More

    ಅಪರಿಚಿತರ ಬಳಿ ಲಿಫ್ಟ್ ಕೇಳಿಯೇ ಏಕಾಂಗಿಯಾಗಿ ಇಡೀ ರಾಜ್ಯ ಸುತ್ತಲಾರಂಭಿಸಿದ್ದಾಳೆ ಈ ಯುವತಿ: ಉದ್ದೇಶವಾದರೂ ಏನು?

    ಮುಂಬೈ: ಹೆಣ್ಣು ಮಗಳು ಒಬ್ಬಳೇ ಹೊರಗೆ ಸುತ್ತಾಡಿಕೊಂಡು ಬರುತ್ತೇನೆ ಎಂದರೆ ಅಪ್ಪ-ಅಮ್ಮ ದಿಗಿಲಾಗುವುದು ಸಹಜ. ಅದರಲ್ಲೂ ಅವಳು ಅಪರಿಚಿತರ ಬಳಿ ಲಿಫ್ಟ್​ ಕೇಳಿಕೊಂಡು ರಾಜ್ಯವಿಡೀ ಸುತ್ತಾಡಲು ಹೊರಟರೆ ಹೇಗಿರಬೇಡ!?

    ಹೌದು.. ಯುವತಿಯೊಬ್ಬಳು ರಸ್ತೆಯಲ್ಲಿ ಸಿಗುವ ಅಪರಿಚಿತರ ಬಳಿ ಲಿಫ್ಟ್ ಕೇಳಿಯೇ ಇಡೀ ರಾಜ್ಯವನ್ನು ಸುತ್ತಲಾರಂಭಿಸಿದ್ದಾಳೆ. ಈಗಾಗಲೇ 13 ಜಿಲ್ಲೆಗಳನ್ನು ಹಾದು ಹೋಗಿರುವ ಈಕೆ ಸುಮಾರು 1300 ಕಿ.ಮೀ. ಪ್ರಯಾಣ ಮುಗಿಸಿದ್ದಾಳೆ. ಅಂದಹಾಗೆ ಈ ಸಾಹಸಿ ಯುವತಿಯ ಹೆಸರು ಕಾಂಚನಾ ಜಾಧವ್. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮದ ವಿದ್ಯಾರ್ಥಿನಿ ಆಗಿರುವ ಈಕೆ ಪ್ರಭಾಣಿ ಜಿಲ್ಲೆಯ ಸೇಲು ಗ್ರಾಮದ ನಿವಾಸಿ.

    ಇದನ್ನೂ ಓದಿ: ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

    ಸಮಾಜದಲ್ಲಿ ಮಹಿಳೆಯರನ್ನು ಅಬಲೆ ಎನ್ನುವಂತೆ ನೋಡಿ ತಾರತಮ್ಯ ಮಾಡಲಾಗುತ್ತಿದೆ ಎಂದು ಭಾವಿಸಿರುವ ಈಕೆ ಮಹಾರಾಷ್ಟ್ರದಲ್ಲಿ ಮಹಿಳೆಯರು ಸುರಕ್ಷಿತರೇ ಎಂದು ತಿಳಿಯಲು ಇಂಥದ್ದೊಂದು ಸಾಹಸಕ್ಕೆ ಮಾಡುತ್ತಿದ್ದಾಳೆ. ಆರಂಭದಲ್ಲಿ ಮನೆಯವರು ಒಪ್ಪದಿದ್ದರೂ ಕೊನೆಗೆ ಅವರ ಮನವೊಲಿಸುವಲ್ಲಿ ಈಕೆ ಯಶಸ್ವಿಯಾಗಿದ್ದಾಳೆ.

    ಇದನ್ನೂ ಓದಿ: ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಟೆಂಟ್​ ಸೇರಿದಂತೆ ಅತಿ ಅಗತ್ಯ ಅನಿಸಿರುವ ಕೆಲವೇ ವಸ್ತುಗಳೊಂದಿಗೆ ಈಕೆ ಮನೆಯಿಂದ ಹೊರಟಿದ್ದಾಳೆ. ಬೆಳಗ್ಗೆ 7ರಿಂದ ಈಕೆ ತನ್ನ ಪ್ರಯಾಣ ಆರಂಭಿಸುತ್ತಿದ್ದು, ದಾರಿಯಲ್ಲಿ ಸಿಗುವ ಅಪರಿಚಿತರ ಬಳಿ ಲಿಫ್ಟ್ ಕೇಳಿಕೊಂಡು ಸಾಗುತ್ತಾಳೆ. ರಾತ್ರಿ 7 ಗಂಟೆ ಆಗುತ್ತಿದ್ದಂತೆ ಸೂಕ್ತ ಪ್ರದೇಶ ಕಂಡು ತಂಗುತ್ತಾಳೆ. ಸಾಮಾನ್ಯವಾಗಿ ಹೋಟೆಲ್​, ಶಾಲೆ, ದೇವಸ್ಥಾನ ಇತ್ಯಾದಿಯಲ್ಲಿ ತಂಗುವ ಈಕೆ ಕೆಲವೊಮ್ಮೆ ಟೆಂಟ್​ ಹಾಕಿ ರಾತ್ರಿ ಕಳೆದಿದ್ದೂ ಇದೆಯಂತೆ. ಇಂಥ ಸಂದರ್ಭದಲ್ಲಿ ಕೆಲವರು ಅಚ್ಚರಿಗೊಂಡಿದ್ದರೆ ಇನ್ನು ಕೆಲವರು ನಾನು ಸುರಕ್ಷಿತವಾಗಿದ್ದೇನಾ ಎಂದು ಪರೀಕ್ಷಿಸಿಕೊಂಡು ಹೋಗಿದ್ದಾರೆ ಎನ್ನುತ್ತಾಳೆ.

