ನಿತ್ಯ ಭವಿಷ್ಯ: ವೃತ್ತಿಪರತೆಯ ಕಾರಣ ನಿಮ್ಮನ್ನು ಹೊಗಳಿ ಇನ್ನಷ್ಟು ಕೆಲಸಗಳನ್ನು ಮಾಡಿಸಲಾಗುತ್ತದೆ

Nitya-Bhavishya-vvani-1-2-1
Published on

ಮೇಷ: ಬ್ಯಾಂಕ್ ವ್ಯವಹಾರ ಮಾಡುವಾಗ ಎಚ್ಚರದಿಂ ದಿರಿ. ಚಿಕ್ಕ ತಪ್ಪೊಂದು ದೊಡ್ಡ ಎಡವಟ್ಟಿಗೆ ಕಾರಣವಾದೀತು. ಅದೃಷ್ಟ ಸಂಖ್ಯೆ: 7

ವೃಷಭ: ನಿಮ್ಮಲ್ಲಿಲ್ಲದ ವಸ್ತುವೊಂದು ಇದೆ ಎಂದು ಹೇಳಿ ಸಂಜೆಯೊಳಗೆ ಪೇಚಿಗೆ ಸಿಲುಕುವ ಸಾಧ್ಯತೆ ಹೆಚ್ಚು ಇದೆ. ಅದೃಷ್ಟ ಸಂಖ್ಯೆ: 3

ಮಿಥುನ: ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಗಾದೆಮಾತಿನ ಅಂತರಾರ್ಥ ನಿಮಗೆ ಸ್ಪಷ್ಟವಾಗಿ ಅರಿವಾಗಲಿದೆ. ಅದೃಷ್ಟ ಸಂಖ್ಯೆ: 1

ಕಟಕ: ಬಹಳ ಪ್ರಶ್ನೆ ಕೇಳುತ್ತೀರಿ. ಉತ್ತರಿಸಲಾಗದ ಜನ ನಿಮ್ಮಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಅದೃಷ್ಟ ಸಂಖ್ಯೆ: 5

ಸಿಂಹ: ವೃತ್ತಿಪರತೆಯ ಕಾರಣ ನಿಮ್ಮನ್ನು ಹೊಗಳಿ ಇನ್ನಷ್ಟು ಕೆಲಸಗಳನ್ನು ಮಾಡಿಸಲಾಗುತ್ತದೆ. ಇದು ಗಮನದಲ್ಲಿರಲಿ. ಅದೃಷ್ಟ ಸಂಖ್ಯೆ: 9

ಕನ್ಯಾ: ಬೆಳಗ್ಗೆ ಕಾಣೆಯಾದ ವಸ್ತುವೊಂದು ನಿಮಗೆ ಬೇಸರ ತರಿಸಿ ಸಂಜೆ ಮರಳಿ ಸಿಕ್ಕು ನೆಮ್ಮದಿ ಮೂಡಿಸುತ್ತದೆ. ಅದೃಷ್ಟ ಸಂಖ್ಯೆ: 2

ತುಲಾ: ಮಾಡಿದ ತಪ್ಪನ್ನು ಬೇಗ ಒಪ್ಪಿಕೊಂಡಲ್ಲಿ ಒಳಿತು. ಇಲ್ಲವಾದರೆ ರಾತ್ರಿಯ ಹೊತ್ತಿಗೆ ಪರಿಸ್ಥಿತಿ ಹದಗೆಟ್ಟೀತು. ಅದೃಷ್ಟ ಸಂಖ್ಯೆ: 3

ವೃಶ್ಚಿಕ: ಒತ್ತಾಯ ಮಾಡಿ ಒಂದು ಜಾಗಕ್ಕೆ ನಿಮ್ಮನ್ನು ಕರೆದೊಯ್ಯುತ್ತಾರೆ. ಆದರೆ ಅಲ್ಲಿಗೆ ಹೋಗಿ ಸಂತಸಪಡುವಿರಿ. ಅದೃಷ್ಟ ಸಂಖ್ಯೆ: 6

ಧನಸ್ಸು: ಸಾಕಾಗದು, ಇನ್ನೂ ಬೇಕು ಎಂದು ಹೇಳುತ್ತ ಅತಿ ಮಾಡಿಕೊಂಡು ನೀವೇ ಹಾಳು ಮಾಡಿಕೊಳ್ಳುವಿರಿ. ಅದೃಷ್ಟ ಸಂಖ್ಯೆ: 1

ಮಕರ: ಆಲಸ್ಯವನ್ನು ಬಿಟ್ಟು ಕೆಲಸ ಮಾಡಿ. ಸಂಜೆಯೊಳಗಾಗಿ ಉತ್ತಮ ಅವಕಾಶವೊಂದು ಎದುರಾಗುತ್ತದೆ. ಅದೃಷ್ಟ ಸಂಖ್ಯೆ: 5

ಕುಂಭ: ಜಾಗ್ರತೆಯನ್ನು ಹೊಂದಿರುವುದು ಮುಖ್ಯ. ಕಾರಣ ನಿಮಗೆ ಅರಿವಿಲ್ಲದೆ ಬಹುವಾಗಿ ಅಹಂಕಾರ ಆವರಿಸಲಿದೆ. ಅದೃಷ್ಟ ಸಂಖ್ಯೆ: 4

ಮೀನ: ಔಷಧೋಪಚಾರಗಳಿಗೆ ಹೆಚ್ಚು ಖರ್ಚುಗಳು ಉಂಟಾಗಬಹುದು. ಆ ಬಗ್ಗೆ ಹೆಚ್ಚಿನ ಚಿಂತೆ ಬೇಡ. ಆವಶ್ಯಕತೆ ನೋಡಿ. ಅದೃಷ್ಟ ಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net