

ಮೇಷ: ಕಚೇರಿಯಲ್ಲಿ ಹೊಸ ಜವಾಬ್ದಾರಿ ಹೆಗಲೇರಲಿದೆ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಹಣದ ಅಡಚಣೆ ಉಂಟಾದೀತು. ಶುಭಸಂಖ್ಯೆ: 1
ವೃಷಭ: ವ್ಯಾಪಾರಸ್ಥರಿಗೆ ಸಾಧಾರಣ ಲಾಭ. ವೃಥಾ ತಿರುಗಾಟದಿಂದ ಬೇಸರ. ಆತ್ಮೀಯ ಸ್ನೇಹಿತನ ಮನೆಗೆ ಭೇಟಿ ಕೊಡುವಿರಿ. ಶುಭಸಂಖ್ಯೆ: 7
ಮಿಥುನ: ಸರ್ಕಾರಿ ಕೆಲಸಗಳಲ್ಲಿ ವಿಘ್ನ. ಅನವಶ್ಯಕ ಖರ್ಚು ವೆಚ್ಚದಿಂದ ನಿರಾಸೆಯಾದೀತು. ಆರೋಗ್ಯ ಸುಧಾರಣೆಯಾಗಿ ನೆಮ್ಮದಿ. ಶುಭಸಂಖ್ಯೆ: 7
ಕಟಕ: ವ್ಯಾಪಾರಿಗಳು, ಉದ್ಯೋಗಸ್ಥರಿಗೆ ಅಲ್ಪಮಟ್ಟಿನ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಮಾಧಾನ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 6
ಸಿಂಹ: ಶುಭಕಾರ್ಯ ಯತ್ನ ಸಫಲ. ಅಧಿಕ ತಿರುಗಾಟ. ತಾಯಿಯ ಮಾತನ್ನು ನಿರ್ಲಕ್ಷಿಸಬೇಡಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 5
ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ. ಕೃಷಿಕರಿಗೆ ಪ್ರಗತಿ. ದಿನದ ಮಧ್ಯಭಾಗದಲ್ಲಿ ಚಿಂತೆ. ಸಂಜೆಯ ಹೊತ್ತಿಗೆ ಎಲ್ಲವೂ ನಿರಾಳ. ಶುಭಸಂಖ್ಯೆ: 4
ತುಲಾ: ಮಿತ್ರರಿಂದ ವಂಚನೆಯಾಗಿ ಅಸಮಾಧಾನ. ಕುಟುಂಬದಲ್ಲಿ ಸಮಾಧಾನ. ಮನೆಯಲ್ಲಿ ಮಂಗಳ ಕಾರ್ಯದ ಬಗ್ಗೆ ನಿರ್ಧಾರ. ಶುಭಸಂಖ್ಯೆ: 3
ವೃಶ್ಚಿಕ: ಪತ್ನಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡುವಿರಿ. ಕುಟುಂಬದಲ್ಲಿ ಸಡಗರ. ವ್ಯಾಪಾರಸ್ಥರಿಗೆ ಅಧಿಕ ಲಾಭವಾಗಿ ಸಂತೋಷ. ಶುಭಸಂಖ್ಯೆ: 2
ಧನಸ್ಸು: ಕಾರ್ಯಸಾಧನೆಗಾಗಿ ಪಯಣ. ಅನವಶ್ಯಕ ಖರ್ಚು. ಮಾತಿನಿಂದ ಶತ್ರು ಸೃಷ್ಟಿಯಾಗಬಹುದು, ಯೋಚಿಸಿ ಮಾತನಾಡಿ. ಶುಭಸಂಖ್ಯೆ: 8
ಮಕರ: ದುಷ್ಟ ಜನರ ಸಹವಾಸ. ಮನಸ್ಸಿಗೆ ಚಿಂತೆ. ಕಚೇರಿಯಲ್ಲಿ ಗೌರವಕ್ಕೆ ಧಕ್ಕೆ ಉಂಟಾಗಬಹುದು. ಪತ್ನಿಗೆ ಅನಾರೋಗ್ಯ. ಶುಭಸಂಖ್ಯೆ: 6
ಕುಂಭ: ಅನವಶ್ಯಕವಾಗಿ ಧನವ್ಯಯ. ಕೃಷಿಯಲ್ಲಿ ಅಲ್ಪ ಲಾಭ. ಹಿತೈಷಿಗಳಿಂದ ಕಿರುಕುಳ. ಕೋರ್ಟು ವ್ಯವಹಾರಗಳಲ್ಲಿ ಅಡಚಣೆ. ಶುಭಸಂಖ್ಯೆ: 8
ಮೀನ : ವ್ಯಾಪಾರ ಉದ್ಯೋಗಗಳಲ್ಲಿ ಪ್ರಗತಿ. ಸಾರ್ವಜನಿಕ ಜೀವನದಲ್ಲಿ ಮನ್ನಣೆ. ನಿರೀಕ್ಷಿಸಿದ ಧನಲಾಭ. ಕುಟುಂಬದಲ್ಲಿ ಸಂತಸ. ಶುಭಸಂಖ್ಯೆ: 9