ಈ ರಾಶಿಯವರಿಗೆ ದಿನಾಂತ್ಯದಲ್ಲಿ ಸಿಹಿಸುದ್ದಿ: ನಿತ್ಯ ಭವಿಷ್ಯ

Nithya Bhavishya
Published on

ಮೇಷ: ದಿನಸಿ ವ್ಯಾಪಾರಸ್ಥರಿಗೆ ಪ್ರಗತಿ ಇದೆ. ಅನವಶ್ಯಕ ಅಪವಾದಗಳು ಬರಬಹುದು, ಹುಷಾರಾಗಿರಿ. ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 7

ವೃಷಭ: ಕಚೇರಿಯ ಒತ್ತಡದಿಂದ ಪಾರಾಗುವಿರಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 2

ಮಿಥುನ: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ. ಸಾಂಸಾರಿಕ ಜೀವನ ಉತ್ತಮಗೊಳ್ಳಲಿದೆ. ತಂದೆಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 6

ಕಟಕ: ಅಚಾನಕ್ ಸಮಸ್ಯೆಗಳು ಬರಬಹುದು. ಆದರೆ ಕುಟುಂಬದವರ ಸಹಕಾರದಿಂದ ಪರಿಹಾರ ಆಗುತ್ತದೆ. ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 2

ಸಿಂಹ: ಹಿರಿಯರ ಮಾತನ್ನು ಆಲಿಸುವ ತಾಳ್ಮೆಯಿರಲಿ. ಹಿತಶತ್ರುಗಳು ಕೇಡು ಮಾಡಬಹುದು. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 6

ಕನ್ಯಾ: ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಧಾರ್ವಿುಕ ಕಾರ್ಯಗಳಲ್ಲಿ ಭಾಗವಹಿಸಿ. ಮೇಲಧಿಕಾರಿಗಳಿಂದ ಬೈಗುಳ. ಶುಭಸಂಖ್ಯೆ: 5

ತುಲಾ: ಮನೆಯಲ್ಲಿ ಶುಭ ಸಮಾರಂಭದ ಸಡಗರ. ನನೆಗುದಿಗೆ ಬಿದ್ದ ಆಸ್ತಿ ವಿಚಾರಕ್ಕೆ ರ್ತಾಕ ಅಂತ್ಯ. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 3

ವೃಶ್ಚಿಕ: ಆಸ್ತಿ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವಿರಿ. ಆತ್ಮಾಭಿಮಾನಕ್ಕೆ ಧಕ್ಕೆ ತರುವ ಘಟನೆ ನಡೆದೀತು. ಸ್ನೇಹಿತನ ಭೇಟಿ. ಶುಭಸಂಖ್ಯೆ: 6

ಧನುಸ್ಸು: ನಿಮ್ಮ ಪರಿಶ್ರಮಕ್ಕೆ ತಕ್ಕ ಫಲವಿದೆ. ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು, ಕಾಳಜಿ ವಹಿಸಿ. ಅನವಶ್ಯಕ ಖರ್ಚು ನಿಯಂತ್ರಿಸಿ. ಶುಭಸಂಖ್ಯೆ: 9

ಮಕರ: ನೆರೆಯವರೊಂದಿಗೆ ಭಿನ್ನಾಭಿಪ್ರಾಯ. ಮಿತಿಮೀರಿದ ಆಹಾರ ಸೇವನೆಯಿಂದ ಆರೋಗ್ಯ ಸಮಸ್ಯೆ. ಕಚೇರಿಯಲ್ಲಿ ಒತ್ತಡ. ಶುಭಸಂಖ್ಯೆ: 1

ಕುಂಭ: ವಾಹನ ಚಾಲನೆಯಲ್ಲಿ ಎಚ್ಚರ. ಸಹೋದರರಿಂದ ಸಹಾಯ ಸಿಗಲಿದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಶುಭಸಂಖ್ಯೆ: 4

ಮೀನ: ಕೆಲ ವಿಭಾಗದಲ್ಲಿ ಸೋಲು. ಮಧ್ಯಸ್ಥಿಕೆ ವ್ಯವಹಾರದಲ್ಲಿ ಲಾಭ. ಆತ್ಮೀಯರ ವಿಯೋಗ ಸಾಧ್ಯತೆ. ದಿನಾಂತ್ಯಕ್ಕೆ ಆಯಾಸ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net