

ಮೇಷ: ವಿಶೇಷ ಧನಲಾಭ, ಆತ್ಮೀಯರ ಭೇಟಿಯಿಂದ ಸಂತಸ, ಹಲವು ಕಾಲದಿಂದ ಬಾಧಿಸುತ್ತಿದ್ದ ರೋಗ ಶಮನ. ಶುಭಸಂಖ್ಯೆ 8
ವೃಷಭ: ಅನಾವಶ್ಯಕ ಖರ್ಚು, ಕುಟುಂಬದೊಂದಿಗೆ ವಾಗ್ವಾದ, ದೃಢ ನಿರ್ಧಾರಕ್ಕೆ ಪರದಾಟ, ಸಹೋದ್ಯೋಗಿಗಳಿಂದ ಮಾನಸಿಕ ಒತ್ತಡ. ಶುಭಸಂಖ್ಯೆ 1
ಮಿಥುನ: ಆತ್ಮ ಅಭಿಮಾನಕ್ಕೆ ಧಕ್ಕೆ, ಪ್ರಬಲ ವಿರೋಧ, ಮನಸ್ಸಿನ ಚಂಚಲತೆಯೇ ಅವನತಿಗೆ ಕಾರಣ, ದಿನಾಂತ್ಯದಲ್ಲಿ ಅನಿರೀಕ್ಷಿತ ಬದಲಾವಣೆ. ಶುಭಸಂಖ್ಯೆ 3
ಕಟಕ: ಕುಟುಂಬದಲ್ಲಿ ಸಂತಸದ ವಾತಾವರಣ, ಸಹೋದರನಿಂದ ಆರ್ಥಿಕ ಸಹಾಯ, ವಿಶೇಷ ಧನಲಾಭ ಸಾಧ್ಯತೆ. ಶುಭಸಂಖ್ಯೆ 8
ಸಿಂಹ: ಮನಸ್ಸಿಗೆ ಕ್ಲೇಶ, ಉದ್ಯೋಗದ ವಿಚಾರದಲ್ಲಿ ಸಮಸ್ಯೆ, ಬಹಳ ದಿನಗಳಿಂದ ಯೋಚಿಸಿದ ಕೆಲಸದಲ್ಲಿ ಪ್ರಗತಿ, ವಿವಾಹ ಯತ್ನದಲ್ಲಿ ವೈಫಲ್ಯ. ಶುಭಸಂಖ್ಯೆ 5
ಕನ್ಯಾ: ಆತ್ಮೀಯ ಬಂಧುಗಳ ಸಮಾಗಮ, ನಿರೀಕ್ಷಿತ ದೂರ ಪ್ರಯಾಣ, ಗೃಹೋಪಕರಣಗಳ ಖರೀದಿಯಲ್ಲಿ ಮೋಸ, ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ 6
ತುಲಾ: ಅನಾವಶ್ಯಕ ದುಂದುವೆಚ್ಚ, ಕುಟುಂಬದಲ್ಲಿ ವಿರಸ, ಮನಶ್ಶಾಂತಿಗೆ ನಿಮ್ಮವರಿಂದಲೇ ತೊಂದರೆ ಆಗುವ ಸಂಭವ. ಶುಭಸಂಖ್ಯೆ 6
ವೃಶ್ಚಿಕ: ಕೆಲಸ ವಿಳಂಬವಾದರೂ ಅಂತಿಮವಾಗಿ ಜಯ ನಿಮ್ಮದೇ. ವಿದ್ಯಾರ್ಥಿಗಳಿಗೆ ಶುಭದಿನ. ಮಹಿಳೆಯರಿಗೆ ವಸ್ತ್ರಲಾಭ. ಶುಭಸಂಖ್ಯೆ 4
ಧನುಸ್ಸು: ಉದ್ಯೋಗದ ವಿಚಾರದಲ್ಲಿ ಸಂತಸ, ಹಲವು ದಿನಗಳಿಂದ ನೆನೆಗುದಿಗೆ ಬಿದ್ದ ಕೆಲಸದಲ್ಲಿ ಮುನ್ನಡೆ, ಸಾರ್ವಜನಿಕ ರಂಗದಲ್ಲಿ ಅವಮಾನ. ಶುಭಸಂಖ್ಯೆ 9
ಮಕರ: ದೈಹಿಕ ಶ್ರಮ ಹೆಚ್ಚಾಗಲಿದೆ, ಒತ್ತಡದ ಜೀವನ, ಆಸ್ತಿ ವಿಚಾರದಲ್ಲಿ ಗೊಂದಲ, ಅವಿವಾಹಿತರಿಗೆ ಒಳ್ಳೆಯ ಸುದ್ದಿ ಬರಲಿದೆ. ಶುಭಸಂಖ್ಯೆ 9
ಕುಂಭ: ಶತ್ರುಗಳಿಂದ ತೊಂದರೆ ಸಂಭವ, ಯಾವುದರಲ್ಲೂ ದೃಢತೆ ಇಲ್ಲ, ಆಹಾರ ಸೇವಿಸುವಾಗ ಎಚ್ಚರ ಇರಲಿ, ಹಾಗೂ ಮಿತಿ ಇರಲಿ. ಶುಭಸಂಖ್ಯೆ 6
ಮೀನ: ಆತ್ಮೀಯರೊಂದಿಗೆ ಭೋಜನ, ದಿನಸಿ ವ್ಯಾಪಾರಿ ಗಳಿಗೆ ಆರ್ಥಿಕ ನಷ್ಟ, ಮಕ್ಕಳಿಂದ ಶುಭ ಸುದ್ದಿ, ಆಸ್ತಿ ವಿಚಾರದಲ್ಲಿ ತಾರ್ಕಿಕ ಅಂತ್ಯ. ಶುಭಸಂಖ್ಯೆ 1