ನಿತ್ಯಭವಿಷ್ಯ| ಈ ರಾಶಿಯವರಿಗೆ ಬಲೆ ಬೀಸಲಿದ್ದಾರೆ ಅನ್ಯಲಿಂಗಿಗಳು!

Nithya Bhavishya
Published on

ಮೇಷ: ನೀವು ನ್ಯಾಯೋಚಿತವಾದ ದಾರಿಯಲ್ಲಿಯೇ ಇದ್ದೀರಿ ಎಂಬುದು ನಿಜವಾದರೂ ಕೋಪದ ಪ್ರತಿಕ್ರಿಯೆ ನೀಡುವುದು ಬೇಡ. ಶುಭಸಂಖ್ಯೆ: 3

ವೃಷಭ: ಶೈಕ್ಷಣಿಕ ಸಂಸ್ಥೆಗಳನ್ನು ಮುನ್ನಡೆಸುವ ಸಂಕಲ್ಪವುಳ್ಳವರಿಗೆ ಹೆಚ್ಚಿನ ಹೊಣೆಗಾರಿಕೆ ಎದುರಾಗಲಿದೆ. ಜಾಗ್ರತೆ ಇರಲಿ. ಶುಭಸಂಖ್ಯೆ: 2

ಮಿಥುನ: ಥಟ್ಟನೆ ಕೆಲಸವನ್ನು ಬಿಡಲು ಮುಂದಾಗದಿರಿ. ಇನ್ನೂ ಉತ್ತಮ ಅವಕಾಶ ಸಿಕ್ಕರೆ ಮಾತ್ರ ಕೆಲಸವನ್ನು ಬದಲಿಸಬಹುದು. ಶುಭಸಂಖ್ಯೆ: 5

ಕಟಕ: ನೀವು ನಿಷ್ಠುರರಾಗಿದ್ದರೂ ಈ ಸಂದರ್ಭದಲ್ಲಿ ನಯ ವಿನಯ ತೋರುವುದು ಅತ್ಯಗತ್ಯ. ಸರಿಯಾಗಿ ಪ್ರತಿಸ್ಪಂದಿಸಿ. ಶುಭಸಂಖ್ಯೆ: 8

ಸಿಂಹ: ಎಲ್ಲರೂ ನಿಮ್ಮನ್ನು ಶತ್ರುಗಳಂತೆ ಕಾಣುತ್ತಾರೆ. ಈ ದುರ್ಭರ ಪರಿಸ್ಥಿತಿಯಲ್ಲಿ ನಿಮ್ಮದಾದ ವಿವೇಕ ಇರಲಿ. ಶುಭಸಂಖ್ಯೆ: 1

ಕನ್ಯಾ: ಅನ್ಯಲಿಂಗಿಗಳ ಬಲೆಯಲ್ಲಿ ಸಿಲುಕಬಹುದು. ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರುವುದೇ ನಿಮ್ಮ ಪಾಲಿಗೆ ಒಳಿತು. ಶುಭಸಂಖ್ಯೆ: 6

ತುಲಾ: ಕೆಲಸದಲ್ಲಿ ನಿಮ್ಮ ತೊಡಗುವಿಕೆಯನ್ನು ಮೇಲಧಿಕಾರಿಗಳು ಗಮನಿಸುವುದರಿಂದ ವಿಶೇಷವಾದ ಪ್ರಶಂಸೆ ಲಭ್ಯ. ಶುಭಸಂಖ್ಯೆ: 9

ವೃಶ್ಚಿಕ: ಲಕ್ಷ್ಮೀನೃಸಿಂಹನ ಆರಾಧನೆಯಿಂದ ಕುಟಿಲ ಜನರ ವಿರುದಟಛಿ ಕೈಗೊಂಡ ಹೋರಾಟದಲ್ಲಿ ಗೆಲುವು ಸಾಧಿಸಲು ಸಾಧ್ಯ. ಶುಭಸಂಖ್ಯೆ: 7

ಧನುಸ್ಸು: ಕೆಲವರು ನಿಮ್ಮನ್ನು ಎಂದೂ ಕೈಬಿಡಲಾರರು. ಅಂಥ ಉತ್ತಮ ಸ್ನೇಹಿತರ ಸದ್ಗುಣಗಳು ನಿಮಗಿಂದು ತಿಳಿದುಬರಲಿವೆ. ಶುಭಸಂಖ್ಯೆ: 4

ಮಕರ: ವಿದ್ಯಾದೇವತೆಯ ಆರಾಧನೆಯಿಂದ ಸಕಾರಾತ್ಮಕ ಚಿಂತನೆಗಳಿಗೆ ಬೇಕಾಗಿರುವ ಅನುಭವದ್ರವ್ಯ ಒದಗಲಿದೆ. ಶುಭಸಂಖ್ಯೆ: 3

ಕುಂಭ: ಹಲವು ದಿನಗಳಿಂದ ಕಾಡುತ್ತಿದ್ದ ಜಟಿಲ ಪ್ರಶ್ನೆಗಳಿಂದ ಮುಕ್ತಿ ಸಿಗಲಿದೆ. ಬಾಳಿನಲ್ಲಿ ಹೊಸ ಉತ್ಸಾಹ ಹೊಮ್ಮಲಿದೆ. ಶುಭಸಂಖ್ಯೆ: 2

ಮೀನ: ಹತ್ತಿರದ ನೆಂಟರ ಕಿರಿಕಿರಿ ಇದ್ದೇ ಇರುತ್ತದೆ. ಜಾಣ್ಮೆಯಿಂದಲೇ ಅವರ ಸಾಮೀಪ್ಯವನ್ನು ತಪ್ಪಿಸಿಕೊಂಡು ನಿರಾಳವಾಗಿರಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net