ನಿತ್ಯ ಭವಿಷ್ಯ: ಈ ರಾಶಿಯವರಿಗೆ ಗೆಲುವಿನ ನಗೆ ಬೀರುವಂತಹ ಅದೃಷ್ಟ ಬರಲಿದೆ

Nitya-Bhavishya-vvani-1-2-1
Published on

ಮೇಷ: ತುಂಬಿದ ಕೊಡ ತುಳುಕುವುದಿಲ್ಲ ಎಂಬುದು ನಿಮಗೆ ಗೊತ್ತಿದೆ. ಇದನ್ನು ಮರೆಯದಿದ್ದರೆ ಪ್ರಗತಿಗೆ ದಾರಿ ಲಭ್ಯವಾಗಲಿದೆ. ಶುಭಸಂಖ್ಯೆ: 8

ವೃಷಭ: ಮನಸಿನ ಆಶೋತ್ತರಗಳು ಸಫಲತೆಯನ್ನು ಪಡೆಯಲಿವೆ. ಆದರೆ ನಿಮ್ಮ ಕ್ರಿಯಾಶೀಲತೆ ಅಗತ್ಯ. ಸಂಜೆ ಸುವಾರ್ತೆ ನಿಶ್ಚಿತ. ಶುಭಸಂಖ್ಯೆ: 6

ಮಿಥುನ: ರಕ್ತದೊತ್ತಡವು ನಿಯಂತ್ರಣವನ್ನು ತಪ್ಪೀತು. ಆರೋಗ್ಯದಲ್ಲಿನ ಚೇತರಿಕೆಗಾಗಿ ಧನ್ವಂತರೀ ಅಷ್ಟೋತ್ತರವನ್ನು ಪಠಣ ಮಾಡಿ. ಶುಭಸಂಖ್ಯೆ: 1

ಕಟಕ: ವ್ಯಾವಹಾರಿಕ ವಿಚಾರದಲ್ಲಿ ಅವಸರ ಮಾಡಬೇಡಿ. ಸಾವಧಾನದ ಹೆಜ್ಜೆಗಳಿಂದ ನೆಮ್ಮದಿಗೆ ನೆಲೆ ದೊರೆಯಲಿದೆ. ಶುಭಸಂಖ್ಯೆ: 7

ಸಿಂಹ: ಅವಿವಾಹಿತರಿಗೆ ಹಿರಿಯ ಮಹಿಳೆಯೊಬ್ಬರಿಂದ ಆಕಸ್ಮಿಕ ನೆರವು ಲಭ್ಯವಾಗಲಿದೆ. ಚಿಂತೆಯೂ ಬೇಗನೆ ದೂರವಾಗಲಿದೆ. ಶುಭಸಂಖ್ಯೆ: 9

ಕನ್ಯಾ: ಅಳು-ನಗುಗಳ ಮಿಶ್ರ ದಿನ. ಶ್ರೀಹರಿಯನ್ನು ಸ್ಮರಿಸುವುದರಿಂದ ವ್ಯವಹಾರಗಳಲ್ಲಿ ಜಯವಾಗಿ ಸಂತಸ ಹೆಚ್ಚಲಿದೆ. ಶುಭಸಂಖ್ಯೆ: 3

ತುಲಾ: ಉದ್ಯಮದಲ್ಲಿನ ಲಾಭಕ್ಕೆ ಅವಕಾಶಗಳ ಹೆದ್ದಾರಿಯೇ ತೆರೆಯಲಿದೆ. ಧನಲಕ್ಷ್ಮಿ ಸೋತ್ರವನ್ನು ಎಂಟು ಸಲ ಪಠಿಸಿ. ಶುಭಸಂಖ್ಯೆ: 4

ವೃಶ್ಚಿಕ: ಸಹೋದ್ಯೋಗಿಗಳ ಸಹಾಯವು ಸಿಕ್ಕಿದರೂ ನಿಮ್ಮತನ ಕಳೆದುಕೊಳ್ಳಬೇಡಿ. ಸಂಬಂಧಗಳಲ್ಲಿ ಜಾಗ್ರತೆ ಅತ್ಯಗತ್ಯವಾಗಿದೆ. ಶುಭಸಂಖ್ಯೆ: 2

ಧನುಸ್ಸು: ನಿಮ್ಮಲ್ಲಿನ ಪರಿಜ್ಞಾನದ ವಿಸ್ತಾರಕ್ಕೆ ಎಲ್ಲರೂ ಬೆರಗಾಗುತ್ತಾರೆ. ಇದು ಹೊಸ ಜವಾಬ್ದಾರಿಗಳಿಗೆ ಅವಕಾಶ ಮಾಡಿಕೊಡಲಿದೆ. ಶುಭಸಂಖ್ಯೆ: 5

ಮಕರ: ವಾಹನ ಓಡಿಸುವಾಗ ಎಚ್ಚರದಿಂದ ಇದ್ದರೆ ಉತ್ತಮ. ಪೂರ್ವಪುಣ್ಯದಿಂದ ಪ್ರಶಂಸೆಗೆ ಅವಕಾಶ ಸೃಷ್ಟಿಯಾಗಲಿದೆ. ಶುಭಸಂಖ್ಯೆ: 8

ಕುಂಭ: ಗೆಲುವಿನ ನಗೆ ಬೀರುವಂತಹ ಅದೃಷ್ಟ ನಿಮಗೆ ಬರಲಿದೆ. ಆದರೆ ವಿನಯ ಹಾಗೂ ಶಿಸ್ತುಗಳನ್ನು ಮಾತ್ರ ತಪ್ಪದೆ ಕಾಯ್ದುಕೊಳ್ಳಿ. ಶುಭಸಂಖ್ಯೆ: 6

ಮೀನ: ಅನ್ಯಲಿಂಗಿಗಳು ಮನಸ್ಸಿನ ನೆಮ್ಮದಿಯನ್ನು ಕೆಡಿಸಬಹುದು. ಎಚ್ಚರ. ತೇಜೋನಿಧಿಯಾದ ಸೂರ್ಯನನ್ನು ಸ್ತುತಿಸಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net