

ಮೇಷ: ಬೆಟ್ಟ ನಿಮ್ಮ ಕಡೆ ಬರದು. ನೀವೇ ಬೆಟ್ಟದತ್ತ ಸಾಗಬೇಕು. ಹಿರಿಯರ ಬಳಿ ನಿಮ್ಮ ಸಮಸ್ಯೆಗೆ ಉತ್ತರವನ್ನು ಪಡೆದುಕೊಳ್ಳಿ. ಶುಭಸಂಖ್ಯೆ: 5
ವೃಷಭ: ಹೂವಿನ ಬೆಳೆಗಾರರು, ಹೈನೋದ್ಯಮಿಗಳಿಗೆ ಲಾಭವಿದ್ದರೂ, ಮಧ್ಯವರ್ತಿಗಳಿಂದ ತುಸು ಕಿರಿಕಿರಿಯೇ ಉಂಟಾಗಲಿದೆ. ಶುಭಸಂಖ್ಯೆ: 2
ಮಿಥುನ: ಶ್ರೀ ದುರ್ಗಾದೇವಿಯ ಕೃಪೆಯಿಂದ ವಿಶೇಷ ಸಾಮರ್ಥ್ಯ ಪಡೆಯುವಿರಿ. ಪರಿಶ್ರಮಕ್ಕೆ ತಕ್ಕ ಸಿದ್ಧಿ ದೊರೆಯಲಿದೆ. ಶುಭಸಂಖ್ಯೆ: 6
ಕಟಕ: ಎಲ್ಲರನ್ನೂ ನಂಬಬೇಕು ಎಂದಲ್ಲ. ಅದು ಮುಖ್ಯವಲ್ಲ. ಎಲ್ಲರೊಡನೆ ನಿರಾಳರಾಗಿರಿ. ಅದರಿಂದ ನೆಮ್ಮದಿಯಿದೆ. ಶುಭಸಂಖ್ಯೆ: 9
ಸಿಂಹ: ಸಣ್ಣ ಪ್ರವಾಸದ ಪಟ್ಟಿಯೊಂದು ನಿಮಗೆ ಎದುರಾಗಬಹುದು. ನಿಶ್ಚಿತ ಯೋಜನೆ, ಸಿದ್ಧತೆಗಳೊಡನೆ ಸನ್ನದ್ಧರಾಗಿ. ಶುಭಸಂಖ್ಯೆ: 4
ಕನ್ಯಾ: ದಾರಿಯಲ್ಲಿನ ಕಗ್ಗಂಟುಗಳು ನಿಮಗೆ ಕಿರಿಕಿರಿ ಉಂಟುಮಾಡುತ್ತವೆ. ಗೆಳೆಯರಿಂದ ಪರಿಹಾರ ಸಿಗಬಹುದಾಗಿದೆ. ಶುಭಸಂಖ್ಯೆ: 1
ತುಲಾ: ಹಕ್ಕಿಯಂತೆ ಹಾರಾಡುವ ಆಸೆಯೇನೂ ತಪ್ಪಲ್ಲ. ಆದರೆ ಸಾಧಕಬಾಧಕಗಳನ್ನು ಯೋಚಿಸಿ ಹೆಜ್ಜೆ ಇಟ್ಟರೆ ಕ್ಷೇಮ. ಶುಭಸಂಖ್ಯೆ: 7
ವೃಶ್ಚಿಕ: ಕಷ್ಟದ ಸಂದರ್ಭದಲ್ಲಿ ನೀವು ರೂಪಿಸುವ ಕಾರ್ಯತಂತ್ರಗಳು ಸಂತೋಷದ ಜತೆ ಖ್ಯಾತಿಯನ್ನೂ ತರಲಿವೆ. ಶುಭಸಂಖ್ಯೆ: 3
ಧನಸ್ಸು: ಮೇಲಧಿಕಾರಿಗಳ ವಿರುದ್ಧ ಮಾತನಾಡಲು ಹೋಗಬೇಡಿ. ತಗ್ಗಿಬಗ್ಗಿ ನಡೆಯುವುದೇ ಸದ್ಯಕ್ಕೆ ಪ್ರಮುಖವಾಗಿರಲಿ. ಶುಭಸಂಖ್ಯೆ: 2
ಮಕರ: ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿದ ವ್ಯಕ್ತಿಗಳಿಗೆ ಮನ್ನಣೆ ಲಭ್ಯ. ಮಾತಿನಲ್ಲಿನ ಗಾಂಭೀರ್ಯವನ್ನು ಬಿಡದಿರಿ. ಶುಭಸಂಖ್ಯೆ: 8
ಕುಂಭ: ಒರಟಾಗಿ ವರ್ತಿಸುವ ವಾಚಾಳಿ ಸ್ನೇಹಿತರನ್ನು ದೂರವೇ ಇಟ್ಟುಬಿಡಿ. ಅವರಿಂದ ನಿಮಗೆ ತೊಂದರೆಯೇ ಅಧಿಕ. ಶುಭಸಂಖ್ಯೆ: 5
ಮೀನ: ಎಲ್ಲರನ್ನೂ ನಂಬುವ ನಿಮ್ಮ ದೌರ್ಬಲ್ಯದಿಂದ ತೊಂದರೆ ಉಂಟಾದೀತು. ಶ್ರೀ ರಾಹುಗ್ರಹ ಸ್ತೋತ್ರವನ್ನು ಪಠಣ ಮಾಡಿ. ಶುಭಸಂಖ್ಯೆ: 2