

ಮೇಷ: ಪರಿಶ್ರಮಕ್ಕೆ ತಕ್ಕ ಫಲ ಲಭಿಸುವುದು. ಕಾರ್ಯಸಾಧನೆ ಗಾಗಿ ತಿರುಗಾಟ. ದೇವತಾ ಕಾರ್ಯಗಳಲ್ಲಿ ಭಾಗಿ. ಮನಸ್ಸಿನಲ್ಲಿ ಗೊಂದಲ. ಶುಭಸಂಖ್ಯೆ: 5
ವೃಷಭ: ಅಧಿಕಾರಿಗಳಿಂದ ಪ್ರಶಂಸೆ. ಕೋರ್ಟು ವ್ಯವಹಾರಗಳಲ್ಲಿ ಜಯ ದೊರೆಯುವುದು. ಮಿತ್ರರಿಂದ ವಂಚನೆಯಾದೀತು, ಎಚ್ಚರ. ಶುಭಸಂಖ್ಯೆ: 9
ಮಿಥುನ: ಸ್ತ್ರೀಯರು ಈ ದಿನ ಹೆಚ್ಚು ತಾಳ್ಮೆಯಿಂದ ಇರುವುದು ಕ್ಷೇಮಕರ. ಮಗನಿಂದ ಶುಭ ವಾರ್ತೆ. ಪರಾಕ್ರಮದ ಕೆಲಸಗಳಲ್ಲಿ ಯಶಸ್ಸು. ಶುಭಸಂಖ್ಯೆ:1
ಕಟಕ: ಅಪರಿಚಿತರ ವಿಷಯದಲ್ಲಿ ಜಾಗ್ರತೆ ವಹಿಸಿ. ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಬಹುದು. ಕ್ರಯ ವಿಕ್ರಯಗಳಲ್ಲಿ ಲಾಭ. ಶುಭಸಂಖ್ಯೆ:7
ಸಿಂಹ: ವಿವಿಧ ಮೂಲಗಳಿಂದ ಧನಲಾಭ. ವೈರಿಗಳಿಂದ ದೂರವಿರಿ. ಉದಾಸೀನದಿಂದ ವಸ್ತುಗಳನ್ನು ಕಳೆದುಕೊಳ್ಳುವಿರಿ, ಹುಷಾರಾಗಿರಿ. ಶುಭಸಂಖ್ಯೆ: 3
ಕನ್ಯಾ: ಮಾತಾಪಿತರಲ್ಲಿ ವಾತ್ಸಲ್ಯ ತೋರಿಸಿ. ಕುಟುಂಬ ಸೌಖ್ಯ. ಕೃಷಿಯಲ್ಲಿ ಆದಾಯ. ವಿಪರೀತ ಕೋಪ ಬೇಡ. ನಾನಾ ರೀತಿಯ ಸಂಕಷ್ಟ. ಶುಭಸಂಖ್ಯೆ: 2
ತುಲಾ: ಅಧಿಕ ಕೆಲಸದಿಂದ ವಿಶ್ರಾಂತಿ ಸಿಗಲಿದೆ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ಬಡರೋಗಿಗಳಿಗೆ ಸಹಾಯ ಮಾಡುವುದು ಉತ್ತಮ ಕೆಲಸ. ಶುಭಸಂಖ್ಯೆ:9
ವೃಶ್ಚಿಕ: ಹಿತೈಷಿಗಳ ಸಲಹೆ ಪಡೆಯಿರಿ. ಹಣಕಾಸಿನ ಸಮಸ್ಯೆ ಎದುರಾಗುವುದು. ಸಲ್ಲದ ಅಪವಾದ. ಗೆಳೆಯರೊಂದಿಗೆ ಮೈಮನಸ್ಸು. ಶುಭಸಂಖ್ಯೆ: 4
ಧನುಸ್ಸು: ಯಂತ್ರೋಪಕರಣಗಳಿಂದ ಲಾಭ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಕಾರ್ಯಸಿದ್ಧಿಯಾಗುವುದು. ನಾನಾ ವಿಚಾರಗಳಲ್ಲಿ ಆಸಕ್ತಿ. ಶುಭಸಂಖ್ಯೆ: 8
ಮಕರ: ಅತಿಯಾದ ದೇಹಾಲಸ್ಯ. ಬಾಕಿ ಹಣ ಕೈಸೇರುವುದು. ಸುಖ ಭೋಜನ. ಷೇರು ವ್ಯವಹಾರಗಳಲ್ಲಿ ಎಚ್ಚರ. ಪರರಿಂದ ತೊಂದರೆ. ಶುಭಸಂಖ್ಯೆ:1
ಕುಂಭ: ಹಣ ಬಂದರೂ ಉಳಿಯುವುದಿಲ್ಲ. ಸ್ತ್ರೀಯರಿಂದ ಸಹಾಯ. ಚೋರಭಯವಿದೆ, ಎಚ್ಚರ. ಚಂಚಲ ಸ್ವಭಾವ ನಿಯಂತ್ರಿಸಿಕೊಳ್ಳಿ. ಶುಭಸಂಖ್ಯೆ: 6
ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಕೆಲಸ ಕಾರ್ಯಗಳಲ್ಲಿ ನಿಧಾನಗತಿ ಇರಲಿದೆ. ಕೃಷಿಯಲ್ಲಿ ಲಾಭ. ವಿದೇಶ ಪ್ರಯಾಣ ಮಾಡಬೇಕಾದೀತು. ಶುಭಸಂಖ್ಯೆ: 3