ನಿತ್ಯಭವಿಷ್ಯ| ಈ ರಾಶಿಯವರು ಇಂದು ಹಿರಿಯರೊಡನೆ ಕಷ್ಟಗಳನ್ನು ಮುಕ್ತವಾಗಿ ಹಂಚಿಕೊಂಡರೆ ಉತ್ತಮ

Nitya-Bhavishya-vvani-1-2-1
Published on

ಮೇಷ: ಒಮ್ಮೆಲೇ ಅನೇಕ ದಾರಿಗಳು ಎದುರಾಗುತ್ತವೆ. ಆದರೂ ಕೂಡ ರ್ತಾಕತೆಯಿಂದ ಸೂಕ್ತವಾದ ದಾರಿಯನ್ನು ಆರಿಸಿಕೊಳ್ಳಿ. ಶುಭಸಂಖ್ಯೆ: 7

ವೃಷಭ: ನೀವು ಸರಿಯಾಗಿಯೇ ವ್ಯವಹಾರ ಮಾಡಲು ಹೊರಡುತ್ತೀರಿ. ಕೆಲವು ಕಿಡಿಗೇಡಿಗಳಿಂದ ತೊಂದರೆ ಎದುರಾಗಬಹುದು. ಶುಭಸಂಖ್ಯೆ: 4

ಮಿಥುನ: ಹೊರನೋಟಕ್ಕೆ ಎಲ್ಲವೂ ಸರಿಯಾಗಿ ಇದ್ದಂತೆ ಕಾಣಿಸಬಹುದು. ಆದರೆ ಥಟ್ಟನೆ ಕೆಲವು ಬಗೆಯ ಕಿರಿಕಿರಿಗಳು ಎದುರಾಗಬಹುದು. ಶುಭಸಂಖ್ಯೆ: 9

ಕಟಕ: ಧನಲಾಭದ ಮಾರ್ಗಗಳನ್ನು ಸಮಂಜಸವಾಗಿ ತಿಳಿದುಕೊಂಡು ಮುಂದೆ ಹೆಜ್ಜೆ ಇಡುವುದಕ್ಕೆ ವರ್ತಮಾನ ಸಹಕಾರ ನೀಡಲಿದೆ. ಶುಭಸಂಖ್ಯೆ: 6

ಸಿಂಹ: ಹತ್ತಿರದವರಿಂದ ಕೆಲವು ರೀತಿಯ ನೋವುಗಳನ್ನು ಎದುರಿಸಲು ಸಿದ್ಧರಾಗಿ. ಹಳೆಯ ಅನುಭವವೇ ಸಂಜೀವಿನಿಯಾಗಿ ರಕ್ಷಿಸಲಿದೆ. ಶುಭಸಂಖ್ಯೆ: 8

ಕನ್ಯಾ: ಪರಿಶ್ರಮವೇ ಇರದೆ ಒಳದಾರಿಗಳಲ್ಲಿಯೇ ಕೆಲಸವನ್ನು ಮುಗಿಸಲು ಸಾಧ್ಯ ಎಂಬಂತಹ ನಂಬಿಕೆಯು ಕೈಕೊಡಬಹುದು. ಶುಭಸಂಖ್ಯೆ: 3

ತುಲಾ: ಮೃದು ಸ್ವಭಾವದವರಾದ ನಿಮ್ಮನ್ನು ಕೆಲವರು ತೊಂದರೆಗೆ ಸಿಲುಕಿಸಬಹುದು. ಜಾಣ್ಮೆಯಿಂದ ಅದನ್ನು ತಪ್ಪಿಸಿಕೊಂಡರೆ ಯುಕ್ತ. ಶುಭಸಂಖ್ಯೆ: 1

ವೃಶ್ಚಿಕ: ವೃತ್ತಿಪರತೆಯನ್ನು ಪ್ರದರ್ಶಿಸಿದರೆ ವಿವಿಧ ದಿಕ್ಕುಗಳಲ್ಲಿ ಹಲವಾರು ರೀತಿಯ ಅವಕಾಶಗಳು ಅರಳಬಹುದಾಗಿದೆ. ಗಮನಿಸಿ. ಶುಭಸಂಖ್ಯೆ: 5

ಧನುಸ್ಸು: ಕೃಷಿಯ ವಿಚಾರದಲ್ಲಿ ಹಿಂದಿನ ಕೆಲವು ತಪ್ಪುಗಳು ಮತ್ತೆ ಮತ್ತೆ ಘಟಿಸದಂತೆ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಿದರೆ ಲಾಭವುಂಟಾಗಲಿದೆ. ಶುಭಸಂಖ್ಯೆ: 2

ಮಕರ: ವ್ಯಾಜ್ಯದ ವಿಚಾರದಲ್ಲಿ ನಿಮ್ಮ ಕೆಲವು ಹತ್ತಿರದ ಬಂಧುಗಳೇ ನೈತಿಕವಾದ ಬೆಂಬಲ ನೀಡಲಿದ್ದಾರೆ. ಶಿವನನ್ನು ಭಕ್ತಿಯಿಂದ ಧ್ಯಾನಿಸಿ. ಶುಭಸಂಖ್ಯೆ: 7

ಕುಂಭ: ಹೊಸದಾದ ಕೆಲಸದ ಬಗೆಗೆ ವಿಶೇಷ ನಿರೀಕ್ಷೆ ಹೊಂದಿದ್ದೀರಿ. ಅದಕ್ಕೆ ಉತ್ತಮವಾದ ಅವಕಾಶ ಎದುರಾಗುವ ಸಾಧ್ಯತೆಗಳಿವೆ. ಶುಭಸಂಖ್ಯೆ: 4

ಮೀನ: ಹಿರಿಯರು ನೆರವು ನೀಡುತ್ತಾರೆ. ಅವರೊಡನೆ ನಿಮ್ಮ ಕಷ್ಟಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಹಿಂಜರಿಯದಿರಿ. ಒಳಿತಾಗಲಿದೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net