ಈ ರಾಶಿಯವರು ಇಂದು ದ್ವಿಚಕ್ರ ವಾಹನ ಸಂಚಾರ ಮಾಡಬೇಡಿ

Nitya-Bhavishya-vvani-1-2-1
Published on

ಮೇಷ: ಅತಿ ಆಸೆ ಗತಿಗೇಡು ಎಂಬುದು ನೆನಪಿರಲಿ. ನಿಮಗೆ ಅರಿವಿಲ್ಲದೆ ಅತಿ ಆಸೆ ಬಹಳವಾಗಿ ಕಾಡುತ್ತದೆ. ಎಚ್ಚರ. ಅದೃಷ್ಟಸಂಖ್ಯೆ: 7

ವೃಷಭ: ನಿಧಾನವೇ ಪ್ರಧಾನ ಗಾದೆ ಎಲ್ಲ ಕಾಲದಲ್ಲೂ ಅನ್ವಯಿಸದು. ಎಲ್ಲರೂ ನಿಮಗಿಂತ ಮುಂದೆ ಇರುತ್ತಾರೆ. ಅದೃಷ್ಟಸಂಖ್ಯೆ: 5

ಮಿಥುನ: ಬೇರೆಯವರು ಎಚ್ಚರಿಕೆಯ ಮಾತು ಹೇಳಬಹುದು. ಅದನ್ನು ಕೇಳದೆ ಹಠ ಮಾಡಿ ನಷ್ಟ ಹೊಂದುತ್ತೀರಿ. ಅದೃಷ್ಟಸಂಖ್ಯೆ: 3

ಕಟಕ: ಮನೆಯ ಸಂತೋಷದ ಸಂದರ್ಭದಲ್ಲಿ ನಿಮ್ಮ ಇರುವಿಕೆಯು ಹೆಚ್ಚಿನ ಸಂತಸವನ್ನು ಉಂಟುಮಾಡಲಿದೆ. ಅದೃಷ್ಟಸಂಖ್ಯೆ: 1

ಸಿಂಹ: ಹೆಚ್ಚಿನ ದೈಹಿಕ ಶ್ರಮಪಡಬೇಕಾದ ಅಗತ್ಯ ಇರುವುದಿಲ್ಲ. ನಿಮ್ಮ ಸಹಾಯಕ್ಕೆ ಜನ ಸುಲಭದಲ್ಲಿ ಸಿಗುತ್ತಾರೆ. ಅದೃಷ್ಟಸಂಖ್ಯೆ: 4

ಕನ್ಯಾ: ನೀವು ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದೂ ಹಾಲು ಅನ್ನ ಎಂಬಂತಾಗಲಿದೆ. ಆಸೆ ನೆರವೇರಲಿದೆ. ಅದೃಷ್ಟಸಂಖ್ಯೆ: 9

ತುಲಾ: ಅನಿವಾರ್ಯತೆ ಇಲ್ಲವಾದರೆ ದ್ವಿಚಕ್ರ ವಾಹನ ಸಂಚಾರ ಬೇಡ. ಸಂಚಾರ ಮಾಡುವುದಾದಲ್ಲಿ ಸ್ವಲ್ಪ ಜಾಗ್ರತೆ ಇರಲಿ. ಅದೃಷ್ಟಸಂಖ್ಯೆ: 2

ವೃಶ್ಚಿಕ: ಅವಿಶ್ರಾಂತವಾಗಿ ದುಡಿಯುತ್ತಿರುವ ನಿಮಗೆ ಅಕಸ್ಮಾತ್ತಾಗಿ ವಿಶ್ರಾಂತಿಯನ್ನು ಪಡೆಯಲು ಸಮಯ ಸಿಗುತ್ತದೆ. ಅದೃಷ್ಟಸಂಖ್ಯೆ: 5

ಧನಸ್ಸು: ನಿಮ್ಮ ನಗಿಸಲು ಹಲವರು ಪ್ರಯತ್ನಿಸುತ್ತಾರೆ. ನಗುವುದು ಆರೋಗ್ಯಕ್ಕೆ ಉತ್ತಮ ಎಂಬುದು ನೆನಪಿರಲಿ. ಅದೃಷ್ಟಸಂಖ್ಯೆ: 5

ಮಕರ: ರಾತ್ರಿ ಕಂಡ ಹಳ್ಳಕ್ಕೆ ಹಗಲಿನಲ್ಲಿ ಬೀಳುವ ಅವಸರ ಮಾಡದಿರಿ. ಇದರಿಂದ ನಷ್ಟವಾಗುವ ಸಾಧ್ಯತೆಗಳು ಹೆಚ್ಚಿವೆ. ಅದೃಷ್ಟಸಂಖ್ಯೆ: 7

ಕುಂಭ: ನಿಮ್ಮ ಕೆಲಸದ ಬಗ್ಗೆ ಮಾತ್ರ ಚಿಂತಿಸುತ್ತೀರಿ. ಇತರ ವ್ಯಕ್ತಿಗಳ ಕೆಲಸದ ಬಗ್ಗೆಯೂ ಯೋಚಿಸಿ. ಲಾಭವಿದೆ. ಅದೃಷ್ಟಸಂಖ್ಯೆ: 4

ಮೀನ: ಎಲ್ಲ ವಿಚಾರಗಳಲ್ಲಿಯೂ ನನಗೆಷ್ಟು ಲಾಭ ಎಂದೇ ಯೋಚಿಸುತ್ತಿರುತ್ತೀರಿ. ಹೀಗಾದರೆ ನಷ್ಟವೇ ಹೆಚ್ಚಾದೀತು. ಅದೃಷ್ಟಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net