ನಿತ್ಯಭವಿಷ್ಯ| ಈ ರಾಶಿಯವರು ಇಂದು ವಾಹನ ಚಾಲಿಸುವಾಗ ಜೋಪಾನ..

Nitya-Bhavishya-vvani-1-2-1-1
Published on

ಮೇಷ: ಆರೋಗ್ಯ ಕೈ ಕೊಡಬಹುದು. ವೈದ್ಯರ ಸಲಹೆ ಪಡೆಯಿರಿ. ಅನವಶ್ಯಕವಾಗಿ ತಿರುಗಾಟ. ಸಹೋದರರಿಂದ ಸಲಹೆ. ಶುಭಸಂಖ್ಯೆ: 8

ವೃಷಭ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಿತ ದೃಢನಿರ್ಧಾರ ತೆಗೆದುಕೊಳ್ಳಿ. ಕಚೇರಿಯಲ್ಲಿ ಅಸಮಾಧಾನ. ಕಲಾವಿದರಿಗೆ ಲಾಭ. ಶುಭಸಂಖ್ಯೆ: 7

ಮಿಥುನ: ಗುರುಹಿರಿಯರ ಅನಾರೋಗ್ಯದ ವಾರ್ತೆ. ಸಹೋದ್ಯೋಗಿಗಳಿಂದ ವಿರೋಧ. ಕೆಲಸದಲ್ಲಿ ಅಪಜಯ. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 3

ಕಟಕ: ಆತ್ಮೀಯರ ಸಮಾಗಮ. ಹಿತೈಷಿಗಳಿಂದ ಉತ್ತಮ ಸಲಹೆ. ಅನಾರೋಗ್ಯ ಬಾಧಿಸಬಹುದು. ನಿರ್ಲಕ್ಷ್ಯ ಬೇಡ. ಶುಭಸಂಖ್ಯೆ: 4

ಸಿಂಹ: ಎಷ್ಟೋ ಕಾಲದಿಂದ ತೊಂದರೆ ಕೊಡುತ್ತಿದ್ದ ಶತ್ರುವಿನ ದಮನ. ಕೋರ್ಟು ವ್ಯವಹಾರಗಳಲ್ಲಿ ಜಯ. ಆಪ್ತರಿಂದಲೇ ಮೋಸ. ಶುಭಸಂಖ್ಯೆ: 5

ಕನ್ಯಾ: ಮಾನಸಿಕ ಚಾಂಚಲ್ಯ. ಲೇಖಕರಿಗೆ ಒಳ್ಳೆಯ ದಿನ. ಕಲಾಕ್ಷೇತ್ರದವರಿಗೆ ಉತ್ತಮ ಫಲ. ಆದರೆ ಫಲ ಸಿಗುವ ಸಮಯದಲ್ಲಿ ವಿಘ್ನ . ಶುಭಸಂಖ್ಯೆ: 6

ತುಲಾ: ವಾಹನ ಚಲಾಯಿಸುವಾಗ ಜಾಗರೂಕತೆ ಇರಲಿ. ಉದ್ಯೋಗದಲ್ಲಿ ಸ್ಥಾನಮಾನದ ನಿರೀಕ್ಷೆ. ದಿನಾಂತ್ಯಕ್ಕೆ ಉತ್ತಮ ಭೋಜನ. ಶುಭಸಂಖ್ಯೆ: 3

ವೃಶ್ಚಿಕ: ಹಿತ ಶತ್ರುಗಳ ಕಾಟ. ಆಸ್ತಿ ವಿಚಾರದಲ್ಲಿ ಮೋಸ ಹೋಗುವ ಸಂಭವ. ಹಿರಿಯರ ಸಲಹೆ ಪಡೆದೇ ಮುನ್ನಡೆಯುವುದು ಕ್ಷೇಮ. ಶುಭಸಂಖ್ಯೆ: 8

ಧನಸ್ಸು: ಕುಟುಂಬದಲ್ಲಿ ಗೊಂದಲ. ಯಾರೋ ಮಾಡಿದ ತಪ್ಪಿಗೆ ನೀವು ಬಲಿಯಾಗಬಹುದು, ಎಚ್ಚರ. ಸಾಲಗಾರರ ಕಾಟ ಸಾಧ್ಯತೆ. ಶುಭಸಂಖ್ಯೆ: 9

ಮಕರ: ಸ್ಥಾನಮಾನದ ನಷ್ಟ. ಆತ್ಮೀಯ ಸ್ನೇಹಿತನ ಭೆೇಟಿ. ಯೋಚಿಸಿ ಮಾತನಾಡಿ. ದೃಢವಾದ ಆರೋಗ್ಯ ಸ್ಥಿತಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 1

ಕುಂಭ: ಗೃಹ ನಿರ್ವಣದಲ್ಲಿ ಶುಭ ಸುದ್ದಿ. ತಾಯಿಯ ಆರೋಗ್ಯದ ಬಗ್ಗೆ ಎಚ್ಚರ. ಹೆಂಡತಿ ಮಕ್ಕಳಿಂದ ಸಂಪೂರ್ಣ ಬೆಂಬಲ. ಶುಭಸಂಖ್ಯೆ: 9

ಮೀನ : ಮೇಲಧಿಕಾರಿಗಳಿಂದ ಪ್ರಶಂಸೆ. ಅನಪೇಕ್ಷಿತ ಧನಲಾಭ ಸಾಧ್ಯತೆ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net