

ಮೇಷ: ಕುಟುಂಬದಲ್ಲಿ ಕಲಹ ಸಾಧ್ಯತೆ. ವಾಹನ ಅಪಘಾತವಾಗುವ ಸಂಭವ. ಎಚ್ಚರದಿಂದಿರಿ. ಸಹೋದರರೊಂದಿಗೆ ಜಗಳ. ಶುಭಸಂಖ್ಯೆ: 1
ವೃಷಭ: ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಕಾರ್ಯನಿಮಿತ್ತ ಪ್ರಯಾಣ. ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಶುಭಸಂಖ್ಯೆ: 9
ಮಿಥುನ: ವೃತ್ತಿಯಲ್ಲಿ ಹಿತಶತ್ರುಗಳ ಕಾಟ ಅನುಭವಿಸಬೇಕಾಗ ಬಹುದು. ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ. ಋಣ ವಿಮೋಚನೆ. ಶುಭಸಂಖ್ಯೆ: 6
ಕಟಕ: ತೈಲ ಮಾರಾಟಗಾರರಿಗೆ ಶುಭ. ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬಂದೀತು. ಶುಭಸಂಖ್ಯೆ: 6
ಸಿಂಹ: ಸಹೋದ್ಯೋಗಿಗಳಿಂದ ತೊಂದರೆ. ಮಿತ್ರರ ಸಹಕಾರ ದೊರೆಯಲಿದೆ. ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ ಅಪೇಕ್ಷಣೀಯ. ಶುಭಸಂಖ್ಯೆ: 4
ಕನ್ಯಾ: ಭುಜದಲ್ಲಿ ಸಮಸ್ಯೆ ಕಾಣಿಸಬಹುದು. ಹಣ ಹೂಡಿಕೆ ಮಾಡಲು ಉತ್ತಮ ದಿನವಲ್ಲ. ಸ್ಥಿರಾಸ್ತಿ ಖರೀದಿಯ ಚಿಂತನೆ ಮಾಡುವಿರಿ. ಶುಭಸಂಖ್ಯೆ: 1
ತುಲಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಮನೆ ಬದಲಾವಣೆಯ ಮಾತುಕತೆ. ದಾಂಪತ್ಯದಲ್ಲಿ ಮನಸ್ತಾಪ. ಸಹನೆಯಿಂದ ಬಗೆಹರಿಸಿಕೊಳ್ಳಿ. ಶುಭಸಂಖ್ಯೆ: 3
ವೃಶ್ಚಿಕ: ಹಣದ ವಿಷಯದಲ್ಲಿ ನಿರಾಸೆ. ಆರೋಗ್ಯ ಸಮಸ್ಯೆ ಇನ್ನಷ್ಟು ಹೆಚ್ಚಬಹುದು. ಅಧಿಕ ಖರ್ಚು. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 6
ಧನುಸ್ಸು: ಆದಾಯಕ್ಕಿಂತ ಹೆಚ್ಚು ಖರ್ಚು ತಲೆದೋರಬಹುದು. ಮನಸ್ಸಿನಲ್ಲಿ ಅಶಾಂತಿ ಕಾಡಲಿದೆ. ಅಧಿಕಾರಿಗಳಿಗೆ ಹೆಚ್ಚು ಶ್ರಮ. ಶುಭಸಂಖ್ಯೆ: 7
ಮಕರ: ಮಾನಸಿಕ ಭಯ ಹೆಚ್ಚಲಿದೆ. ಸಹೋದರರಿಂದ ತೊಂದರೆಯಾಗುವ ಸಾಧ್ಯತೆ. ಸಣ್ಣಪುಟ್ಟ ಅಪಘಾತ ಆಗಬಹುದು ಹುಷಾರಾಗಿರಿ. ಶುಭಸಂಖ್ಯೆ: 5
ಕುಂಭ: ಉದ್ಯೋಗದಲ್ಲಿ ಪ್ರಗತಿಯಾಗುವುದು. ಪ್ರಯಾಣದಿಂದ ಅನಾನುಕೂಲ ಆಗಲಿದೆ. ಆಸ್ತಿ ಮಾರಾಟದಲ್ಲಿ ಹಿನ್ನಡೆಯಾಗಿ ಬೇಸರ. ಶುಭಸಂಖ್ಯೆ:1
ಮೀನ: ಪಾಲುದಾರಿಕೆಯಲ್ಲಿ ನಿರೀಕ್ಷಿತ ಆದಾಯ. ಸ್ಥಿರಾಸ್ತಿಯಿಂದ ಶುಭಯೋಗ ಫಲ. ಮಕ್ಕಳಿಂದ ಅನುಕೂಲ. ಕುಟುಂಬದಲ್ಲಿ ಶಾಂತಿ. ಶುಭಸಂಖ್ಯೆ: 9