    ಇದನ್ನೂ ಓದಿ: ಕುಡಿದು ಮಲಗಿ ಸಿಕ್ಕಿಬಿದ್ದ ಕಳ್ಳ; ದೂರು ಬಂದ 11 ತಾಸೊಳಗೆ ಆರೋಪಿಯ ಬಂಧನ

    ಬರೀ ಊಟಕ್ಕಷ್ಟೇ ಹೆಚ್ಚು ಹಣ ಖರ್ಚಾಗುತ್ತಿದ್ದು, ಕೆಲವೊಮ್ಮೆ ಲಿಫ್ಟ್ ಕೊಟ್ಟವರೇ ಊಟವನ್ನೂ ಕೊಡಿಸಿದ್ದಿದೆ ಎನ್ನುವ ಈಕೆ ಯಾರಲ್ಲಿ ಲಿಫ್ಟ್ ಪಡೆಯಬೇಕು, ಯಾರಲ್ಲಿ ಪಡೆಯಬಾರದು ಎಂಬುದೇ ಕೆಲವೊಮ್ಮೆ ದೊಡ್ಡ ಗೊಂದಲವಾಗಿ ಕಾಡುತ್ತದೆ. ಕೆಲವರು ಇನ್ನೂ ಸ್ವಲ್ಪ ದೂರ ಬರುವಂತೆ ಒತ್ತಾಯಿಸಿದ್ದೂ ಇದೆ ಎನ್ನುತ್ತಾಳೆ. ಇನ್ನು ಕೆಲವರು ಅವರ ಮೊಬೈಲ್​ಫೋನ್ ನಂಬರ್ ಕೊಟ್ಟು ಮುಂದೆ ಏನಾದರೂ ತೊಂದರೆಯಾದರೆ ಕರೆ ಮಾಡಿ ಎಂದು ಹೇಳಿದ್ದಾರೆ. ತಂದೆಯ ವಯಸ್ಸಿನವರು ನನ್ನನ್ನು ಮಗಳಂತೆ, ನನ್ನದೇ ಆಸುಪಾಸಿನ ವಯಸ್ಸಿನ ಹುಡುಗರು ಸಹೋದರಿಯಂತೆ ಕಂಡಿದ್ದಾರೆ. ಇದುವರೆಗೆ ಯಾವುದೇ ಅಹಿತಕಾರಿ ಘಟನೆ ಎದುರಾಗಿಲ್ಲ, ಎಲ್ಲರೂ ಸಹಾಯ ಮಾಡುತ್ತಿದ್ದಾರೆ, ಮಹಾರಾಷ್ಟ್ರದ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಈಕೆ ವಿಶ್ವಾಸ ವ್ಯಕ್ತಪಡಿಸಿದ್ದಾಳೆ.

    ಅಪರಿಚಿತರ ಬಳಿ ಲಿಫ್ಟ್ ಕೇಳಿಯೇ ಏಕಾಂಗಿಯಾಗಿ ಇಡೀ ರಾಜ್ಯ ಸುತ್ತಲಾರಂಭಿಸಿದ್ದಾಳೆ ಈ ಯುವತಿ: ಉದ್ದೇಶವಾದರೂ ಏನು?
    ಕಾಂಚನಾ

    ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಿಕ್ತು ವಿಶೇಷ ಆಶೀರ್ವಾದ!

    ಮನ ‘ಮುಟ್ಟು’ವ ಕಾರ್ಯ: ಮನೆಯೊಡತಿಗೆ ಮುಟ್ಟಾದಾಗ ರಾಣಿಯಂತೆ ನೋಡಿಕೊಳ್ಳುತ್ತಿರುವ ಗಂಡ-ಗಂಡುಮಕ್ಕಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts