ಈ ರಾಶಿಯವರು ಇಂದು ಸಂಗಾತಿಯ ಸಲಹೆ ಪರಿಗಣಿಸಿ: ನಿತ್ಯಭವಿಷ್ಯ

Nithya Bhavishya vvani
Published on

ಮೇಷ: ಮನಸ್ಸಿಗೆ ಸಮಾಧಾನವೆನಿಸುವ ಘಟನೆಗಳು ಜರುಗುತ್ತವೆ. ಮನೆಯಲ್ಲಿ ಶುಭ ಕೆಲಸಕ್ಕೆ ಚಾಲನೆ. ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 9

ವೃಷಭ: ಮುದ ನೀಡುವ ಚಟುವಟಿಕೆ. ಬಡವರಿಗೆ ಸಹಾಯ ಮಾಡಿ. ಗುರು ಸನ್ನಿಧಿಗೆ ಭೇಟಿ. ಮದುವೆೆ ನಿರೀಕ್ಷಿಸುತ್ತಿದ್ದವರಿಗೆ ಯಶ. ಶುಭಸಂಖ್ಯೆ: 7

ಮಿಥುನ: ಬಂಧುಗಳೊಂದಿಗೆ ಪ್ರವಾಸ. ನನೆಗುದಿಯಲ್ಲಿದ್ದ ಗೃಹ ನಿರ್ವಣಕ್ಕೆ ಚಾಲನೆ. ಸ್ನೇಹಿತರು ಸಲಹೆ ಕೊಡುತ್ತಾರೆ, ಸ್ವೀಕರಿಸಿ. ಶುಭಸಂಖ್ಯೆ: 2

ಕಟಕ: ಆತ್ಮವಿಶ್ವಾಸಕ್ಕೆ ಧಕ್ಕೆ . ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ. ಬಂಧುಗಳ ಆಗಮನ. ಶುಭ ಸಮಾರಂಭದಲ್ಲಿ ಭಾಗಿ. ಶುಭಸಂಖ್ಯೆ: 8

ಸಿಂಹ: ಹಣ ನಷ್ಟವಾಗಬಹುದು, ಎಚ್ಚರ. ಗೃಹ ನಿರ್ವಣಕ್ಕೆ ಚಾಲನೆ ದೊರೆಯುವುದು. ಆತ್ಮೀಯ ಸ್ನೇಹಿತನ ಆಗಮನ. ಶುಭಸಂಖ್ಯೆ: 4

ಕನ್ಯಾ: ಸ್ವಂತ ಉದ್ಯೋಗ ಮಾಡುವವರಿಗೆ ವಿಶೇಷ ದಿನ. ಗಾಯಕರಿಗೆ ವಿಶೇಷ ಧನಲಾಭ. ಹಳೆಯ ಸ್ನೇಹಿತನ ಭೇಟಿಯಿಂದ ಸಂತಸ. ಶುಭಸಂಖ್ಯೆ: 4

ತುಲಾ: ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಸೋದರರೊಂದಿಗೆ ವಾಗ್ವಾದ. ಸಂಗಾತಿಯ ಸಲಹೆ ಪರಿಗಣಿಸಿ. ಸಂಜೆ ಶುಭ. ಶುಭಸಂಖ್ಯೆ: 7

ವೃಶ್ಚಿಕ: ಭೂ ವಿವಾದ ವಿಷಯದಲ್ಲಿ ಹಿರಿಯರ ಮಾರ್ಗದರ್ಶನ ತೆಗೆದುಕೊಳ್ಳಿ. ಕೃಷಿಕರಿಗೆ ಶುಭ. ಪ್ರತಿಭಾನ್ವಿತರಿಗೆ ಉತ್ತಮ ಅವಕಾಶ.ಶುಭಸಂಖ್ಯೆ: 5

ಧನುಸ್ಸು: ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣದ ಕೊರತೆ ಕಾಡಬಹುದು. ವ್ಯಾಪಾರದಲ್ಲಿ ಲಾಭ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 6

ಮಕರ: ಮಾತಿನಲ್ಲಿ ಜಾಗ್ರತೆ. ಶತ್ರುಗಳು ಸೃಷ್ಟಿಯಾದಾರು. ಸಾರ್ವಜನಿಕ ರಂಗದಲ್ಲಿದ್ದರೆ ವಿಶೇಷ ಮನ್ನಣೆ. ಬಂಧುಗಳ ಭೇಟಿ. ಶುಭಸಂಖ್ಯೆ: 4

ಕುಂಭ: ಕೂಡಿಟ್ಟ ಹಣದ ವಿನಿಯೋಗ. ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ. ಧಾರ್ವಿುಕ ಕ್ಷೇತ್ರಕ್ಕೆ ಭೇಟಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 5

ಮೀನ: ನಿರೀಕ್ಷೆಯಲ್ಲಿದ್ದ ಕೆಲಸದಲ್ಲಿ ಪ್ರಗತಿ. ಬಂಧುಗಳ ಆಗಮನ. ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net