

ಮೇಷ: ಸಾರ್ವಜನಿಕ ವ್ಯವಹಾರದಲ್ಲಿ ಮುನ್ನಡೆ. ಮಹಿಳೆಯರಿಗೆ ಎಲ್ಲೆಡೆಯಿಂದ ನಿರೀಕ್ಷಿತ ಬೆಂಬಲ ಪ್ರಾಪ್ತಿ. ಅಮೂಲ್ಯ ವಸ್ತು ಖರೀದಿ. ಶುಭಸಂಖ್ಯೆ: 8
ವೃಷಭ: ಆಧ್ಯಾತ್ಮಿಕ ಚಿಂತನೆಯಿಂದ ತೃಪ್ತಿ. ಕುಟುಂಬದೊಂದಿಗೆ ಸಂಬಂಧ ವೃದ್ಧಿ. ಅನಿರೀಕ್ಷಿತ ಪ್ರಯಾಣ. ಗುರುಹಿರಿಯರ ಭೇಟಿ. ಶುಭಸಂಖ್ಯೆ: 1
ಮಿಥುನ: ಎಲ್ಲಾ ಕೆಲಸಗಳಲ್ಲಿ ಯಶ. ನಿಮ್ಮ ವಿಚಾರಲಹರಿಗೆ ಸಾರ್ವಜನಿಕವಾಗಿ ಮನ್ನಣೆ. ದುಡುಕಬೇಡಿ. ಆರ್ಥಿಕ ಸಂಕಷ್ಟ ಪರಿಹಾರ. ಶುಭಸಂಖ್ಯೆ: 2
ಕಟಕ: ನಿರುದ್ಯೋಗಿಗಳಿಗೆ ಉದ್ಯೋಗದ ಪ್ರಯತ್ನದಲ್ಲಿ ಸಫಲತೆ. ಕಳೆದುಹೋದ ವಸ್ತು ಸಿಗುವ ಸಾಧ್ಯತೆ. ಕೃಷಿಕರಿಗೆ ಸಹಾಯ ಪ್ರಾಪ್ತಿ. ಶುಭಸಂಖ್ಯೆ: 7
ಸಿಂಹ: ಭೂ ವ್ಯವಹಾರದಲ್ಲಿ ಧನಲಾಭ. ಆಧ್ಯಾತ್ಮಿಕ ಚಿಂತನೆಯಿಂದ ಸಮಾಧಾನ. ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ. ಶುಭಸಂಖ್ಯೆ: 5
ಕನ್ಯಾ: ಮಹಿಳೆಯರಿಗೆ ವಿಶೇಷ ದಿನ. ಉದ್ಯೋಗದಲ್ಲಿನ ಸಮಸ್ಯೆಗಳಿಗೆ ಪರಿಹಾರ. ನ್ಯಾಯಾಲಯದ ವ್ಯಾಜ್ಯಗಳಲ್ಲಿ ಪ್ರಗತಿ. ಶುಭಸಂಖ್ಯೆ: 3
ತುಲಾ: ಸಹೋದ್ಯೋಗಿಗಳ ಭಿನ್ನಾಭಿಪ್ರಾಯ ದೂರ ಮಾಡುವಲ್ಲಿ ಪ್ರಮುಖ ಪಾತ್ರ. ಉತ್ತಮ ದಾಂಪತ್ಯ ಜೀವನ. ಮಿತ್ರರಿಂದ ಸಹಕಾರ. ಶುಭಸಂಖ್ಯೆ: 6
ವೃಶ್ಚಿಕ: ಸಮಸ್ಯೆಗಳಿಂದ ಮುಕ್ತಿ. ಉತ್ತಮ ಪ್ರಗತಿ. ಪ್ರತಿಭಾನ್ವಿತರಿಗೆ ಯಶಸ್ಸು ಪ್ರಾಪ್ತಿ. ಕುಟುಂಬದಲ್ಲಿ ಶುಭ ಸಮಾರಂಭಕ್ಕೆ ಚಾಲನೆ. ಶುಭಸಂಖ್ಯೆ: 6
ಧನುಸ್ಸು: ಕುಟುಂಬದ ಸ್ಪಂದನೆಯಿಂದ ಸಂತೃಪ್ತಿ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಆರೋಗ್ಯ ಸಮಸ್ಯೆಯಿಂದ ಮುಕ್ತಿ. ಶುಭಸಂಖ್ಯೆ: 9
ಮಕರ: ಮಿತ್ರರಿಂದ ಧನಲಾಭ. ಗೃಹ ನಿರ್ವಣದಲ್ಲಿ ಯಶ. ಸಂಗಾತಿಯ ಅಪೇಕ್ಷೆ ಈಡೇರಿಕೆ. ಪ್ರಿಯ ವ್ಯಕ್ತಿಗಳ ಆಗಮನದಿಂದ ಸಂತಸ. ಶುಭಸಂಖ್ಯೆ: 4
ಕುಂಭ: ಮೇಲಧಿಕಾರಿಗಳ ಪ್ರೀತಿಗೆ ಪಾತ್ರರಾಗುವಿರಿ. ಮನರಂಜನೆಗಾಗಿ ವ್ಯಯ. ಸ್ವಉದ್ಯೋಗಿಗಳಿಗೆ ಲಾಭ. ಭೂಮಿಯಿಂದ ಭಾಗ್ಯ. ಶುಭಸಂಖ್ಯೆ: 5
ಮೀನ: ಅಪರಿಚಿತರಿಂದ ಸಹಾಯ. ಕಲಾವಿದರಿಗೆ ಪುರಸ್ಕಾರ. ಅನಿರೀಕ್ಷಿತ ಮೂಲದಿಂದ ಧನಾಗಮ. ನಿರುದ್ಯೋಗಿಗಳಿಗೆ ಉದ್ಯೋಗ. ಶುಭಸಂಖ್ಯೆ: 6