

ಮೇಷ: ಮಾನಸಿಕ ಆಘಾತ ಮತ್ತು ಚಿಂತೆ.ಗುರು ದರ್ಶನದಿಂದ ನೆಮ್ಮದಿ. ಸರ್ಕಾರಿ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುವ ಸಾಧ್ಯತೆ. ಶುಭಸಂಖ್ಯೆ: 9
ವೃಷಭ: ಸ್ವಯಂ ತಪ್ಪಿನಿಂದ ತೊಂದರೆ. ಗೃಹ ಮತ್ತು ಉದ್ಯೋಗ ಬದಲಾವಣೆ. ಹತ್ತಿರದ ಪ್ರಯಾಣದಿಂದ ಸ್ವಲ್ಪಮಟ್ಟಿನ ಕಷ್ಟ. ಶುಭಸಂಖ್ಯೆ: 3
ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ. ಆರ್ಥಿಕ ಸಮಸ್ಯೆ ಕಾಡ ಬಹುದು. ಮಾತಿನಿಂದ ಶತ್ರುಗಳು ಸೃಷ್ಟಿಯಾಗುವರು. ಅಪರಿಚಿತರಿಂದ ಮೋಸ. ಶುಭಸಂಖ್ಯೆ: 6
ಕಟಕ: ಆರೋಗ್ಯದಲ್ಲಿ ಏರುಪೇರು. ಮಕ್ಕಳ ಭವಿಷ್ಯದ ಚಿಂತೆ. ಪ್ರೀತಿ ಪ್ರೇಮದ ವಿಚಾರದಿಂದ ಆತಂಕ ಎದುರಿಸಬೇಕಾದೀತು. ಶುಭಸಂಖ್ಯೆ: 5
ಸಿಂಹ: ಸಾಲ ಮಾಡುವ ಸಂಭವ. ಜಿಪುಣತನದಿಂದ ಧನ ನಷ್ಟ. ಮನೆಯ ವಾತಾವರಣದಲ್ಲಿ ಗೊಂದಲ. ಸಹನೆಯಿಂದ ವ್ಯವಹರಿಸಿ. ಶುಭಸಂಖ್ಯೆ: 7
ಕನ್ಯಾ: ಸಹೋದರಿಯರಿಂದ ಸಹಕಾರ. ಸಾಲದ ಪ್ರಮಾಣ ಜಾಸ್ತಿಯಾಗುವುದು. ಆರೋಗ್ಯ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಯ ಭೀತಿ. ಶುಭಸಂಖ್ಯೆ:1
ತುಲಾ: ಆರ್ಥಿಕ ಪರಿಸ್ಥಿತಿ ಉತ್ತಮ. ಹಣಕಾಸಿನ ವಿಚಾರದಲ್ಲಿ ಗೊಂದಲ ಉಂಟಾಗುವುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 7
ವೃಶ್ಚಿಕ: ಫಲ ಸಿಗುವ ಹಾದಿಯಲ್ಲಿ ಅಡ್ಡಿ ಆತಂಕ ಎದುರಾಗುವುದು. ಮಕ್ಕಳಿಂದ ನೋವು. ಆಸ್ತಿ ವಹಿವಾಟಿನಿಂದ ನಷ್ಟ. ಶುಭಸಂಖ್ಯೆ: 4
ಧನುಸ್ಸು: ಪಾಲುದಾರಿಕೆಯಲ್ಲಿ ನಷ್ಟ ಉಂಟಾದೀತು. ಕೊಟ್ಟ ಸಾಲ ಮರುಪಾವತಿಯಾಗುವುದಿಲ್ಲ. ಆತ್ಮೀಯರು ದೂರಾಗುವ ಸಾಧ್ಯತೆ. ಶುಭಸಂಖ್ಯೆ: 3
ಮಕರ: ಮಕ್ಕಳಿಂದ ಅನುಕೂಲ ಮತ್ತು ಲಾಭ. ಮುಖ್ಯ ತೀರ್ವನಗಳಲ್ಲಿ ಗೊಂದಲ. ಕುಟುಂಬದಲ್ಲಿ ಬಿಗುವಿನ ವಾತಾವರಣ. ಶುಭಸಂಖ್ಯೆ: 8
ಕುಂಭ: ಉದ್ಯೋಗ ಕಳೆದುಕೊಳ್ಳುವ ಆತಂಕ. ನಿರಾಸೆ, ಮಂದತ್ವ, ಆಲಸ್ಯ ಕಾಡುವುದು. ಆತುರದ ಸ್ವಭಾವದಿಂದ ತೊಂದರೆ. ಶುಭಸಂಖ್ಯೆ: 6
ಮೀನ: ಕೆಲಸ ಕಾರ್ಯಗಳಲ್ಲಿ ನೆಮ್ಮದಿ ಇಲ್ಲ. ಹೆಣ್ಣುಮಕ್ಕಳ ಶಿಕ್ಷಣದ ಚಿಂತೆ ಬಾಧಿಸಲಿದೆ. ಆರೋಗ್ಯದಲ್ಲಿ ವ್ಯತ್ಯಾಸ. ವೈದ್ಯರ ಮೊರೆಹೋಗಿ. ಶುಭಸಂಖ್ಯೆ: 9