ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ, ನೆಮ್ಮದಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ವಂತ ವ್ಯಾಪಾರದಲ್ಲಿ ಲಾಭ. ಪತ್ರ ವ್ಯವಹಾರದಲ್ಲಿ ಅನುಕೂಲ. ಅಪಮಾನ, ಕಾನೂನು ಬಾಹಿರ ಧನ ಸಂಪಾದನೆಯ ಆಸೆ. ಶುಭಸಂಖ್ಯೆ: 9

ವೃಷಭ: ದೂರ ಪ್ರಯಾಣ. ಅನಾರೋಗ್ಯ ಸಮಸ್ಯೆ ಕಾಡಬಹುದು. ಆಸ್ತಿಯ ಮೇಲೆ ಸಾಲದ ಯೋಚನೆ. ರ್ಚಚಿಸಿ ನಿರ್ಧಾರ ಕೈಗೊಳ್ಳಿ. ಶುಭಸಂಖ್ಯೆ: 1

ಮಿಥುನ: ಐಷಾರಾಮಿ ಜೀವನಕ್ಕಾಗಿ ಧನವ್ಯಯ. ಪ್ರೀತಿ- ಪ್ರೇಮದಲ್ಲಿ ಸಮಸ್ಯೆ. ಮಕ್ಕಳು ಶತ್ರುಗಳಾಗುವರು, ಸಮಾಧಾನದಿಂದಿರಿ. ಶುಭಸಂಖ್ಯೆ: 3

ಕಟಕ: ಅಪರಾಧದಿಂದ ಧನ ನಷ್ಟ. ಕುಟುಂಬದ ಹಿತಶತ್ರುಗಳಿಂದ ಸಮಸ್ಯೆ. ಗೌರವಕ್ಕೆ ಧಕ್ಕೆಯಾದೀತು. ಆಸೆ-ಆಕಾಂಕ್ಷೆಗಳಿಗೆ ವಿರೋಧ. ಶುಭಸಂಖ್ಯೆ: 5

ಸಿಂಹ: ವಿಕೃತ ಆಸೆ ಅಭಿಲಾಷೆಗಳು. ಪತ್ರ ವ್ಯವಹಾರಗಳಲ್ಲಿ ಯಶಸ್ಸು. ಉದ್ಯೋಗದಲ್ಲಿ ಬಡ್ತಿ. ಉತ್ತಮ ಉದ್ಯೋಗ ಸಾಧ್ಯತೆ. ಶುಭಸಂಖ್ಯೆ: 2

ಕನ್ಯಾ: ಮೋಸ ಹೋದೀರಿ. ದೂರ ಪ್ರದೇಶದಲ್ಲಿ ಉದ್ಯೋಗ. ವಸ್ತ್ರಾಭರಣ ಖರೀದಿಗೆ ಹಣವ್ಯಯ. ಸಂಜೆಯ ವೇಳೆ ಶುಭಸಮಾಚಾರ. ಶುಭಸಂಖ್ಯೆ: 9

ತುಲಾ: ಧನ ಸಂಪಾದನೆಯಾಗಲಿದೆ ಮತ್ತು ಅಧಿಕ ಲಾಭ. ಅನಿರೀಕ್ಷಿತ ಅದೃಷ್ಟ ಒದಗಿ ಬರುವುದು. ಪೂರ್ವಿಕರ ಗುಪ್ತ ನಿಧಿ ಪ್ರಾಪ್ತಿ. ಶುಭಸಂಖ್ಯೆ: 7

ವೃಶ್ಚಿಕ: ದಾಂಪತ್ಯದಲ್ಲಿ ಬೇಸರ. ಅವಕಾಶಗಳು ಕೈತಪ್ಪುವವು. ವೈಯಕ್ತಿಕ ನಿಂದನೆ ಮಾಡಬೇಡಿ. ಅಪಪ್ರಚಾರಗಳು. ಸಾಲಬಾಧೆ. ಶುಭಸಂಖ್ಯೆ: 6

ಧನುಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ ಎದುರಾದೀತು. ಅಧಿಕ ನಷ್ಟ ಮತ್ತು ಸಮಸ್ಯೆಯಿದ್ದರೂ ಅದೃಷ್ಟ ನಿಮ್ಮ ಜತೆಗಿದೆ, ಭಯಬೇಡ. ಶುಭಸಂಖ್ಯೆ: 3

ಮಕರ: ದಾಂಪತ್ಯ ಸಮಸ್ಯೆ. ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಮೋಸ ಮಾಡುವ ವ್ಯಕ್ತಿಗಳನ್ನು ಪ್ರೀತಿಸಬೇಡಿ. ಉದ್ಯೋಗ ಲಾಭ. ಶುಭಸಂಖ್ಯೆ: 9

ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ. ಹಳೆಯ ವಸ್ತುಗಳ ಖರೀದಿಗಾಗಿ ಖರ್ಚು. ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ, ನೆಮ್ಮದಿ. ಶುಭಸಂಖ್ಯೆ: 1

ಮೀನ: ಸಾಲ ಮಾಡುವ ಪರಿಸ್ಥಿತಿ. ಶತ್ರು ದಮನ. ಕೋರ್ಟ್ ಕೇಸುಗಳಲ್ಲಿ ಜಯ. ಅಧಿಕ ಖರ್ಚು. ಆರ್ಥಿಕ ಅನುಕೂಲ ಒದಗುವುದು. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net