

ಮೇಷ: ಸ್ನೇಹಿತನ ಆಗಮನ. ಬಂಧು-ಮಿತ್ರರೊಂದಿಗೆ ಔತಣಕೂಟ. ಕಚೇರಿಯಲ್ಲಿ ಕಿರುಕುಳ. ಆರೋಗ್ಯದ ಬಗ್ಗೆ ನಿರ್ಲಕ್ಷ ಬೇಡ. ಶುಭಸಂಖ್ಯೆ: 9
ವೃಷಭ: ಬಹುದಿನಗಳಿಂದ ಬಾಧಿಸುತ್ತಿದ್ದ ರೋಗದ ಶಮನ. ಸಹೋದ್ಯೋಗಿಗಳಿಂದ ಸಲಹೆ. ಮೇಲಧಿಕಾರಿಗಳಿಂದ ಮಾನಸಿಕ ಒತ್ತಡ. ಶುಭಸಂಖ್ಯೆ:1
ಮಿಥುನ: ವ್ಯಾಪಾರದಲ್ಲಿ ಹೊಸ ಪಾಲುದಾರರ ಸೇರ್ಪಡೆ. ಸಾಲಗಾರರಿಂದ ತೊಂದರೆ. ಅನಾರೋಗ್ಯದ ಸಮಸ್ಯೆ ಅಲಕ್ಷ್ಯ ಮಾಡಬೇಡಿ. ಶುಭಸಂಖ್ಯೆ: 8
ಕಟಕ: ಖಚಿತ ನಿಲುವಿಗೆ ಬರುವಲ್ಲಿ ಗೊಂದಲ. ನಿಮ್ಮ ಕಾರ್ಯಕ್ಷಮತೆಗೆ ಪ್ರಶಂಸೆ. ಕಾರ್ಯಸಿದ್ಧಿಯ ಸಾಫಲ್ಯತೆಯಿಂದ ನೆಮ್ಮದಿ. ಶುಭಸಂಖ್ಯೆ: 3
ಸಿಂಹ: ಭಾವನಾತ್ಮಕ ವರ್ತನೆ ಬೇಡ. ಹಿತಶತ್ರುಗಳಿಂದ ತೊಂದರೆ. ಪಾಲಕರೊಂದಿಗೆ ವಾಗ್ವಾದ. ಸಹನೆ ಕಳೆದುಕೊಳ್ಳಬೇಡಿ. ಶುಭಸಂಖ್ಯೆ: 6
ಕನ್ಯಾ: ಆತುರದ ನಿರ್ಧಾರ ನಿಮಗೇ ಮುಳುವಾದೀತು. ಸಾರ್ವಜನಿಕವಾಗಿ ಸೌಹಾರ್ದದಿಂದ ವರ್ತಿಸಿ. ವಾಹನ ಅಪಘಾತ ಸಾಧ್ಯತೆ. ಶುಭಸಂಖ್ಯೆ: 6
ತುಲಾ: ಆತ್ಮಾಭಿಮಾನಕ್ಕೆ ಧಕ್ಕೆ ತರುವ ಘಟನೆ ಸಾಧ್ಯತೆ. ದುರ್ಬಲರಿಗೆ ಸಹಾಯ ಮಾಡಿ. ಆತ್ಮೀಯ ಬಂಧುಗಳ ಆಗಮನ. ಶುಭಸಂಖ್ಯೆ: 5
ವೃಶ್ಚಿಕ: ದುಂದುವೆಚ್ಚ ಮಾಡಬೇಡಿ. ಭೂಮಿ ವಿಚಾರದಲ್ಲಿ ಮಹತ್ವದ ತೀರ್ವನ. ಸಹೋದ್ಯೋಗಿಗಳ ಜತೆ ತಾಳ್ಮೆಯಿಂದ ಇರಿ. ಶುಭಸಂಖ್ಯೆ: 6
ಧನುಸ್ಸು: ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಳೇ ಸ್ನೇಹಿತನ ಭೆೇಟಿ. ದಿನಾಂತ್ಯದಲ್ಲಿ ಆಯಾಸ ಕಾಣಿಸಬಹುದು. ಶುಭಸಂಖ್ಯೆ: 3
ಮಕರ: ಒತ್ತಡದ ಜೀವನದಲ್ಲಿ ಕುಟುಂಬದ ನಿರ್ಲಕ್ಷ ಸಲ್ಲ.ಆತ್ಮೀಯ ಸ್ನೇಹಿತನೊಂದಿಗೆ ಮನಸ್ತಾಪ. ಹಣಕಾಸಿನ ಮುಗ್ಗಟ್ಟು. ಶುಭಸಂಖ್ಯೆ: 2
ಕುಂಭ: ನಿಮ್ಮ ದುಡುಕಿನಿಂದ ದೊಡ್ಡಮೊತ್ತದ ನಷ್ಟ. ಸಾಲಗಾರರ ಕಾಟ. ಕಚೇರಿಯಲ್ಲಿ ಕಿರಿಕಿರಿ. ಇಷ್ಟ ದೇವರನ್ನು ಆರಾಧಿಸಿ. ಶುಭಸಂಖ್ಯೆ: 6
ಮೀನ: ದುರ್ಬಲರ ಬಗ್ಗೆ ಅನುಕಂಪ ತೋರಿ. ರಾಜಕೀಯರಂಗದಲ್ಲಿರುವವರಿಗೆ ವಿಶೇಷ ಮನ್ನಣೆ. ಪ್ರತಿಭಾನ್ವಿತರಿಗೆ ಪ್ರೋತ್ಸಾಹ. ಶುಭಸಂಖ್ಯೆ: 1