

ಮೇಷ: ಆಸ್ತಿ ಸಂಬಂಧೀ ಕೆಲಸವನ್ನು ಶೀಘ್ರ ಮುಗಿಸಿ. ಧಾರ್ವಿುಕ ಕೆಲಸಗಾರರಿಗೆ ಶುಭ. ರಿಯಲ್ ಎಸ್ಟೇಟ್ನವರಿಗೆ ಸಾಧಾರಣ ಲಾಭ. ಶುಭಸಂಖ್ಯೆ:2
ವೃಷಭ: ಪ್ರತಿಫಲ ಸಿಗಲಿದೆ. ಮಾತಿನಿಂದ ಕಲಹ, ಇತರರ ಮೂಲಕ ಧನಹಾನಿ ಸೌಂದರ್ಯ ವರ್ಧಕ ಗಳ ಅಂಗಡಿಯವರಿಗೆ ಲಾಭ. ಶುಭಸಂಖ್ಯೆ:3
ಮಿಥುನ: ಕಚೇರಿಯಲ್ಲಿ ಸ್ವಾಭಿಮಾನದಿಂದ ವರ್ತಿಸಿ, ಮಹಿಳೆಯರಿಗೆ ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ, ವಾಹನ ಅಪಘಾತ ಸಾಧ್ಯತೆ. ಶುಭಸಂಖ್ಯೆ: 4
ಕಟಕ: ಬುದ್ಧಿವಂತಿಕೆಯಿಂದ ಧನ ನಷ್ಟ ನಿಯಂತ್ರಣ. ಹಿಡಿದ ಕೆಲಸ ಸಾಧಿಸಿದ ಸಮಾಧಾನ. ನಂಬಿಕಸ್ಥರಿಂದಲೇ ಮೋಸ ಹೋಗುವಿರಿ. ಶುಭಸಂಖ್ಯೆ: 8
ಸಿಂಹ: ಧಾರ್ವಿುಕ ವಿಚಾರಗಳಲ್ಲಿ ಆಸಕ್ತಿ. ಹಿರಿಯರಿಂದ ಸಹಾಯ. ಅವಿವಾಹಿತರಿಗೆ ವಿವಾಹ. ಕೋಪದಿಂದ ಕುಟುಂಬದಲ್ಲಿ ಬೇಸರ. ಶುಭಸಂಖ್ಯೆ:2
ಕನ್ಯಾ: ವ್ಯಾಪಾರದಲ್ಲಿ ನಿರೀಕ್ಷೆಯಂತೆ ಗೆಲುವು. ಆರೋಗ್ಯ ಸಮಸ್ಯೆ ಉಂಟಾಗಬಹುದು. ವಿದ್ಯಾರ್ಥಿಗಳಲ್ಲಿ ಗೊಂದಲ. ಏಕಾಗ್ರತೆ ಸಾಧಿಸಿ. ಶುಭಸಂಖ್ಯೆ: 9
ತುಲಾ: ಉನ್ನತ ವಿದ್ಯಾಭ್ಯಾಸದ ಕನಸು ಸಾಕಾರ. ವೆಚ್ಚಗಳ ಬಗ್ಗೆ ಗಮನಹರಿಸಿ. ದಾಯಾದಿಗಳಿಂದ ಅವಮಾನ.ಸೂಕ್ತ ಕಾಲಕ್ಕೆ ಕಾಯಿರಿ. ಶುಭಸಂಖ್ಯೆ:5
ವೃಶ್ಚಿಕ: ನೂತನ ನಿವೇಶನ ಖರೀದಿಗೆ ನಿರ್ಧಾರ. ಚಾಂಚಲ್ಯದಿಂದ ಅವಕಾಶ ವಂಚನೆ. ಮೋಸ ಹೋಗುವ ಸಾಧ್ಯತೆ. ಅನಾರೋಗ್ಯ. ಶುಭಸಂಖ್ಯೆ: 2
ಧನುಸ್ಸು: ಕಾರ್ಯಗಳಲ್ಲಿ ಮುನ್ನಡೆ. ಆದಾಯಕ್ಕಿಂತ ಹೆಚ್ಚು ಖರ್ಚು. ಮಗಳ ವಿವಾಹ ಪ್ರಯತ್ನದಲ್ಲಿ ನಿರಾಸೆ. ಕುಲದೇವರನ್ನು ಪೂಜಿಸಿ. ಶುಭಸಂಖ್ಯೆ: 7
ಮಕರ: ಪ್ರಭಾವಿ ವ್ಯಕ್ತಿಗಳೊಂದಿಗೆ ಮಾತುಕತೆ. ಬಂಧುಗಳಿಂದ ಸಲಹೆ. ಮಂಗಳ ಕಾರ್ಯಗಳಲ್ಲಿ ಭಾಗಿ. ಯಾರನ್ನೂ ನಂಬಬೇಡಿ. ಶುಭಸಂಖ್ಯೆ:6
ಕುಂಭ: ದಾನ ಧರ್ಮದಲ್ಲಿ ಆಸಕ್ತಿ ತೋರಿಸುವಿರಿ. ಕುಟುಂಬದಲ್ಲಿ ಆಸ್ತಿಕಲಹ. ಸುಖ ಭೋಜನ. ಹೋಟೆಲ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ:7
ಮೀನ: ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ. ಮನಸ್ಸಿನಲ್ಲಿ ಭಯಭೀತಿ. ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗುವುದು. ಧನಲಾಭ. ಶುಭಸಂಖ್ಯೆ: 1