ಈ ರಾಶಿಯವರಿಗಿಂದು ಧನಾಗಮದಿಂದ ಕಾರ್ಯಾನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪ್ರಯತ್ನಬಲ ಎಷ್ಟಿದ್ದರೂ, ಹತ್ತಿರದವರಲ್ಲಿಸಹಾಯ ಕೇಳುವುದು ಅನಿವಾರ್ಯ. ಧಾನ್ಯ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 9

ವೃಷಭ: ಮೇಲಧಿಕಾರಿಗಳಿಂದ ನೀವು ಅಪೇಕ್ಷಿಸುವ ಸಹಕಾರ ದೊರೆಯಲಿದೆ. ರಾಜಕೀಯದಲ್ಲಿ ವಿಶೇಷ ಪ್ರಭಾವ ಗಳಿಸಿಕೊಳ್ಳುವಿರಿ. ಶುಭಸಂಖ್ಯೆ: 6

ಮಿಥುನ: ಅನವಶ್ಯಕ ಮಾತು ಬೇಡ. ವಿದ್ಯುನ್ಮಾನ ಸಿಬ್ಬಂದಿ ಗಳಿಗೆ ಲಾಭ. ನಿಮ್ಮ ಮೇಲೆ ಸಹೋದ್ಯೋಗಿಗಳ ವಿಶ್ವಾಸ ಹೆಚ್ಚಲಿದೆ. ಶುಭಸಂಖ್ಯೆ: 4

ಕಟಕ: ಹಳೆಯ ಯೋಜನೆಗಳಿಗೆ ಮರು ಜೀವ ಕೊಡಲು ನಿಶ್ಚಯಿಸುವಿರಿ. ಆದರೆ ಮನೆಯವರಿಂದ ವಿರೋಧ ವ್ಯಕ್ತವಾಗಬಹುದು. ಶುಭಸಂಖ್ಯೆ: 9

ಸಿಂಹ: ತಪ್ಪುಗಳಿಗೆ ನೇರ ಹೊಣೆಗಾರಿಕೆ ನಿಮ್ಮದಾಗಿರುತ್ತದೆ. ಹಲವು ದಿನಗಳಿಂದ ಇರುವ ಋಣಬಾಧೆಗೆ ಅಂತ್ಯ ಕಾಣಿಸುವ ಕಾಲ. ಶುಭಸಂಖ್ಯೆ: 2

ಕನ್ಯಾ: ವೃತ್ತಿಯಲ್ಲಿ ಸುಸಂದರ್ಭಗಳು ಎದುರಾಗಬಹುದು. ಜೀವನದಲ್ಲಿ ಹಣಕ್ಕಿಂತ ಸ್ನೇಹ ಸಂಬಂಧಗಳು ಮುಖ್ಯ ಎಂದು ತಿಳಿಯಿರಿ. ಶುಭಸಂಖ್ಯೆ:5

ತುಲಾ: ಬದುಕಿನ ಶುಭ ದಿನಗಳು ಪ್ರಾರಂಭವಾಗುವ ಲಕ್ಷಣ. ಸಂಸಾರದಲ್ಲಿ ನೆಮ್ಮದಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ. ಶುಭಸಂಖ್ಯೆ: 8

ವೃಶ್ಚಿಕ: ವೃತ್ತಿರಂಗದಲ್ಲಿ ಮುಂದಿನ ಹೆಜ್ಜೆ ಇಡುವಿರಿ. ರಾಜಕೀಯ ವ್ಯಕ್ತಿಗಳಿಗೆ ಬಿಡುವಿಲ್ಲದ ಓಡಾಟ. ಧನಾಗಮದಿಂದ ಕಾರ್ಯಾನುಕೂಲ. ಶುಭಸಂಖ್ಯೆ:3

ಧನುಸ್ಸು: ಬದುಕನ್ನು ಅರ್ಥಪೂರ್ಣವಾಗಿಸುವ ಬಗ್ಗೆ ಯೋಚನೆಗಳಿರಲಿ. ವಿವಾಹ ಭಾಗ್ಯ ಒದಗಿ ಬರಲಿದೆ. ವಾಹನ ಖರೀದಿ ಯೋಗವಿದೆ. ಶುಭಸಂಖ್ಯೆ: 7

ಮಕರ: ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಿರಿ. ಕೆಲಸದಲ್ಲಿನ ಅಡೆತಡೆ ನಿವಾರಣೆ. ಶುಭಸಂಖ್ಯೆ: 4

ಕುಂಭ: ಜವಾಬ್ದಾರಿಯುತ ನಡೆ. ಪ್ರವಾಸಿಗರಿಂದ ಸಂಪಾದನೆ. ಸಂಸಾರದಲ್ಲಿ ಬದಲಾವಣೆ ಒಪ್ಪಿಕೊಳ್ಳುವುದು ಅನಿವಾರ್ಯ. ಶುಭ ಸಂಖ್ಯೆ 6

ಮೀನ: ರಾಜಕಾರಣಿಗಳಿಗೆ ಮನಗೆಲ್ಲುವ ಸದವಕಾಶ. ಋಣಬಾಧೆಯಿಂದ ಮುಕ್ತಿ. ಪುಣ್ಯಕ್ಷೇತ್ರಗಳ ಸಂದರ್ಶನ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net