

ಮೇಷ: ತೊಂದರೆ ತಾಪತ್ರಯಗಳು ದೂರವಾಗಿ ಮಾನಸಿಕ ನೆಮ್ಮದಿ. ಗೆಳೆಯರೊಂದಿಗೆ ನಿಮ್ಮ ಸಂತೋಷವನ್ನು ಹಂಚಿಕೊಳ್ಳಿ. ಶುಭಸಂಖ್ಯೆ: 6
ವೃಷಭ: ಹಿತಮಿತ ಮಾತುಗಳಿಂದ ಜನಮನವನ್ನು ಗೆಲ್ಲುತ್ತೀರಿ. ಜನಪ್ರತಿನಿಧಿಗಳಿಗೆ, ಮುಂದಾಳುಗಳಿಗೆ ವಿಶೇಷ ದಿನ. ತಾಳ್ಮೆ ಇರಲಿ. ಶುಭಸಂಖ್ಯೆ: 9
ಮಿಥುನ: ಬಹುದಿನದ ಬಯಕೆಯನ್ನು ಕುಟುಂಬದೊಂದಿಗೆ ಸಮಾಲೋಚಿಸಿ. ವ್ಯಾಪಾರ ಆರಂಭಿಸಲು ದೃಢ ನಿರ್ಧಾರ ತೆಗೆದುಕೊಳ್ಳಿ. ಶುಭಸಂಖ್ಯೆ: 2
ಕಟಕ: ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ನಿಮ್ಮ ಹಳೆಯ ಯೋಜನೆಯನ್ನು ಕಾರ್ಯಗತಗೊಳಿಸಿ. ಸ್ನೇಹಿತನ ಭೇಟಿ. ಶುಭಸಂಖ್ಯೆ: 7
ಸಿಂಹ: ನಿಮ್ಮ ಪ್ರತಿಭೆಗೆವಿಶೇಷ ಪುರಸ್ಕಾರ. ಮಿತಿಮೀರಿದ ಉತ್ಸಾಹದಿಂದ ತೊಂದರೆಯಾಗಬಹುದು. ಯೋಚಿಸಿ ಮುನ್ನಡೆಯಿರಿ. ಶುಭಸಂಖ್ಯೆ: 2
ಕನ್ಯಾ: ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿದಲ್ಲಿ ಯಶಸ್ಸು. ಪ್ರಭಾವಿಗಳ ಜತೆ ಸಂಪರ್ಕ ಬೆಳೆಯುತ್ತದೆ. ಇತಿ-ಮಿತಿಯ ಅರಿವಿರಲಿ. ಶುಭಸಂಖ್ಯೆ: 7
ತುಲಾ: ಉದ್ದಿಮೆಗಳಿಗೆ ಸಂಬಂಧಿಸಿದಂತೆ ವಿಶೇಷ ವ್ಯಕ್ತಿಯ ಭೇಟಿ. ಅನಿರೀಕ್ಷಿತ ತಿರುವು. ಹಿರಿಯರ ಆರೋಗ್ಯದ ಕಡೆ ಗಮನ ವಹಿಸಿ. ಶುಭಸಂಖ್ಯೆ: 9
ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ಹಿಡಿತ ಇರಲಿ. ಅತ್ಯಂತ ಗಮನಾರ್ಹ ಸಾಧನೆ ನಿಮ್ಮದಾಗಲಿದೆ. ದೂರ ಪ್ರಯಾಣದ ಸಾಧ್ಯತೆ. ಶುಭಸಂಖ್ಯೆ: 5
ಧನುಸ್ಸು: ಕುಟುಂಬದವರಿಗೆ ಭರವಸೆ ಮೂಡಿಸುವಿರಿ. ಚಲನಚಿತ್ರ ನಟರಿಗೆ ಅನಾರೋಗ್ಯದ ಸಾಧ್ಯತೆ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 8
ಮಕರ: ಕೈಬಿಟ್ಟ ವ್ಯವಹಾರದಲ್ಲಿ ಅನಿರೀಕ್ಷಿತ ಯಶಸ್ಸು. ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣಕಾಸಿನ ವಿಚಾರದಲ್ಲಿ ಅಡಚಣೆ. ಶುಭಸಂಖ್ಯೆ: 7
ಕುಂಭ: ವಿದ್ಯಾಭ್ಯಾಸಿಗಳಿಗೆ ವಿಶೇಷ ಪ್ರಗತಿ. ಯೋಜಿತ ಕಾರ್ಯಗಳಲ್ಲಿ ಇದ್ದ ಆತಂಕ ದೂರ. ಹೃದಯ ತೊಂದರೆ ಬರುವ ಸಾಧ್ಯತೆ. ಶುಭಸಂಖ್ಯೆ: 2
ಮೀನ: ಯಾವುದೇ ವಿಷಯದ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ. ಹೊಸ ವ್ಯಾಪಾರವನ್ನು ಪ್ರಾರಂಭಿಸುವವರಿಗೆ ಶುಭದಿನ. ಶುಭಸಂಖ್ಯೆ: 1