

ಮೇಷ: ಅನಿರೀಕ್ಷಿತವಾಗಿ ಆರೋಗ್ಯ ಕೈ ಕೊಡಬಹುದು. ಅನವಶ್ಯಕ ತಿರುಗಾಟ. ಕ್ಲಿಷ್ಟ ವಿಷಯಗಳಲ್ಲಿ ಸಹೋದರರಿಂದ ಸಲಹೆ. ಶುಭ ಸಂಖ್ಯೆ 8
ವೃಷಭ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ದೃಢ ನಿರ್ಧಾರ ವನ್ನು ತೆಗೆದುಕೊಳ್ಳಿ. ಕಚೇರಿಯಲ್ಲಿ ಅಸಮಾಧಾನ. ಕಲಾವಿದರಿಗೆ ವಿಶೇಷ ಲಾಭ. ಶುಭ ಸಂಖ್ಯೆ 7
ಮಿಥುನ: ಗುರುಹಿರಿಯರ ಅನಾರೋಗ್ಯದ ವಾರ್ತೆ. ಸಹೋದ್ಯೋಗಿಗಳಿಂದ ವಿರೋಧ. ಕೆಲಸಕಾರ್ಯಗಳಲ್ಲಿ ಅಪಜಯ. ದಿನಾಂತ್ಯದಲ್ಲಿ ಶುಭ. ಶುಭ ಸಂಖ್ಯೆ 3
ಕಟಕ: ಆತ್ಮೀಯರ ಸಮಾಗಮ. ಹಿತೈಷಿಗಳಿಂದ ಮುಖ್ಯವಾದ ವಿಚಾರದಲ್ಲಿ ಸಲಹೆ. ಅನಾರೋಗ್ಯ ಬಾಧಿಸಬಹುದು. ಎಚ್ಚರದಿಂದಿರಿ. ಶುಭ ಸಂಖ್ಯೆ 4
ಸಿಂಹ: ಎಷ್ಟೋ ಕಾಲದಿಂದ ತೊಂದರೆ ಕೊಡುತ್ತಿದ್ದ ಶತ್ರುವಿನ ದಮನ. ಕೋರ್ಟು ವ್ಯವಹಾರಗಳಲ್ಲಿ ಜಯ. ನಂಬಿದವರಿಂದಲೇ ಮೋಸ. ಶುಭ ಸಂಖ್ಯೆ 5.
ಕನ್ಯಾ: ಮಾನಸಿಕ ಚಾಂಚಲ್ಯ. ಲೇಖಕ ವೃತ್ತಿಯವರಿಗೆ ಒಳ್ಳೆಯ ದಿನ. ಕಲಾಕ್ಷೇತ್ರದವರಿಗೆ ಉತ್ತಮ ಫಲ. ಫಲ ಸಿಗುವ ಸಮಯದಲ್ಲಿ ವಿಘ್ನ. ಶುಭ ಸಂಖ್ಯೆ 6.
ತುಲಾ: ವಾಹನ ಚಲಾಯಿಸುವಾಗ ಜಾಗರೂಕತೆಯಿಂದ ಇರಿ. ಉದ್ಯೋಗದ ವಿಚಾರದಲ್ಲಿ ಸ್ಥಾನಮಾನದ ನಿರೀಕ್ಷೆ. ದಿನಾಂತ್ಯದಲ್ಲಿ ಉತ್ತಮ ಭೋಜನ. ಶುಭ ಸಂಖ್ಯೆ 3
ವೃಶ್ಚಿಕ: ಹಿತ ಶತ್ರುಗಳ ಕಾಟ. ಆಸ್ತಿ ವಿಚಾರದಲ್ಲಿ ಮೋಸ ಹೋಗುವ ಸಂಭವವಿದೆ. ಹಿರಿಯರ ಸಲಹೆ ಪಡೆಯಿರಿ. ಶುಭ ಸಂಖ್ಯೆ 8
ಧನುಸ್ಸು: ಕುಟುಂಬದಲ್ಲಿ ಗೊಂದಲ. ಯಾರೋ ಮಾಡಿದ ತಪ್ಪಿಗೆ ನೀವು ಬಲಿಯಾಗಬಹುದು, ಜೋಕೆ. ಸಾಲಗಾರರ ಕಾಟ ತಪ್ಪಿದ್ದಲ್ಲ. ಶುಭ ಸಂಖ್ಯೆ 9
ಮಕರ: ಸ್ಥಾನಮಾನದ ನಷ್ಟ. ಆತ್ಮೀಯ ಸ್ನೇಹಿತನ ಭೇಟಿ. ಯೋಚಿಸಿ ಮಾತನಾಡಿ. ದೃಢವಾದ ಆರೋಗ್ಯ ಸ್ಥಿತಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭ ಸಂಖ್ಯೆ 1
ಕುಂಭ: ಗೃಹ ನಿರ್ಮಾಣದ ವಿಚಾರದಲ್ಲಿ ಶುಭ ಸುದ್ದಿ. ತಾಯಿಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಹೆಂಡತಿ ಮಕ್ಕಳಿಂದ ಬೆಂಬಲ. ಶುಭ ಸಂಖ್ಯೆ 9
ಮೀನ: ಮೇಲಧಿಕಾರಿಗಳಿಂದ ಪ್ರಶಂಸೆ. ಅನಪೇಕ್ಷಿತ ಧನಲಾಭ. ಮನೆಯಲ್ಲಿ ಸಂತಸದ ವಾತಾವರಣ. ಶುಭ ಸಂಖ್ಯೆ 8