ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಬಹಳ ದಿನಗಳ ಕನಸು ನನಸಾಗಲಿದೆ

Nitya-Bhavishya-vvani-1-2-1
Published on

ಮೇಷ: ಮಾತಿನ ಮೋಡಿಯಿಂದ ಜನಾಕರ್ಷಣೆ. ಸಹೋದ್ಯೋಗಿಗಳಿಂದ ಸಲಹೆ ದೊರೆಯಲಿದೆ. ಹಣದ ಅಪವ್ಯಯವಾದೀತು. ಶುಭಸಂಖ್ಯೆ: 7

ವೃಷಭ: ಕೆಲಸದ ಒತ್ತಡದಲ್ಲಿ ಕುಟುಂಬವನ್ನು ಮರೆಯಬೇಡಿ. ಹೊಸ ಯೋಜನೆ ಯತ್ನ ವಿಫಲ. ನನೆಗುದಿಗೆ ಬಿದ್ದ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 6

ಮಿಥುನ: ಬಹಳ ದಿನಗಳ ಕನಸು ನನಸಾಗಲಿದೆ. ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ. ಹಿರಿಯರ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 8

ಕಟಕ: ಮನೆಗೆ ಬಂಧುಗಳು ಬರುವ ಸಾಧ್ಯತೆ. ಅಕ್ಕ ತಂಗಿಯರ ಮನೆಗೆ ಭೇಟಿ. ಮನೆ ಕಟ್ಟುವ ಕೆಲಸಕ್ಕೆ ಚಾಲನೆ. ಆರ್ಥಿಕ ಮುಗ್ಗಟ್ಟು. ಶುಭಸಂಖ್ಯೆ: 3

ಸಿಂಹ: ದೃಢನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಸಲಹೆ ಪಡೆದುಕೊಳ್ಳಿ. ಹೊಸ ವ್ಯಾಪಾರ ಪ್ರಾರಂಭ. ಬಂಧು ವರ್ಗದಲ್ಲಿ ಪ್ರಶಂಸೆ. ಶುಭಸಂಖ್ಯೆ: 2

ಕನ್ಯಾ: ಯಾರನ್ನೂ ಅತಿಯಾಗಿ ನಂಬಬೇಡಿ. ಸಾಲಗಾರರಿಂದ ಅವಮಾನ. ವ್ಯಾಪಾರಸ್ಥರಿಗೆ ನಷ್ಟ ಸಾಧ್ಯತೆ. ದೇವಾಲಯ ಭೇಟಿ. ಶುಭಸಂಖ್ಯೆ: 7

ತುಲಾ: ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಮನೆಯಲ್ಲಿ ಶುಭ ಸಮಾರಂಭದ ಸಡಗರ. ಶುಭಸಂಖ್ಯೆ: 6

ವೃಶ್ಚಿಕ: ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಒಳಿತು. ಸಾರ್ವಜನಿಕ ಕ್ಷೇತ್ರದಲ್ಲಿ ವಿಶೇಷ ಮನ್ನಣೆ ದೊರೆ ಯಲಿದೆ. ಅನವಶ್ಯಕ ತಿರುಗಾಟ. ಶುಭಸಂಖ್ಯೆ: 7

ಧನುಸ್ಸು: ಕಷ್ಟಕಾಲದಲ್ಲಿ ಹಿರಿಯರ ಸಲಹೆ ಪಡೆಯಿರಿ. ಒತ್ತಡ ಕಡಿಮೆಯಾಗುತ್ತದೆ. ನಿಮ್ಮ ಪ್ರತಿಭೆಗೆ ಸೂಕ್ತ ಪೋ›ತ್ಸಾಹ. ನಟರಿಗೆ ಧನ ನಷ್ಟ. ಶುಭಸಂಖ್ಯೆ: 3

ಮಕರ: ಇಚ್ಛಾಶಕ್ತಿಯಿಂದ ಅಸಾಧ್ಯವಾದುದನ್ನು ಸಾಧಿಸಿದ ತೃಪ್ತಿ. ಕುಟುಂಬ ವರ್ಗದಲ್ಲಿ ಮನ್ನಣೆ. ದಿನ ದರಿದ್ರರಿಗೆ ಸಹಾಯ ಮಾಡಿ. ಶುಭಸಂಖ್ಯೆ: 1

ಕುಂಭ: ರಾಜಕೀಯ ರಂಗದಲ್ಲಿರುವವರಿಗೆ ಅಧಿಕಾರ ನಷ್ಟ. ಆಸ್ತಿ ವಿವಾದದಲ್ಲಿ ಕುಟುಂಬದ ಸಹಕಾರ. ಸಹೋದರರ ಬಾಂಧವ್ಯ ವೃದ್ಧಿ. ಶುಭಸಂಖ್ಯೆ: 9

ಮೀನ: ಮನೆಯಲ್ಲಿ ಕಿರಿಕಿರಿ. ಆರ್ಥಿಕ ಮುಗ್ಗಟ್ಟು. ಮಕ್ಕಳಿಂದ ದುಂದುವೆಚ್ಚ. ಸಂಗಾತಿಯ ಮಾತು ಪಾಲಿಸಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net