

ಮೇಷ: ಕೈಗೊಂಡ ಕೆಲಸದ ಖರ್ಚು ಅಂದಾಜಿಗಿಂತ ಹೆಚ್ಚಾಗಿದ್ದರಿಂದ ಎಲ್ಲರ ಮೇಲೆಯೂ ಕೋಪ ತೋರಿಸುತ್ತೀರಿ. ಅದೃಷ್ಟಸಂಖ್ಯೆ: 7
ವೃಷಭ: ಹೊಸ ವಸ್ತ್ರ ಖರೀದಿಸುವ ಆಲೋಚನೆ ಬಂದರೂ ಸಮಯ ಇರುವುದಿಲ್ಲ. ಕೆಲವರಿಗೆ ಹಣದ ಸಮಸ್ಯೆ ಆಗಲಿದೆ. ಅದೃಷ್ಟಸಂಖ್ಯೆ: 1
ಮಿಥುನ: ಆರಂಭದ ಬದಲು ಮಧ್ಯದಿಂದ ಕೆಲಸ ಶುರು ಮಾಡಿ ಮುಗಿಸಲಾಗದೆ ಒದ್ದಾಡುವಿರಿ. ಶನಿಯನ್ನು ಆರಾಧಿಸಿ. ಅದೃಷ್ಟಸಂಖ್ಯೆ: 6
ಕಟಕ: ಎಲ್ಲರಿಗೂ ಬಹಳ ಭಿನ್ನವಾಗಿ ಕಾಣಿಸುತ್ತೀರಿ. ನಿಮ್ಮ ಬದಲಾವಣೆಗೆ ಕೆಲವರು ಕಾರಣ ಕೂಡ ಕೇಳಬಹುದು. ಅದೃಷ್ಟಸಂಖ್ಯೆ: 4
ಸಿಂಹ: ಸಿಟ್ಟನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ನಿಮ್ಮ ಮುಖ್ಯ ಕೆಲಸಕ್ಕೆ ವಿಳಂಬ ಉಂಟಾಗಬಹುದು. ಅದೃಷ್ಟಸಂಖ್ಯೆ: 2
ಕನ್ಯಾ: ಇತರರು ನಿಮ್ಮ ಹೊಸ ಆಲೋಚನೆಗಳನ್ನು ಗುಟ್ಟಾಗಿ ಬಳಸಬಹುದು. ಅದನ್ನು ತಪ್ಪಿಸಲು ಆಗದೆ ಪರಿತಪಿಸುವಿರಿ. ಅದೃಷ್ಟಸಂಖ್ಯೆ: 5
ತುಲಾ: ತಿಳಿದುಕೊಳ್ಳುವ ಉದ್ದೇಶ ಇಲ್ಲದೆ ಬಹಳ ಪ್ರಶ್ನೆಗಳನ್ನು ಕೇಳುತ್ತೀರಿ. ಊಟದ ವಿಚಾರದಲ್ಲಿ ಹೆಚ್ಚಿನ ಎಚ್ಚರ ವಹಿಸಿ. ಅದೃಷ್ಟಸಂಖ್ಯೆ: 7
ವೃಶ್ಚಿಕ: ತಂದೆಯಿಂದ ಸಂತಸವಿದೆ. ಉಡುಗೊರೆ ಸಿಕ್ಕಿದ ಅಥವಾ ನೆಚ್ಚಿನ ಹೊಸ ಬಟ್ಟೆಯನ್ನು ಧರಿಸದಿರುವುದು ಉತ್ತಮ. ಅದೃಷ್ಟಸಂಖ್ಯೆ: 9
ಧನಸ್ಸು: ಬೇಗ ಕೆಲಸ ಮುಗಿಸೋಣ ಎಂಬ ಆತುರದಲ್ಲಿ ತಪ್ಪು ಮಾಡುವಿರಿ. ಸ್ವಲ್ಪ ತಾಳ್ಮೆ ವಹಿಸಿ ಕೆಲಸ ಮಾಡಿ. ಅದೃಷ್ಟಸಂಖ್ಯೆ: 6
ಮಕರ: ತಮಾಷೆಯ ಮಾತು ಅಪಾರ್ಥವಾಗಿ ನೀವು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದೀತು. ಆಡುವ ಮಾತಿನಲ್ಲಿ ಎಚ್ಚರ ವಹಿಸಿ. ಅದೃಷ್ಟಸಂಖ್ಯೆ: 1
ಕುಂಭ: ಬಂಗಾರ ಕೊಂಡುಕೊಳ್ಳುವ ಯತ್ನ ಯಶಸ್ವಿ ಆಗಬಹುದು. ಉಳಿದವರು ಅದಕ್ಕೆಂದು ಹಣ ಕೂಡಿಟ್ಟರೆ ಉತ್ತಮ. ಅದೃಷ್ಟಸಂಖ್ಯೆ: 9
ಮೀನ: ಪರರ ಯಶಸ್ಸನ್ನು ನೋಡಿ ಹಾಗೆಯೇ ಮಾಡಲು ಯತ್ನಿಸುವಿರಿ. ಶುಭಕಾರ್ಯವಾದರೆ ಯಶಸ್ಸಿದೆ. ಆಲಸ್ಯ ಬಿಡಿ. ಅದೃಷ್ಟಸಂಖ್ಯೆ: 5