

ಮೇಷ: ಸುಲಭದಲ್ಲಿ ಆಗದು, ಕಷ್ಟವಾಗುತ್ತದೆ ಎಂದು ತಿಳಿದಿದ್ದರೂ ಮುಖ್ಯ ಕೆಲಸಕ್ಕೆ ಕೈ ಹಾಕುವ ಸಾಧ್ಯತೆ ಜಾಸ್ತಿ ಇದೆ. ಅದೃಷ್ಟಸಂಖ್ಯೆ: 4
ವೃಷಭ: ಮಾಡಿದ ಪ್ರತಿ ಕೆಲಸಕ್ಕೂ ನಿಮ್ಮಿಂದ ಸ್ಪಷ್ಟೀಕರಣ ಕೇಳುವ ಸಾಧ್ಯತೆ ಇದೆ. ನಿಮಗೂ ಉತ್ತರಿಸಿ ಸಾಕಾಗಬಹುದು. ಅದೃಷ್ಟಸಂಖ್ಯೆ: 7
ಮಿಥುನ: ಸಮಯಾವಕಾಶದ ಕೊರತೆ, ಒತ್ತಡಗಳಿಂದ ತಪ್ಪಿ ಹೋಗಿದ್ದ ಓದುವ ಹವ್ಯಾಸಕ್ಕೆ ಇಂದು ಅವಕಾಶ ಸಿಗುತ್ತದೆ. ಅದೃಷ್ಟಸಂಖ್ಯೆ: 5
ಕಟಕ: ಹರ್ಷದಿಂದ ಇರುವಂತೆ ತೋರಿಸಿಕೊಳ್ಳಲು ಯತ್ನಿಸುತ್ತೀರಿ. ನೀವು ಮುಚ್ಚಿಡುತ್ತಿರುವುದು ಎಲ್ಲ ಗಮನಿಸುವಂತಿದೆ. ಅದೃಷ್ಟಸಂಖ್ಯೆ: 9
ಸಿಂಹ: ಸ್ನೇಹಿತನ ನಡೆ ಅನುಮಾನಕ್ಕೆ ಈಡು ಮಾಡುತ್ತದೆ. ಬಹಳ ಪ್ರಶ್ನೆಗಳು ಎದ್ದರೂ ನೀವೇ ನೇರ ಏನೂ ಕೇಳಲಾರಿರಿ. ಅದೃಷ್ಟಸಂಖ್ಯೆ: 7
ಕನ್ಯಾ: ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಸದ್ಯದ ಸ್ಥಿತಿಗೆ ಸಮಾಧಾನಕರ ಸಾಧನೆ ಮಾಡುತ್ತೀರಿ. ಬೇಸರ ಬೇಡ. ಅದೃಷ್ಟಸಂಖ್ಯೆ: 3
ತುಲಾ: ಆಗದು ಎಂದು ಕೈಕಟ್ಟಿ ಕೂರುವವರಲ್ಲ ಎಂದು ಎಲ್ಲರಿಗೂ ಅರ್ಥವಾಗುವಂತೆ ನಿಮ್ಮ ಕಾರ್ಯವೈಖರಿ ಇರುತ್ತದೆ. ಅದೃಷ್ಟಸಂಖ್ಯೆ: 5
ವೃಶ್ಚಿಕ: ನಿಮ್ಮನ್ನು ಬೇಸರಗೊಳಿಸಿದವರು ಖಂಡಿತ ಸ್ಪಷ್ಟೀಕರಣ ನೀಡುತ್ತಾರೆ. ಸುಮ್ಮನೆ ವ್ಯಥೆಪಟ್ಟು ಪ್ರಯೋಜನವಿಲ್ಲ. ಅದೃಷ್ಟಸಂಖ್ಯೆ: 2
ಧನಸ್ಸು: ತ್ವರಿತಗತಿಯಲ್ಲಿ ಕೆಲಸ ಮುಗಿಸಲು ಪ್ರಯತ್ನಿಸುತ್ತೀರಿ. ಆ ಗಡಿಬಿಡಿಯಲ್ಲಿ ಯಾವುದೇ ತಪ್ಪಾಗದಂತೆ ಎಚ್ಚರವಿರಲಿ. ಅದೃಷ್ಟಸಂಖ್ಯೆ: 1
ಮಕರ: ಸ್ನೇಹಿತನಲ್ಲಿ ಇರುವ ವ್ಯಾಪಾರಿ ಬುದ್ಧಿಯನ್ನು ಕಂಡು ನೀವೇ ಹೆಚ್ಚು ಚಿಂತೆ ಮಾಡುವಿರಿ. ನೀವೇ ಬದಲಾಗಬೇಕು ಅಷ್ಟೇ. ಅದೃಷ್ಟಸಂಖ್ಯೆ: 6
ಕುಂಭ: ನಿಮ್ಮ ನಂಬಿಕೆಗಳನ್ನು ತೀರ ಹತ್ತಿರದವರೇ ದುರುಪಯೋಗ ಮಾಡಿ ತಮ್ಮ ಕಾರ್ಯಸಾಧನೆ ಮಾಡಿಕೊಂಡು ಬಿಡುತ್ತಾರೆ. ಅದೃಷ್ಟಸಂಖ್ಯೆ: 7
ಮೀನ: ನಿಮಗೆ ವಿಧಿಸಿದ ನಿಯಮಗಳನ್ನು ಮುರಿಯುವ ಸಾಧ್ಯತೆ ಬಹಳ. ಇದರಿಂದಾಗಿ ನಿಮ್ಮವರಿಗೂ ತೊಂದರೆಯಾದೀತು. ಎಚ್ಚರ. ಅದೃಷ್ಟಸಂಖ್ಯೆ: 3