

ಮೇಷ: ಬದುಕಿನಲ್ಲಿನ ಶ್ರೇಷ್ಠ ವಿಚಾರಗಳು, ವಸ್ತುಗಳೆಲ್ಲ ನಿಮಗೆ ಲಭ್ಯವಾಗಲಿವೆ. ಆದರೆ ಯಾರು ಏನು ಟೀಕಿಸಿದರೂ ಕೆರಳಬೇಡಿ. ಶುಭಸಂಖ್ಯೆ: 9
ವೃಷಭ: ಮಾತಿನ ಚಾತುರ್ಯದಿಂದ ಉದ್ಯಮದಲ್ಲಿ ಸಹಪಾಲುದಾರರನ್ನು ಪಡೆದುಕೊಳ್ಳುವ ಅವಕಾಶವೊಂದು ಸಿಗಲಿದೆ. ಶುಭಸಂಖ್ಯೆ: 8
ಮಿಥುನ: ಕೆಲಸಗಳಲ್ಲಿ ಪಾರದರ್ಶಕವಾಗಿರುವ ನಿಮ್ಮ ಮನೋಭಾವದಿಂದ ಪರರಿಗೆ ಮಾದರಿ ಆಗಿದ್ದೀರಿ. ಲಾಭ ಹೆಚ್ಚಲಿದೆ. ಶುಭಸಂಖ್ಯೆ: 6
ಕಟಕ: ವೃತ್ತಿರಂಗದಲ್ಲಿ ಹೊಸದೇ ಆದ ಹೊಣೆಗಾರಿಕೆ ಹೆಗಲಿಗೆ ಏರಬಹುದು. ಆದರೂ ಹೆದರದಿರಿ. ಮನ್ನಣೆಯೂ ಒದಗಿಬರಲಿದೆ. ಶುಭಸಂಖ್ಯೆ: 7
ಸಿಂಹ: ಹಿರಿಯರ ಜತೆಗೆ ವಾದ ಮಾಡುವಂತಹ ಸಂದರ್ಭ ಬರಬಹುದು. ಶಾಂತವಾಗಿರಿ. ನಿಮಗೇ ಅಂತಿಮ ಲಾಭವಿದೆ. ಶುಭಸಂಖ್ಯೆ: 5
ಕನ್ಯಾ: ನಿರ್ಲಕ್ಷ್ಯದ ಮನೋಭಾವನೆ ಹೊಂದಿರಬೇಡಿ. ಅಂಥವರು ಸಿಕ್ಕಿದರೂ ದೂರವೇ ಇಟ್ಟುಬಿಡಿ. ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ಶುಭಸಂಖ್ಯೆ: 4
ತುಲಾ: ಅನಿರೀಕ್ಷಿತವಾಗಿ ಹೊಸ ಜವಾಬ್ದಾರಿಯನ್ನು ನಿಭಾಯಿಸುವ ಪ್ರಸಂಗ ಬರಬಹುದು. ತಾಳ್ಮೆಯನ್ನು ಪ್ರದರ್ಶಿಸಿ. ಶುಭಸಂಖ್ಯೆ: 1
ವೃಶ್ಚಿಕ: ವೈಯಕ್ತಿಕ ವಿಚಾರದಲ್ಲಿ ಪ್ರಮುಖವಾದ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಅವುಗಳಿಗೆ ಸಫಲತೆ ಸಿದ್ಧಿಸಲಿದೆ. ಶುಭಸಂಖ್ಯೆ: 2
ಧನುಸ್ಸು: ಯಾರು ಯೋಗ್ಯರು, ಯಾರು ಅಯೋಗ್ಯರು ಎಂಬುದನ್ನು ಗುರುತಿಸಲು ಸಾಧ್ಯವಾಗದು. ಶ್ರೀ ಗಣೇಶನನ್ನು ಸ್ತುತಿಸಿ. ಶುಭಸಂಖ್ಯೆ: 3
ಕುಂಭ: ಸ್ಪರ್ಧಾತ್ಮಕ ಕಾರ್ಯಗಳಲ್ಲಿ ಸಾಫಲ್ಯವನ್ನು ಕಾಣುವ ಅದೃಷ್ಟವಿದೆ. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲೂ ಶುಭವಿದೆ. ಶುಭಸಂಖ್ಯೆ: 7
ಮಕರ: ಉತ್ತಮ ಕಾರ್ಯಯೋಜನೆಗಳಿಗೆ ಸಿದ್ಧತೆ ಮಾಡುತ್ತಿರುವಿರಿ. ಕುಲದೇವತಾನುಗ್ರಹದಿಂದ ಯಶಸ್ಸನ್ನೇ ಪಡೆಯುವಿರಿ. ಶುಭಸಂಖ್ಯೆ: 9
ಮೀನ: ದಿಢೀರ್ ಧನಸಂಪಾದನೆಯ ಬಗ್ಗೆ ಆಸೆ ಮೂಡಿಸುವವರು ಗಂಟುಬಿದ್ದಾರು. ಅತಿ ಆಸೆಯನ್ನು ನಿಯಂತ್ರಿಸಿ. ಶುಭಸಂಖ್ಯೆ: 8