More

    ಮನ ‘ಮುಟ್ಟು’ವ ಕಾರ್ಯ: ಮನೆಯೊಡತಿಗೆ ಮುಟ್ಟಾದಾಗ ರಾಣಿಯಂತೆ ನೋಡಿಕೊಳ್ಳುತ್ತಿರುವ ಗಂಡ-ಗಂಡುಮಕ್ಕಳು!

    ಬೆಂಗಳೂರು: ಈಗಲೂ ಹಲವೆಡೆ ಮುಟ್ಟನ್ನು ಮೈಲಿಗೆ ಎಂಬಂತೆಯೇ ನೋಡಲಾಗುತ್ತಿದೆ. ಋತುಮತಿಯಾದ ಸಂದರ್ಭದಲ್ಲಿ ಹೆಣ್ಣನ್ನು ಅಸ್ಪ್ರಶ್ಯವಾಗಿ ನೋಡುವುದು ಒಂದೆಡೆಯಾದರೆ, ಮುಟ್ಟಿನ ಬಗ್ಗೆ ಹುಡುಗರು ಮಾತಾಡುವುದು ಮುಜುಗರ ಎನ್ನುವಂಥ ಪರಿಸ್ಥಿತಿಯೂ ಕೆಲವೆಡೆ ಇದೆ. ಆದರೆ ಇಲ್ಲೊಂದು ಕಡೆ ತಾಯಿ ಮುಟ್ಟಾದಾಗ ಗಂಡು ಮಕ್ಕಳೇ ಆಕೆಯ ಆರೈಕೆ ಮಾಡುತ್ತಾರೆ. ಅದಕ್ಕೆಂದೇ ಈ ಮನೆಯಲ್ಲಿ ಗಂಡ-ಗಂಡುಮಕ್ಕಳು ಟೀಮ್ ಆಗಿ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ.

    ಇದರ ಬಗ್ಗೆ ಆ ಮನೆಯೊಡತಿಯ ಪುತ್ರರಲ್ಲಿ ಒಬ್ಬರಾಗಿರುವ ಅನಿಶ್ ಭಗತ್ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಸಮೇತ ಹಂಚಿಕೊಂಡಿದ್ದಾನೆ. ನಮ್ಮ ತಂದೆ ನಮಗೆ 13ನೇ ವಯಸ್ಸಿನಲ್ಲೇ ಪೀರಿಯಡ್ಸ್​ ಬಗ್ಗೆ ಅರಿವು ಮೂಡಿಸಿದ್ದರು. ಮಾತ್ರವಲ್ಲ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿಕೊಟ್ಟಿದ್ದರು. ಅನಿಶ್ ಮತ್ತು ಆತನ ಸಹೋದರ, ತಂದೆ ಮೂವರೂ ಮನೆಯೊಡತಿಯ ಸೇವೆಗೆಂದೇ ‘ಭಗತ್ ಮೆನ್’ ಎಂಬ ವಾಟ್ಸ್​ಆ್ಯಪ್ ಗ್ರೂಪ್ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: 4 ವರ್ಷ ಕಳೆದರೂ ಕಳವಾದ ಚಿನ್ನದ ಸರ ಪತ್ತೆ ಮಾಡಲಾಗದೆ ಹೊಸ ಸರ ಕೊಡಿಸಿದ ಪೊಲೀಸರು!; ಆಗಿದ್ದೇನು?

    ಅಮ್ಮನಿಗೆ ಪೀರಿಯಡ್ ಆದಾಗ ನಾವೇ ಹೋಗಿ ಅವರಿಗೆ ಫ್ರೆಷ್ ಪ್ಯಾಡ್ ತಂದು ಕೊಡುತ್ತೇವೆ. ಒಂದೊಂದು ತಿಂಗಳಿಗೆ ಒಬ್ಬರಂತೆ ನಾವು ಈ ಜವಾಬ್ದಾರಿ ವಹಿಸಿಕೊಳ್ಳುತ್ತೇವೆ. ಈ ತಿಂಗಳಲ್ಲಿ ಇದು ನನ್ನ ಜವಾಬ್ದಾರಿ ಎಂದು ಅನಿಶ್ ಅಮ್ಮನ ಸೇವೆ ಮಾಡುತ್ತಿರುವ ಕುರಿತು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಮನೆಯಲ್ಲಿ ಅಮ್ಮ ಮುಟ್ಟಾದಾಗ ಮಾತ್ರವಲ್ಲ, ಆಕೆಗೆ ಅನಾರೋಗ್ಯವಾದಾಗಲೂ ನಾವು ಆಕೆಯನ್ನು ರಾಣಿಯಂತೆ ನೋಡಿಕೊಳ್ಳುತ್ತೇವೆ. ಕಳೆದ 6 ವರ್ಷಗಳಿಂದ ಆಕೆ ಪೀರಿಯಡ್ಸ್ ಸಲುವಾಗಿ ಪ್ಯಾಡ್ ತರಲು ಹೊರಗೆ ಹೋಗಿಲ್ಲ, ನಾವೇ ತಂದು ಕೊಡುತ್ತಿರುವುದಾಗಿ ಅನಿಶ್ ಹೇಳಿದ್ದಾರೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಈ ಮನೆಯ ಪುರುಷರ ಈ ಸೇವೆಯ ಕುರಿತ ವಿಡಿಯೋಗೆ ಇನ್​ಸ್ಟಾಗ್ರಾಮ್​ನಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದಿದೆ. ಅನಿಶ್ ಈ ಕುರಿತು ಮಾಡಿರುವ ಪೋಸ್ಟ್​ಗೆ 20 ಲಕ್ಷ ಮಂದಿ ಮೆಚ್ಚುಗೆ ಸೂಚಿಸಿದ್ದು, 15 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿ, ಪ್ರಶಂಸಿಸಿದ್ದಾರೆ.

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಅರ್ಚಕರಿಗೆ ಹೃದಯಾಘಾತ, ಅರ್ಧಕ್ಕೇ ನಿಂತ ಜಾತ್ರೆ; ಕಳಶ ಹೊತ್ತು ಸಾಗುತ್ತಿದ್ದವರು ಕುಸಿದು ಬಿದ್ದು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts