ನಿತ್ಯ ಭವಿಷ್ಯ: ಈ ರಾಶಿಯವರಿಗೆ ಎದುರಾಳಿಗಳೇ ಶರಣಾಗಿ ನೆರವು ಕೇಳ್ತಾರೆ

Nitya-Bhavishya-vvani-1-2
Published on

ಮೇಷ: ಮನಃಶಾಂತಿಯ ಬಗ್ಗೆ ಒದ್ದಾಡಬೇಕಾದಂತಹ ಸನ್ನಿವೇಶ ಸೃಷ್ಟಿಯಾಗಬಹುದು. ಅಯೋಗ್ಯರನ್ನು ದೂರವಿಟ್ಟರೆ ಮಾತ್ರ ಕ್ಷೇಮವಿದೆ. ಶುಭಸಂಖ್ಯೆ: 9

ವೃಷಭ: ಬೆಂಕಿಯ ಬಳಿ ಸರಸವಾಡುವುದು ಬೇಡ. ಅನ್ಯಲಿಂಗಿಗಳು ನಿಮ್ಮ ನಿದ್ದೆಗೆಡಿಸುವ ನಕಾರಾತ್ಮಕ ಸಾಧ್ಯತೆಗಳು ಹೆಚ್ಚಾಗಿವೆ. ಎಚ್ಚರ. ಶುಭಸಂಖ್ಯೆ: 5

ಮಿಥುನ: ಎದುರಾಳಿಗಳೇ ನಿಮಗೆ ಶರಣಾಗಿ ನೆರವನ್ನು ಯಾಚಿಸಬಹುದು. ಆದರೆ ಅವರನ್ನೂ ಥಟ್ಟನೆ ನಂಬದಿದ್ದರೆ ಒಳಿತಾಗಲಿದೆ. ಶುಭಸಂಖ್ಯೆ: 1

ಕಟಕ: ಜೀವನದಲ್ಲಿ ಸದಾ ಕಾಲ ವಸಂತ ಋತುವೇ ಇರಲಾರದು. ದಿಢೀರ್ ಎಂದು ಸವಾಲುಗಳು ಕೂಡ ಎದುರಾಗಬಹುದು. ಶುಭಸಂಖ್ಯೆ: 7

ಸಿಂಹ: ವಿಶ್ವಾಸಕ್ಕೆ ಪಾತ್ರರಾದ ವ್ಯಕ್ತಿಯೇ ನಿಮ್ಮ ಬಳಿ ತಪ್ಪು ಕಲ್ಪನೆಯಿಂದ ಗದ್ದಲ ಎಬ್ಬಿಸಬಹುದು. ಅದನ್ನು ತಾಳ್ಮೆಯಿಂದಲೇ ನಿಯಂತ್ರಿಸಿ. ಶುಭಸಂಖ್ಯೆ: 3

ಕನ್ಯಾ: ಜೀವನಾನುಭವವೇ ಇರದ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಿ. ಇಲ್ಲವಾದರೆ ತೊಂದರೆಗೆ ಸಿಲುಕಿಯಾರು. ಶುಭಸಂಖ್ಯೆ: 6

ತುಲಾ: ತಲೆನೋವು ತರುವಂತಹ ಹೇಳಿಕೆಗಳಿಂದ ವಿವಾದದ ಅಲೆಗಳು ಕೂಡ ಎದ್ದೇಳಬಹುದು. ಈ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ. ಶುಭಸಂಖ್ಯೆ: 8

ವೃಶ್ಚಿಕ: ಹುಸಿ ಕೋಪವನ್ನು ತೋರಿಸುವ ಮೂಲಕ ಹಿಂದೆ ಗೆಲುವು ಸಾಧಿಸಿದ್ದಿರಿ. ಸದ್ಯ ಆ ಉಪಾಯ ಪ್ರಯೋಜನವನ್ನೇನೂ ನೀಡದು. ಶುಭಸಂಖ್ಯೆ: 2

ಧನುಸ್ಸು: ನಿಮ್ಮನ್ನು ಗೌರವದಿಂದ ನೋಡುವಂತಹ ವ್ಯಕ್ತಿಗಳೂ ತಲ್ಲಣ ಉಂಟುಮಾಡಬಹುದು. ಜಾಣ್ಮೆಯಿಂದಲೇ ನಿಭಾಯಿಸಿ. ಶುಭಸಂಖ್ಯೆ: 4

ಮಕರ: ನಿಮ್ಮ ಆದೇಶವನ್ನು ಪಾಲಿಸುವ ಒಡನಾಡಿಗಳನ್ನು ಹುಡುಕಿ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಪಾಲಿನ ಯೋಗಕ್ಷೇಮ ಸಾಧ್ಯವಾಗಲಿದೆ. ಶುಭಸಂಖ್ಯೆ: 1

ಕುಂಭ: ನಿಮ್ಮ ಸಂಘಟನಾ ಶಕ್ತಿಯ ಕಾರಣದಿಂದ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಅತಿ ಎನ್ನಿಸುವ ಆತ್ಮವಿಶ್ವಾಸವನ್ನು ಬಿಡಿ. ಶುಭಸಂಖ್ಯೆ: 9

ಮೀನ: ಹೊಸ ರೀತಿಯ ಯೋಜನೆಗಾಗಿ ಒಮ್ಮೆಲೇ ದೊಡ್ಡ ಮಟ್ಟದ ಬಂಡವಾಳವನ್ನು ಸುರಿಯದಿರಿ. ತಜ್ಞರ ಬಳಿಯಲ್ಲೂ ಸ್ವಲ್ಪ ಕಾಲ ರ್ಚಚಿಸಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net