ನಿತ್ಯಭವಿಷ್ಯ: ಈ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿಯಾಗಲಿದೆ

Nitya-Bhavishya-vvani-1-2-1-1
Published on

ಮೇಷ: ಅಧ್ಯಯನಶೀಲರಿಗೆ ಉಲ್ಲಾಸ. ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು. ದಂಪತಿಗಳಿಂದ ಪರಸ್ಪರ ಜವಾಬ್ದಾರಿಯುತ ನಡೆ. ಶುಭಸಂಖ್ಯೆ: 8

ವೃಷಭ: ಮಿತ್ರರ ಸಮಾಗಮದಿಂದ ಸಂತೋಷ. ಪಾಲುದಾರಿಕಾ ಕ್ಷೇತ್ರದಲ್ಲಿ ಪ್ರಗತಿ. ಕೈತುಂಬ ವರಮಾನ. ಉನ್ನತ ಸ್ಥಾನಮಾನ ಲಭ್ಯ. ಶುಭಸಂಖ್ಯೆ: 1

ಮಿಥುನ: ಗಣ್ಯವ್ಯಕ್ತಿಗಳ ಸಂಪರ್ಕ. ವಿದ್ಯಾವಂತರೊಂದಿಗೆ ಸಮಾಲೋಚನೆ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ. ಶುಭಸಂಖ್ಯೆ: 2

ಕಟಕ: ದೂರ ಪ್ರಯಾಣ ಸಂಭವ. ಧಾರ್ವಿುಕ ವಿಚಾರಗಳಲ್ಲಿ ತಲ್ಲೀನತೆ. ಸ್ವಪ್ರಯತ್ನದ ಧನಾರ್ಜನೆ. ಗೃಹದಲ್ಲಿ ಸಂತಸ. ಶುಭಸಂಖ್ಯೆ: 4

ಸಿಂಹ: ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾರ್ಜನೆ. ದಾಂಪತ್ಯ ತೃಪ್ತಿಕರ.ಶುಭಸಂಖ್ಯೆ: 6

ಕನ್ಯಾ: ಎಲ್ಲ ವಿಚಾರಗಳಲ್ಲಿ ಅಭಿವೃದ್ಧಿ ಸಂಭವ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಅಭಿವೃದ್ಧಿ. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 7

ತುಲಾ: ಆರೋಗ್ಯ ವೃದ್ಧಿ. ಪ್ರಯಾಣ ಸಂಭವ. ದೇವತಾ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಮುನ್ನಡೆ. ಶುಭಸಂಖ್ಯೆ: 7

ವೃಶ್ಚಿಕ: ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಸಹನೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ. ಶುಭಸಂಖ್ಯೆ: 6

ಧನುಸ್ಸು: ಉದ್ಯೋಗ ವ್ಯವಹಾರಾದಿಗಳಲ್ಲಿ ಉತ್ತಮ ಪ್ರಗತಿ. ನಿರೀಕ್ಷೆಗೆ ಸರಿಯಾದ ಧನ ಸಂಪಾದನೆ. ನೂತನ ಮಿತ್ರರ ಭೇಟಿ. ಶುಭಸಂಖ್ಯೆ: 5

ಮಕರ: ಆರೋಗ್ಯ ವೃದ್ಧಿ. ಉದ್ಯೋಗ ನಿಮಿತ್ತ ದೂರ ಪ್ರಯಾಣ ಸಂಭವ. ಗೃಹೋಪಕರಣ ವಸ್ತು ಸಂಗ್ರಹ. ಅಧಿಕ ಧನಾರ್ಜನೆ. ಶುಭಸಂಖ್ಯೆ: 4

ಕುಂಭ: ಜನ ಮನ್ನಣೆ. ಸಂಕಲ್ಪಿಸಿದಂತೆ ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ. ಉತ್ತಮ ಸ್ಥಾನ. ಮಿತ್ರರಿಂದಲೂ ಗಣ್ಯರಿಂದಲೂ ಸಹಕಾರ. ಶುಭಸಂಖ್ಯೆ: 4

ಮೀನ: ಉತ್ತಮ ಧನಾರ್ಜನೆಗೆ ವಿಪುಲ ಅವಕಾಶ. ಸಾಂಸಾರಿಕ ಸುಖ ವೃದ್ಧಿ. ದೀರ್ಘ ಪ್ರಯಾಣ ಸಂಭವ. ಉದ್ಯೋಗದಲ್ಲಿ ಅಡಚಣೆ . ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net