ಈ ರಾಶಿಯವರಿಗೆ ಸ್ನೇಹಿತರಿಂದ ಪ್ರಶಂಸೆಯ ಸುರಿಮಳೆ: ನಿತ್ಯ ಭವಿಷ್ಯ

Nithya Bhavishya vvani
Published on

ಮೇಷ: ಕಲಾವಿದರಿಗೆ ವಿಶೇಷ ದಿನ. ವ್ಯಾಪಾರಸ್ಥರಿಗೆ ಧನ ನಷ್ಟ. ಸಹೋದರಿಯರಿಂದ ಸಲಹೆ. ದಿನಾಂತ್ಯ ಸಂತೋಷದಾಯಕ. ಶುಭಸಂಖ್ಯೆ: 7

ವೃಷಭ: ಹಿತಶತ್ರುಗಳಿಂದ ತೊಂದರೆ. ನಂಬಿದವರೇ ಮೋಸ ಮಾಡಿ ನಕ್ಕಾರು! ಆಡಬೇಕಾದ ಮಾತಿನ ಬಗ್ಗೆ ವಿವೇಚನೆ ಇರಲಿ. ಶುಭಸಂಖ್ಯೆ: 6

ಮಿಥುನ: ಮಕ್ಕಳಿಂದ ಸಮಸ್ಯೆ ಬರಬಹುದು. ಸಮಾಧಾನ ಚಿತ್ತದಿಂದ ನಿಭಾಯಿಸಿ. ಅನವಶ್ಯಕ ವಾಗ್ವಾದಗಳಿಗೆ ಆಸ್ಪದ ಬೇಡ. ಶುಭಸಂಖ್ಯೆ: 8

ಕಟಕ: ಆತ್ಮೀಯರೊಂದಿಗೆ ಕಾಲ ಕಳೆಯುವಿರಿ. ಮನಸ್ಸಿಗೆ ಸಮಾಧಾನವಾಗುವ ಕೆಲಸದಲ್ಲಿ ತೊಡಗಿಸಿಕೊಳ್ಳಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 4

ಸಿಂಹ: ನೂತನ ವಾಹನ ಖರೀದಿಯ ಬಗ್ಗೆ ಯೋಚನೆ. ಆತ್ಮೀಯರ ಸಮಾಗಮದಿಂದ ಸಂತಸ. ದಿನಾಂತ್ಯದಲ್ಲಿ ಶುಭ ವಾರ್ತೆ. ಶುಭಸಂಖ್ಯೆ: 3

ಕನ್ಯಾ: ಸಹೋದರರೊಂದಿಗೆ ಘರ್ಷಣೆ. ಯಾವುದೂ ವಿಕೋಪಕ್ಕೆ ಹೋಗಲು ಬಿಡಬೇಡಿ. ಆಸ್ತಿ ವಿಚಾರದಲ್ಲಿ ತಾಳ್ಮೆಯಿರಲಿ. ಶುಭಸಂಖ್ಯೆ: 4

ತುಲಾ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಲಾವಿದರಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಕುಟುಂಬದೊಂದಿಗೆ ಸಂತೋಷಕೂಟ. ಶುಭಸಂಖ್ಯೆ: 2

ವೃಶ್ಚಿಕ: ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಕ್ಕು ನಿರಾಳ. ಹಿರಿಯರ ಆಶೀರ್ವಾದ. ದಿನಾಂತ್ಯದಲ್ಲಿ ಅನಾರೋಗ್ಯ. ಶುಭಸಂಖ್ಯೆ: 7

ಧನು: ಕೆಲಸಗಳಲ್ಲಿ ಅಭಿವೃದ್ಧಿ ಇಲ್ಲ. ಕುಟುಂಬದಲ್ಲಿ ಒತ್ತಡ. ಹಿತೈಷಿಗಳ ಸಲಹೆ ಪಡೆಯಿರಿ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 6

ಮಕರ: ಮಾನಸಿಕ ಅಶಾಂತಿ ತಲೆದೋರಲಿದೆ. ವೈದ್ಯರ ಸಲಹೆಯನ್ನು ಪಾಲಿಸಿ. ಆರೋಗ್ಯ ಹದಗೆಟ್ಟೀತು. ಕೃಷಿಕರಿಗೆ ವಿಶೇಷ ದಿನ. ಶುಭಸಂಖ್ಯೆ: 3

ಕುಂಭ: ಕುಟುಂಬದವರ ಬಗ್ಗೆ ಮೃದುಧೋರಣೆ ತಾಳಿ. ಸಹನೆ ಕಳೆದುಕೊಳ್ಳಬೇಡಿ. ಹಿತಶತ್ರುಗಳ ಬಗ್ಗೆ ಅನುಕಂಪ ಬೇಡ. ಶುಭಸಂಖ್ಯೆ: 7

ಮೀನ: ಅನಿರೀಕ್ಷಿತ ಧನಲಾಭವಾಗಲಿದೆ. ಸ್ನೇಹಿತರಿಂದ ಪ್ರಶಂಸೆಯ ಸುರಿಮಳೆ. ದಿನಾಂತ್ಯದಲ್ಲಿ ವಿಪರೀತ ಆಯಾಸವಾದೀತು. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net