ನಿತ್ಯಭವಿಷ್ಯ| ಈ ರಾಶಿಯವರ ದೂರ ಪ್ರವಾಸ ಕಾರ್ಯಕ್ರಮ ಇಂದು ರದ್ದಾಗಲಿದೆ..

Nitya-Bhavishya-vvani-1-2-1
Published on

ಮೇಷ: ದೂರದ ಪ್ರವಾಸ ಕಾರ್ಯಕ್ರಮವೊಂದು ದಿಢೀರೆಂದು ರದ್ದಾಗುವಂಥ ಸಾಧ್ಯತೆಯಿದೆ. ಈ ಬಗ್ಗೆ ಏನೂ ಬೇಸರಿಸದಿರಿ. ಶುಭಸಂಖ್ಯೆ: 5

ವೃಷಭ: ಖರ್ಚಿಗಾಗಿ ಹತ್ತೆಂಟು ರೀತಿಯ ದಾರಿಗಳು ಎದುರು ಬರುತ್ತಲೇ ಇರುತ್ತವೆ. ಆದರೂ ಜಾಣ್ಮೆಯಿಂದ ನಿರ್ವಹಿಸಿ. ಶುಭಸಂಖ್ಯೆ: 2

ಮಿಥುನ: ಕಾರ್ಯಸಾಧನೆಗಾಗಿ ತಾಳ್ಮೆಯೇ ಉತ್ತಮವಾದ ಅಡಿಪಾಯ ಹಾಕಿಕೊಡಲಿದೆ. ಇದು ದೊಡ್ಡ ಲಾಭಕ್ಕೂ ಅವಕಾಶ ನೀಡಲಿದೆ. ಶುಭಸಂಖ್ಯೆ: 9

ಕಟಕ: ಆರೋಗ್ಯವೇ ಭಾಗ್ಯ ಎಂಬುದನ್ನು ಸರಿಯಾಗಿ ಅರಿತುಕೊಂಡಿದ್ದೀರಿ. ಅದನ್ನು ಕಾರ್ಯರೂಪಕ್ಕೆ ತರುವುದೂ ಪ್ರಮುಖವಾಗಲಿ. ಶುಭಸಂಖ್ಯೆ: 6

ಸಿಂಹ : ವಿಘ್ನಸಂತೋಷಿಗಳು ನಿಮಗೆ ದುಃಖವನ್ನು ಉಂಟುಮಾಡುತ್ತಾರೆ. ಉದ್ವೇಗದಲ್ಲಿ ಯಾವ ನಿರ್ಧಾರವನ್ನೂ ಕೈಗೊಳ್ಳದಿರಿ. ಶುಭಸಂಖ್ಯೆ: 3

ಕನ್ಯಾ: ಮಕ್ಕಳು ಮನೆಯಲ್ಲಿ ಕೆಲವು ಬಗೆಯ ಮಾನಸಿಕ ಒತ್ತಡಗಳನ್ನು ತಂದಿಡಬಹುದು. ಅವರನ್ನು ನಯವಾಗಿಯೇ ನಿಯಂತ್ರಿಸಿ. ಶುಭಸಂಖ್ಯೆ: 7

ತುಲಾ: ಅವಸರದಲ್ಲಿ ಬೇಡದ ಮಾತುಗಳನ್ನು ಆಡುವ ಸಂದರ್ಭ ಬರಬಹುದು. ಮೌನವಾಗಿರುವುದೇ ಸದ್ಯ ಉತ್ತಮ ಆಯ್ಕೆಯಾಗಿದೆ. ಶುಭಸಂಖ್ಯೆ: 4

ವೃಶ್ಚಿಕ: ಉತ್ತಮ ಜನರಿಂದ ವಿಶೇಷವಾದ ಬೆಂಬಲವೇ ಒದಗಿಬರಲಿದೆ. ಆದರೆ ನಕಾರಾತ್ಮಕವಾದ ಧೋರಣೆಗಳನ್ನು ಬಿಟ್ಟುಬಿಡಿ. ಶುಭಸಂಖ್ಯೆ: 1

ಧನುಸ್ಸು: ಮನೆಯ ವಾತಾವರಣದೊಳಗೇ ಅಸಮಾಧಾನ ಹೊಗೆಯಾಡಬಹುದು. ಅದನ್ನು ನಿವಾರಿಸುವ ಜವಾಬ್ದಾರಿಯನ್ನೂ ತೋರಿಸಿ. ಶುಭಸಂಖ್ಯೆ: 8

ಮಕರ: ನೀವು ಸಾಹಸ ಪ್ರವೃತ್ತಿಯುಳ್ಳವರು. ಅದನ್ನು ಮರೆತು ಹಿಂದೆಯೇ ಉಳಿದುಬಿಡಬೇಡಿ. ಆದರೆ ಅತಿ ಅವಸರವೂ ಸದ್ಯ ಬೇಡ. ಶುಭಸಂಖ್ಯೆ: 5

ಕುಂಭ: ನಾನಾ ಕಡೆಗಳಿಂದ ಪ್ರಶಂಸೆಗಳು ಬರುವಂತಹ ಶುಭಯೋಗವಿದೆ. ಕಾರ್ಯಕ್ಷಮತೆಯ ಜತೆಜತೆಗೆ ಉತ್ಸಾಹವೂ ಇದ್ದೇ ಇರಲಿ. ಶುಭಸಂಖ್ಯೆ: 2

ಮೀನ: ಹೊಸದಾದ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗುವ ಕಾಲ ಇದು. ಸಾವಧಾನವಾಗಿ ಜಾಣತನದ ಹೆಜ್ಜೆಗಳನ್ನು ಇಡಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net