

ಮೇಷ: ಮನೆಯಲ್ಲಿ ಅನುಕೂಲಕರ ವಾತಾವರಣವೇ
ಇದ್ದರೂ ದೂರದ ಬಂಧುಗಳ ಆಗಮನದಿಂದ
ತುಸು ಮಟ್ಟಿನ ಕಿರಿಕಿರಿ ಆಗಲಿದೆ. ಶುಭಸಂಖ್ಯೆ: 1
ವೃಷಭ: ಬರುವ ಆದಾಯದ ಪ್ರಮಾಣದಲ್ಲಿ ಏರಿಕೆ
ಉಂಟಾಗುವ ಹೊಸ ಕಾರ್ಯಯೋಜನೆಗಳಿಗೆ
ಚಾಲನೆ ದೊರೆಯಲಿದೆ. ಶುಭಸಂಖ್ಯೆ: 8
ಮಿಥುನ: ದಿಢೀರ್ ದುಡ್ಡು ಸಂಪಾದಿಸುವ ಋಣಾತ್ಮಕ
ದಾರಿಗಳ ಕಡೆಗೆ ಆಸಕ್ತಿ ತೋರಿಸಬೇಡಿ.
ತುಸು ಜಾಗ್ರತೆ ಇರಲಿ. ಶುಭಸಂಖ್ಯೆ: 9
ಕಟಕ: ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದ
ವಿಚಾರಗಳ ಬಗ್ಗೆ ಕಾರ್ಯೋನ್ಮುಖರಾಗಿ
ಮನ್ನಣೆಯನ್ನು ಗಳಿಸುವಿರಿ. ಶುಭಸಂಖ್ಯೆ: 2
ಸಿಂಹ: ಸಂಗಾತಿಯ ಜತೆಗೆ ಭಿನ್ನಾಭಿಪ್ರಾಯಗಳು
ತಲೆದೋರುವ ಸಾಧ್ಯತೆಗಳು ಹೆಚ್ಚಾಗಿವೆ.
ಸಾಧ್ಯವಾದಷ್ಟು ತಾಳ್ಮೆ ಇರಲಿ. ಶುಭಸಂಖ್ಯೆ: 6
ಕನ್ಯಾ: ಹಲ್ಲುನೋವು ಅಥವಾ ಹೊಟ್ಟೆನೋವಿನಿಂದಾಗಿ
ಚಿಂತೆಪಡುವ ಹಾಗಾದೀತು. ತಜ್ಞ ವೈದ್ಯರ
ಮಾರ್ಗದರ್ಶನ ಪಡೆಯಿರಿ. ಶುಭಸಂಖ್ಯೆ: 7
ತುಲಾ: ನಿಮ್ಮ ಧೈರ್ಯ, ಸಾಹಸಗಳಿಂದಾಗಿ
ಒಳಿತಿನ ವಿಚಾರಗಳಿಗೆ ಯೋಗ್ಯವಾದ ದೊಡ್ಡ
ದಾರಿಯೇ ಕಾಣಸಿಗಲಿದೆ. ಶುಭಸಂಖ್ಯೆ: 4
ವೃಶ್ಚಿಕ: ಕೆಲಸದ ಸ್ಥಳದಲ್ಲಿ ನೀವು ಸಕಾರಾತ್ಮಕ
ಯೋಚನೆಗಳಿಂದ ಯಶಸ್ಸನ್ನು ಪಡೆಯುವಿರಿ.
ಹಿರಿಯರ ಮೆಚ್ಚುಗೆಯಿದೆ. ಶುಭಸಂಖ್ಯೆ: 3
ಧನುಸ್ಸು: ವಿನೂತನ ಕಾರ್ಯವಿಧಾನಗಳಿಂದ ನಿಮಗೆ
ಪ್ರಶಂಸೆ, ಲಾಭಗಳೆಲ್ಲ ಕೈಗೂಡಿ ಬರಲಿವೆ.
ಶನಿದೇವನನ್ನು ಸ್ತುತಿಸಿ. ಶುಭಸಂಖ್ಯೆ: 5
ಮಕರ: ಅತಿ ಆದರ್ಶಗಳನ್ನು ಪಾಲಿಸುವ ನಿಮ್ಮ
ಸಜ್ಜನಿಕೆಯನ್ನು ಜನ ದುರುಪಯೋಗ
ಮಾಡಿಕೊಂಡಾರು. ಜಾಗ್ರತೆ. ಶುಭಸಂಖ್ಯೆ: 9
ಕುಂಭ: ಯಾರನ್ನೂ ಲಘುವಾಗಿ ಭಾವಿಸದಿರಿ.
ಇದರಿಂದ ನಿಮ್ಮ ಸಂಕಲ್ಪಕ್ಕೆ ವಿಶೇಷ
ಮಹತ್ವವೊಂದು ಒದಗಲಿದೆ. ಶುಭಸಂಖ್ಯೆ: 1
ಮೀನ: ಅನೇಕ ಸಮಸ್ಯೆಗಳನ್ನು ಬಹು ಬೇಗನೆ
ನಿಮ್ಮ ಚಾತುರ್ಯದಿಂದ ನಿವಾರಿಸಿ ಯಶಸ್ಸನ್ನು
ಪಡೆದುಕೊಳ್ಳಲಿದ್ದೀರಿ. ಶುಭಸಂಖ್ಯೆ: 8