

ಮೇಷ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಮನೋಸ್ಥೈರ್ಯ ದ್ವಿಗುಣ. ಹಣ್ಣು ಮತ್ತು ತರಕಾರಿ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 8 (Daily Horoscope 09th Oct 2024)
ವೃಷಭ: ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಏಳಿಗೆ. ತಲೆನೋವಿನ ಸಮಸ್ಯೆ. ವೈದ್ಯಕೀಯ ಕ್ಷೇತ್ರದ ಉದ್ಯೋಗಿಗಳಿಗೆ ಅಧಿಕ ಒತ್ತಡ. ಶುಭಸಂಖ್ಯೆ:8
ಮಿಥುನ: ಮಾನಸಿಕ ವೇದನೆ ಉಂಟಾಗುವುದು. ಪತ್ರ ವ್ಯವಹಾರಗಳಲ್ಲಿ ಯಶಸ್ಸು. ಉದ್ಯೋಗದಲ್ಲಿ ಬಡ್ತಿ ಮತ್ತು ಅನುಕೂಲ ಒದಗಿಬರಲಿದೆ. ಶುಭಸಂಖ್ಯೆ: 6
ಕಟಕ: ಅನಾರೋಗ್ಯದ ಹಿನ್ನೆಲೆಯಲ್ಲಿ ಅವಕಾಶ ಕೈ ತಪ್ಪಲಿದೆ. ದಾಂಪತ್ಯದ ವಿರಸಕ್ಕೆ ಸಮಾಧಾನವೇ ಔಷಧ. ಪ್ರಯಾಣದಲ್ಲಿ ಅನನುಕೂಲ.ಶುಭಸಂಖ್ಯೆ: 6
ಸಿಂಹ: ಸಂಗಾತಿಗೆ ಕೆಡುಕಾಗುವ ಸಂಭವ. ಹಣಕಾಸಿನ ತೊಂದರೆ ನಿವಾರಣೆಯಾಗಿ ಮಾನಸಿಕ ನೆಮ್ಮದಿ. ವಿದ್ಯೆಯಿಂದ ಮಾನಸನ್ಮಾನ. ಶುಭಸಂಖ್ಯೆ: 1
ಕನ್ಯಾ: ಮೋಜಿಗಾಗಿ ಅಧಿಕ ಖರ್ಚು ಬೇಡ. ಮಹಿಳೆಯರಿಗೆ ಆರ್ಥಿಕವಾಗಿ ಹಿನ್ನಡೆಯಾದೀತು. ಮಿತ್ರರೊಂದಿಗೆ ಮನಸ್ತಾಪ ಸಾಧ್ಯತೆ. ಶುಭಸಂಖ್ಯೆ:3
ತುಲಾ: ಕೌಟುಂಬಿಕ ಸಾಮರಸ್ಯಕ್ಕೆ ಶುಭಾರಂಭ. ಷೆೇರು ಮಾರುಕಟ್ಟೆ ವ್ಯವಹಾರದಲ್ಲಿಎಚ್ಚರ. ಭೂ ವ್ಯವಹಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ:3
ವೃಶ್ಚಿಕ: ಕೆಲಸದಲ್ಲಿ ಬದಲಾವಣೆಗೆ ಯತ್ನಿಸುವಿರಿ. ಪಿತೃ ವರ್ಗದಿಂದ ಧನಸಹಾಯ ಸಿಗಲಿದೆ. ಕೆಲವು ಗೊಂದಲಗಳ ನಿವಾರಣೆ. ಶುಭಸಂಖ್ಯೆ: 9
ಧನಸ್ಸು: ಗುರಿ ಸಾಧನೆಗೆ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ವೈಯಕ್ತಿಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಬಂಧುಗಳಿಂದ ತೊಂದರೆ. ಶುಭಸಂಖ್ಯೆ: 3
ಮಕರ: ತಾಳ್ಮೆ ಇದ್ದಲ್ಲಿ ನಿರೀಕ್ಷಿತ ಫಲಿತಾಂಶ. ಯಂತ್ರೋಪಕರಣಗಳಿಂದ ತೊಂದರೆ. ಹತಾಶೆಯ ಭಾವನೆ ಕಾಡದಂತೆ ನೋಡಿಕೊಳ್ಳಿ. ಶುಭಸಂಖ್ಯೆ:7
ಕುಂಭ: ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಪರರ ಮಧ್ಯಸ್ಥಿಕೆಯಿಂದ ತೊಂದರೆ ನಿವಾರಣೆಯಾಗಲಿದೆ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ:8
ಮೀನ: ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ. ಸಾಲಬಾಧೆ ನಿವಾರಣೆಯಾಗುತ್ತದೆ. ಅಂದುಕೊಂಡ ಕೆಲಸಗಳು ಸಲೀಸಾಗಿ ನೆರವೇರಿ ಸಂತಸ. ಶುಭಸಂಖ್ಯೆ: 9