ಇಂದು ಈ ರಾಶಿಯವರಿಗೆ ವಾಕ್​ಚತುರತೆಯಿಂದ ಜನಮನ್ನಣೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉತ್ತಮ ಧನಾರ್ಜನೆ ಇದ್ದರೂ ಧನವ್ಯಯಕ್ಕೆ ಹಲವು ದಾರಿ. ಉದ್ಯೋಗ ವ್ಯವಹಾರಗಳಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ಶುಭಸಂಖ್ಯೆ: 9

ವೃಷಭ: ಅತಿಯಾದ ಆಸೆ ಸಲ್ಲದು. ಭೂಮಿ, ಆಸ್ತಿ ಇತ್ಯಾದಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಪ್ರಗತಿ. ಗೃಹದಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 5

ಮಿಥುನ: ಆರೋಗ್ಯದತ್ತ ಗಮನವಿರಲಿ. ಅಧ್ಯಯನ ನಿಮಿತ್ತ ದೀರ್ಘಪ್ರಯಾಣ ಸಂಭವ. ಪಾಲುದಾರಿಕೆಯಲ್ಲಿ ಪ್ರಗತಿ. ಮಿತ್ರರ ಸಮಾಗಮ. ಶುಭಸಂಖ್ಯೆ: 6

ಕಟಕ: ಮಾತನಾಡುವಾಗ ಎಚ್ಚರ. ಧಾರ್ವಿುಕ ವಿಚಾರದಲ್ಲಿ ಶ್ರದ್ಧೆಯ ಕೊರತೆಯಾಗದಂತೆ ಕಾರ್ಯ ನಿರ್ವಹಿಸಿ. ಧನಾರ್ಜನೆ ಉತ್ತಮ. ಶುಭಸಂಖ್ಯೆ: 3

ಸಿಂಹ: ದೀರ್ಘಪ್ರಯಾಣ ಸಂಭವ. ವ್ಯವಹಾರದಲ್ಲಿ ಧನಾರ್ಜನೆ. ವಿದ್ಯಾರ್ಥಿಗಳು ಪರರನ್ನು ನಂಬದೇ ಕಾರ್ಯ ಸಾಧಿಸಿಕೊಳ್ಳಿ. ಶುಭಸಂಖ್ಯೆ: 7

ಕನ್ಯಾ: ಆರೋಗ್ಯದಲ್ಲಿ ಚೇತರಿಕೆ. ಧಾರ್ವಿುಕ ಸಂಬಂಧೀ ಪ್ರಯಾಣ. ಆದಾಯಕ್ಕಿಂತ ವ್ಯಯ ಜಾಸ್ತಿ. ಉದ್ಯೋಗದಲ್ಲಿ ಸಮಾಧಾನ. ಶುಭಸಂಖ್ಯೆ: 6

ತುಲಾ: ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಸಲ್ಲದು. ಬಂಧುಮಿತ್ರರ ಜವಾಬ್ದಾರಿ. ಹಿರಿಯರ ಸಹಕಾರ. ವಿದ್ಯಾರ್ಥಿಗಳಿಗೆ ಶ್ರೇಯಸ್ಸು. ಶುಭಸಂಖ್ಯೆ: 4

ವೃಶ್ಚಿಕ: ಹೆಚ್ಚಿದ ವರಮಾನ. ಕಾರ್ಯಗಳಲ್ಲಿ ತಲ್ಲೀನತೆ. ಬದಲಾವಣೆ. ಗುರುಹಿರಿಯರ ಪ್ರೀತಿ, ಆಶೀರ್ವಾದ ಪ್ರಾಪ್ತಿ. ಗೃಹದಲ್ಲಿ ಸಂತಸ. ಶುಭಸಂಖ್ಯೆ: 1

ಧನುಸ್ಸು: ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ. ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಹೆಚ್ಚಿದ ಜವಾಬ್ದಾರಿ. ಮಾನಸಿಕ ಚಿಂತೆ ಕಾಡೀತು. ಶುಭಸಂಖ್ಯೆ: 9

ಮಕರ: ಹೆಚ್ಚಿದ ಧನಾಗಮ. ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಯಶಸ್ಸು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಶುಭಸಂಖ್ಯೆ: 1

ಕುಂಭ: ಆಸ್ತಿ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷಿತ ಫಲಿತಾಂಶ. ಉತ್ತಮ ಧನಸಂಪತ್ತು ವೃದ್ಧಿ. ವಾಕ್​ಚತುರತೆಯಿಂದ ಜನ ಮನ್ನಣೆ. ಶುಭಸಂಖ್ಯೆ: 3

ಮೀನ: ದೇಹಾಯಾಸ ಆಗದಂತೆ ಎಚ್ಚರ ವಹಿಸಿ. ನಿರೀಕ್ಷಿತ ಧನಾಗಮ. ಮಕ್ಕಳಿಂದ ಸಂತೋಷ. ಗುರುಹಿರಿಯರಲ್ಲಿ ಗೌರವದಿಂದಿರಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net