಭ. ಸಾರ್ವಜನಿಕ ರಂಗದಲ್ಲಿರುವ ಮಹಿಳೆಯರಿಗೆ ಅಧಿಕಾರ-ಪ್ರಾಪ್ತಿ. ಸಂಕಷ್ಟಗಳ ಪರಿಹಾರ. ಶುಭಸಂಖ್ಯೆ: 9

ವೃಷಭ: ಆರ್ಥಿಕ ಸಂಪನ್ಮೂಲ ಅಭಿವೃದ್ಧಿ. ಮಾತಿಗಿಂತಲೂ ಮೌನವಾಗಿರುವುದು ಲೇಸು. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 1

ಮಿಥುನ: ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ಮಗಳಿಗೆ ವಿವಾಹ ಸಂಬಂಧ ಕೂಡಿ ಬರುವ ಸಾಧ್ಯತೆ. ಉದ್ಯೋಗ ಬದಲಾವಣೆ ಆದೀತು. ಶುಭಸಂಖ್ಯೆ: 1

ಕಟಕ: ಸಹೋದ್ಯೋಗಿಗಳೊಂದಿಗೆ ಜಾಗರೂಕತೆಯಿಂದ ಇರಿ. ವಾಹನ ಚಾಲನೆಯಲ್ಲಿ ಎಚ್ಚರ. ಬಂಧುಗಳೊಂದಿಗೆ ಮನಸ್ತಾಪ. ಶುಭಸಂಖ್ಯೆ: 7

ಸಿಂಹ: ಉದ್ಯೋಗದಲ್ಲಿ ಹೆಚ್ಚಿನ ಪ್ರಶಂಸೆಗೆ ಭಾಜನರಾಗುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಬಂಧು ಮಿತ್ರರ ಸಮಾಗಮ. ಶುಭಸಂಖ್ಯೆ: 4

ಕನ್ಯಾ: ಕಚೇರಿಯಲ್ಲಿ ಹೊಂದಾಣಿಕೆಯಿಂದ ವರ್ತಿಸಿ. ಪತ್ನಿಯ ಸಹಕಾರದಿಂದ ಧನಾಗಮ. ಹಿರಿಯರ ಸಲಹೆ ಧಿಕ್ಕರಿಸದೆ ಪಾಲಿಸಿ. ಶುಭಸಂಖ್ಯೆ: 2

ತುಲಾ: ವೃತ್ತಿಯಲ್ಲಿ ಹೊಂದಾಣಿಕೆ ಇರುವುದು ಅವಶ್ಯಕ. ವಿಶೇಷ ವ್ಯಕ್ತಿಗಳ ಪರಿಚಯ. ಭೂ ವಿವಾದದಲ್ಲಿ ನಿಮ್ಮ ಪರ ತೀರ್ಪ. ಶುಭಸಂಖ್ಯೆ: 4

ವೃಶ್ಚಿಕ: ವ್ಯಾಪಾರದಲ್ಲಿ ಏರುಪೇರು. ಕುಟುಂಬದಲ್ಲಿ ಉತ್ಸಾಹ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಹಿತಶತ್ರುಗಳ ಬಗ್ಗೆ ಜಾಗೃತರಾಗಿರಿ. ಶುಭಸಂಖ್ಯೆ: 6

ಧನುಸ್ಸು: ಚಿನ್ನಾಭರಣ ಖರೀದಿಸುವ ಸಾಧ್ಯತೆ. ಹಿರಿಯರ ಆರೋಗ್ಯದ ಬಗ್ಗೆ ನಿಗಾ ವಹಿಸಿ. ಪ್ರಮುಖ ವಿಷಯದಲ್ಲಿ ಸ್ನೇಹಿತರ ಸಹಕಾರ. ಶುಭಸಂಖ್ಯೆ: 2

ಮಕರ: ಚಿನ್ನಾಭರಣ ವ್ಯಾಪಾರಿಗಳಿಗೆ ಮೋಸ ಹೋಗುವ ಸಾಧ್ಯತೆ. ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿ. ತಾಳ್ಮೆ ಕಳೆದುಕೊಳ್ಳಬೇಡಿ. ಶುಭಸಂಖ್ಯೆ: 1

ಕುಂಭ: ವರ್ತನೆಯಲ್ಲಿ ಸಹಜತೆ ಇರಲಿ. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಆತ್ಮವಿಶ್ವಾಸಕ್ಕೆ ಆಘಾತ. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 8

ಮೀನ: ದಿನನಿತ್ಯದ ಜಂಜಡದಿಂದ ಏಕಾಂತಕ್ಕೆ. ಇಷ್ಟ ದೇವರನ್ನು ಪ್ರಾರ್ಥಿಸಿ. ಸ್ನೇಹಿತರ ಜತೆ ಸಂತೋಷಕೂಟ. ಸಂಜೆ ಆಯಾಸ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net