ಈ ರಾಶಿಯವರಿಗೆ ಇಂದು ಸಂಗಾತಿಯಿಂದ ಸಮಾಧಾನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದಿನಸಿ ವ್ಯಾಪಾರಿಗಳಿಗೆ ಧನಾಗಮ ಸಾಧ್ಯತೆ. ಮಕ್ಕಳಿಂದ ಶುಭಸಮಾಚಾರ ಕೇಳಲಿದ್ದೀರಿ. ಮಾನಸಿಕ ನೆಮ್ಮದಿ ನಿಮ್ಮದಾಗಲಿದೆ. ಶುಭಸಂಖ್ಯೆ: 3

ವೃಷಭ: ಪರಿಶ್ರಮಕ್ಕೆ ತಕ್ಕ ಮನ್ನಣೆ. ನಿಂತುಹೋಗಿರುವ ಯೋಜನೆಗಳು ಪುನಃ ಚಾಲನೆ ಪಡೆದುಕೊಳ್ಳಲಿವೆ. ಕುಟುಂಬದಲ್ಲಿ ಸಂತಸ. ಶುಭಸಂಖ್ಯೆ: 8

ಮಿಥುನ: ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ. ನೆನೆದ ಕಾರ್ಯಗಳು ಸಿದ್ಧಿ. ವಾಹನ ಚಾಲನೆಯಲ್ಲಿ ಅಪಘಾತದ ಬಗ್ಗೆ ಎಚ್ಚರ ಅಗತ್ಯ. ಶುಭಸಂಖ್ಯೆ: 9

ಕಟಕ: ಅಪವಾದದಿಂದ ಪಾರಾಗಲಿದ್ದೀರಿ. ಪ್ರಯಾಣವು ಶುಭಕರವಾಗಲಿದೆ. ಮಕ್ಕಳ ಬಗ್ಗೆ ಕಾಳಜಿ ಅಗತ್ಯ. ಆರ್ಥಿಕ ಸ್ಥಿತಿ ಸಹಜ. ಶುಭಸಂಖ್ಯೆ:1

ಸಿಂಹ: ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ವಿನಾಕಾರಣ ಅಧಿಕ ಖರ್ಚಾಗುವ ಸಾಧ್ಯತೆ ಕಂಡುಬರುವುದು. ಶುಭಸಂಖ್ಯೆ: 4

ಕನ್ಯಾ: ಕೆಲಸದಲ್ಲಿ ಕಿರಿಕಿರಿ. ಅತಿಯಾದ ನಂಬಿಕೆ ಸಲ್ಲದು. ಮನೆ ಮಂದಿಯೊಂದಿಗೆ ದೂರದ ಬಂಧುಗಳ ದರ್ಶನ ಯೋಗ. ಶುಭಸಂಖ್ಯೆ: 7

ತುಲಾ: ಬರಹಗಾರರಿಗೆ ಶುಭದಾಯಕ ದಿನ. ಕಾರ್ಯ ಬಾಹುಳ್ಯದಿಂದ ಮಾನಸಿಕ ಗೊಂದಲ. ಆಯ್ಕೆಯ ಮೂಲಕ ಕೆಲಸ ಕೈಗೆತ್ತಿಕೊಳ್ಳಿ. ಶುಭಸಂಖ್ಯೆ: 5

ವೃಶ್ಚಿಕ: ಹೊಸ ಹೊಸ ಯೋಜನೆಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ಗುರುಹಿರಿಯರ ಸಲಹೆ ಪಡೆದುಕೊಳ್ಳುವುದು ಉತ್ತಮ. ಶುಭಸಂಖ್ಯೆ: 6

ಧನುಸ್ಸು: ಸರ್ಕಾರಿ ಕಚೇರಿಗೆ ಸಂಬಂಧಿಸಿದ ಕೆಲಸಕಾರ್ಯಗಳು ಯಶಸ್ವಿಯಾಗಲಿವೆ. ಅನಾರೋಗ್ಯ ಪೀಡಿತರ ಆರೋಗ್ಯದಲ್ಲಿ ಪ್ರಗತಿ. ಶುಭಸಂಖ್ಯೆ: 9

ಮಕರ: ಬಿಡುವಿಲ್ಲದ ಕೆಲಸ ಕಾರ್ಯ. ಉಪನ್ಯಾಸಕ ವೃತ್ತಿಯವವರಿಗೆ ಕಾರ್ಯಕ್ಷೇತ್ರದಲ್ಲಿ ಅನುಕೂಲದ ವಾತಾವರಣ. ಆರೋಗ್ಯ ಭಾಗ್ಯ. ಶುಭಸಂಖ್ಯೆ: 3

ಕುಂಭ: ಮನೆ ನಿರ್ಮಾಣ ಮತ್ತಿತರ ಕೆಲಸಗಳಲ್ಲಿ ಪ್ರಗತಿ. ವಾಹನ ಖರೀದಿಗೆ ಪ್ರಶಸ್ತ ದಿನ. ಪಾಲುದಾರಿಕೆಯಲ್ಲಿ ಸ್ವಲ್ಪಮಟ್ಟಿನ ಬಿರುಕು. ಶುಭಸಂಖ್ಯೆ: 1

ಮೀನ: ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆಯಾದರೂ ಸಹೋದ್ಯೋಗಿಗಳ ಸಹಕಾರದಿಂದ ನೆಮ್ಮದಿ. ಸಂಗಾತಿಯಿಂದ ಸಮಾಧಾನ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net