ಈ ರಾಶಿಯವರಿಗೆ ವ್ಯಾಪಾರದಲ್ಲಿ ಜಾಣ್ಮೆಯ ವರ್ತನೆ ರೂಢಿಸಿಕೊಂಡರೆ ನಿರೀಕ್ಷಿತ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಖಾಸಗಿ ಉದ್ಯೋಗಿಗಳಿಗೆ ಬಡ್ತಿ. ಅವಿವಾಹಿತರಿಗೆ ಶುಭಸುದ್ದಿ. ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಕಲಹ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 2

ವೃಷಭ: ಅಧಿಕಾರಿಗಳಲ್ಲಿ ಕಲಹ ಸಾಧ್ಯತೆ ಜಾಸ್ತಿಯಿದೆ. ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಹುದು. ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾದೀತು. ಶುಭಸಂಖ್ಯೆ: 9

ಮಿಥುನ: ಉತ್ತಮ ಅವಕಾಶ ಪಡೆದುಕೊಳ್ಳುವಿರಿ. ಮನಸ್ಸಿಗೆ ಶಾಂತಿ ಸಿಗಲಿದೆ. ಜಮೀನು ವಿಷಯಗಳಲ್ಲಿ ಗೊಂದಲ ಮುಂದುವರಿಕೆ. ಶುಭಸಂಖ್ಯೆ: 9

ಕಟಕ: ಹಣಕಾಸು ವಿಚಾರದಲ್ಲಿ ಎಚ್ಚರವಿರಲಿ. ಮಾನಸಿಕ ಚಿಂತೆ, ಅನಾರೋಗ್ಯ. ಯತ್ನ ಕಾರ್ಯಗಳಲ್ಲಿ ಜಯ ನಿಮ್ಮದಾಗಲಿದೆ. ಶುಭಸಂಖ್ಯೆ:1

ಸಿಂಹ: ದುಂದುವೆಚ್ಚಗಳಿಗೆ ಕಡಿವಾಣ. ಶತ್ರು ಬಾಧೆ ನಿವಾರಣೆ. ಮನಕ್ಲೇಷ, ವಿದೇಶ ವ್ಯವಹಾರಗಳಿಗಾಗಿ ಪ್ರಯಾಣ ಮಾಡುವಿರಿ. ಶುಭಸಂಖ್ಯೆ: 6

ಕನ್ಯಾ: ನಿಮ್ಮ ಪರವಾಗಿ ಜನ ಬೆಂಬಲ ಹೆಚ್ಚುವುದು. ನಿರೀಕ್ಷೆಗೆ ತಕ್ಕಂತೆ ಆದಾಯ ಬರಲಿದೆ. ಸರ್ಕಾರಿ ಕೆಲಸಗಳಿಗಾಗಿ ಓಡಾಟ. ಶುಭಸಂಖ್ಯೆ: 1

ತುಲಾ: ಯತ್ನ ಕಾರ್ಯಗಳಲ್ಲಿ ಯಶಸ್ಸು ದೊರೆತು ಸಂತಸ. ವ್ಯಾಪಾರದಲ್ಲಿ ಜಾಣ್ಮೆಯ ವರ್ತನೆ ರೂಢಿಸಿಕೊಂಡರೆ ನಿರೀಕ್ಷಿತ ಲಾಭ . ಶುಭಸಂಖ್ಯೆ: 8

ವೃಶ್ಚಿಕ: ತಾತ್ಕಾಲಿಕ ಸಮಸ್ಯೆ ಬಗೆಹರಿದು ನಿರಾಳ. ದಾಂಪತ್ಯದಲ್ಲಿ ಕಲಹ ಸಾಧ್ಯತೆ, ತಾಳ್ಮೆ ಮುಖ್ಯ. ಸ್ತ್ರೀಯರಿಗೆ ಶುಭ. ದ್ರವ್ಯಲಾಭ. ಶುಭಸಂಖ್ಯೆ:7

ಧನುಸ್ಸು: ಯೋಚಿಸಿ ನಿರ್ಣಯ ಕೈಗೊಳ್ಳುವುದು ಸೂಕ್ತ. ದಾಂಪತ್ಯದಲ್ಲಿ ನೆಮ್ಮದಿ. ಆಸ್ತಿ ವಿಚಾರದಲ್ಲಿ ಸಹೋದರಿಯರೊಂದಿಗೆ ವಾಗ್ವಾದ. ಶುಭಸಂಖ್ಯೆ:3

ಮಕರ: ಅಧಿಕ ತಿರುಗಾಟ. ಸಗಟು ವ್ಯಾಪಾರದಲ್ಲಿ ಲಾಭ. ಅಕಾಲ ಭೋಜನ. ಅನ್ಯ ಜನರಲ್ಲಿ ವೈಮನಸ್ಸು. ಸಹನೆ ಕಳೆದುಕೊಳ್ಳಬೇಡಿ. ಶುಭಸಂಖ್ಯೆ:5

ಕುಂಭ: ಪರರಿಗೆ ವಂಚಿಸುವುದು ತರವಲ್ಲ. ಋಣಬಾಧೆ ನಂಬಿದ ಜನರಿಂದ ಮೋಸ ಸಾಧ್ಯತೆ. ಆದಾಯಕ್ಕಿಂತ ಖರ್ಚು ಜಾಸ್ತಿ. ಶುಭಸಂಖ್ಯೆ: 6

ಮೀನ: ಕಾರ್ಯ ವಿಕಲ್ಪ, ನೆಮ್ಮದಿ ಇಲ್ಲದ ಜೀವನ. ಕೋಪ ಜಾಸ್ತಿ. ಪಾಪಬುದ್ಧಿ, ವಿನಾಕಾರಣ ನಿಷ್ಠ್ಠುರ. ಕಲಾವಿದರಿಗೆ ವಿಶೇಷ ದಿನ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net