ಈ ರಾಶಿಯವರಿಗಿಂದು ಅನಿರೀಕ್ಷಿತ ಧನಪ್ರಾಪ್ತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೌಟುಂಬಿಕ ವ್ಯವಹಾರಗಳಲ್ಲಿ ವಿರೋಧ ಬರಬಹುದು. ಮಹಿಳಾ ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಅವಿವಾಹಿತರಿಗೆ ಶುಭ ಸುದ್ದಿ. ಶುಭಸಂಖ್ಯೆ: 8

ವೃಷಭ: ದಾಂಪತ್ಯ ಜೀವನದ ಗೊಂದಲ ನಿವಾರಣೆ. ಮಧುರ ಬಾಂಧವ್ಯ. ವ್ಯವಸಾಯಗಾರರಿಗೆ ನಷ್ಟ. ಆತ್ಮೀಯರ ವಿಯೋಗ. ಶುಭಸಂಖ್ಯೆ:1

ಮಿಥುನ: ಗೃಹ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ವೃಥಾ ಖರ್ಚು ಉಂಟಾಗಬಹುದು. ಶುಭಸಂಖ್ಯೆ:2

ಕಟಕ: ಪ್ರಭಾವಿ ವ್ಯಕ್ತಿಗಳ ನಿಕಟ ಸಂಪರ್ಕ. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಮೋಸ. ಅನಿರೀಕ್ಷಿತ ಆಘಾತ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 9

ಸಿಂಹ: ಕೆಲಸಗಾರರ ಮುಂದೆ ಅವಮಾನ ಉಂಟಾದೀತು. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಸಾಲಗಾರರಿಂದ ತೊಂದರೆ. ಶುಭಸಂಖ್ಯೆ:5

ಕನ್ಯಾ: ವೈದ್ಯರ ಸಲಹೆ ಪಾಲಿಸುವಲ್ಲಿ ನಿರ್ಲಕ್ಯ ಬೇಡ. ದೂರ ಪ್ರಯಾಣ ಸಾಧ್ಯತೆ. ಪರಿಶ್ರಮಕ್ಕೆ ತಕ್ಕದಾದ ಫಲ. ಅನಿರೀಕ್ಷಿತ ಬದಲಾವಣೆ. ಶುಭಸಂಖ್ಯೆ: 4

ತುಲಾ: ಪರರಿಗೆ ಉಪಕಾರ ಮಾಡುವಾಗ ಮೋಸ ಹೋಗುವ ಸಾಧ್ಯತೆ ಕಾಣುತ್ತಿದೆ. ವಾಹನ ಸಂಬಂಧ ಖರ್ಚು ತಲೆದೋರಬಹುದು. ಶುಭಸಂಖ್ಯೆ: 1

ವೃಶ್ಚಿಕ: ಸಾರ್ವಜನಿಕ ಜೀವನದಲ್ಲಿ ಮುನ್ನಡೆ. ಕಲಾವಿದರಿಗೆ, ವಾದಕರಿಗೆ ವಿಶೇಷ ದಿನ. ಕೃಷಿಕರಿಗೆ ನಷ್ಟ. ಅಧಿಕಾರಿಗಳ ಸಭೆಯಲ್ಲಿ ಭಾಗಿ. ಶುಭಸಂಖ್ಯೆ: 4

ಧನುಸ್ಸು: ನಿಮ್ಮ ಧೈರ್ಯದಿಂದ ಕಾರ್ಯಸಾಧನೆ. ಹಣಕಾಸಿನ ಸಮಸ್ಯೆ. ಪಾಲುದಾರರಿಂದ ವಂಚನೆ. ನಿರೀಕ್ಷಿತ ಲಾಭ ನಿಮ್ಮದಾಗಲಿದೆ. ಶುಭಸಂಖ್ಯೆ: 2

ಮಕರ: ಭವಿಷ್ಯದ ಭಯ ಸ್ವಲ್ಪ ಹೆಚ್ಚೇ ಕಾಡಲಿದೆ. ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ. ಅನಿರೀಕ್ಷಿತ ಧನ ಪ್ರಾಪ್ತಿ. ಶುಭಸಂಖ್ಯೆ: 6

ಕುಂಭ: ಔಷಧಿ ಮಾರಾಟದವರಿಗೆ ನಷ್ಟ ಉಂಟಾಗುವ ಸಾಧ್ಯತೆ. ಅಪರಿಚಿತರಿಂದ ಸಹಾಯ. ಸಾಹಿತಿ ಬರಹಗಾರರಿಗೆ ಮುನ್ನಡೆ. ಶುಭಸಂಖ್ಯೆ 8

ಮೀನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಕೌಟುಂಬಿಕ ವ್ಯವಹಾರದಲ್ಲಿ ಅನ್ಯರ ಪ್ರವೇಶದಿಂದ ಬೇಸರ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net