ಈ ರಾಶಿಯವರಿಗಿಂದು ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ತ್ರೀಯರಿಗೆ ಅನುಕೂಲ. ಕೆಲಸ ಕಾರ್ಯಗಳಲ್ಲಿ ಜಯ. ಉದ್ಯೋಗದಲ್ಲಿ ಬಡ್ತಿ. ಸುಖ ಭೋಜನ ಪ್ರಾಪ್ತಿ. ಮಾನಸಿಕ ನೆಮ್ಮದಿ. ಶುಭಸಂಖ್ಯೆ: 5

ವೃಷಭ: ವಿಪರೀತ ಖರ್ಚು ಉಂಟಾದೀತು. ಕೆಲಸ ಕಾರ್ಯಗಳಲ್ಲಿ ಸಾಧನೆ. ಸ್ಥಳ ಬದಲಾವಣೆ. ಮನಃಕ್ಲೇಷ. ಮಾತೃವಿನಿಂದ ಧನ ಲಾಭ. ಶುಭಸಂಖ್ಯೆ: 9

ಮಿಥುನ: ಸ್ನೇಹಿತರಿಂದ ಸಹಾಯ. ಅಧಿಕ ತಿರುಗಾಟ. ಋಣ ವಿಮೋಚನೆ. ನಾನಾ ರೀತಿಯ ಸಂಪಾದನೆ ಆಗಲಿದೆ. ವಿವಾಹ ಯೋಗ. ಶುಭಸಂಖ್ಯೆ: 2

ಕಟಕ: ಹಲವಾರು ರೀತಿಯಲ್ಲಿ ಅನುಕೂಲ. ಐಶ್ವರ್ಯ ವೃದ್ಧಿಯಾಗುವುದು. ಶತ್ರುನಾಶ. ಷೇರು ವ್ಯವಹಾರದಲ್ಲಿ ಎಚ್ಚರ. ಕುಟುಂಬ ಸೌಖ್ಯ. ಶುಭಸಂಖ್ಯೆ: 1

ಸಿಂಹ: ಪ್ರಿಯ ಜನರನ್ನು ಭೇಟಿ ಮಾಡುವಿರಿ. ಮಂಗಳ ಕಾರ್ಯಗಳಲ್ಲಿ ಭಾಗಿ. ಸ್ಥಿರಾಸ್ತಿ ಮಾರಾಟ. ಆದಾಯಕ್ಕಿಂತ ಖರ್ಚು ಹೆಚ್ಚು. ಶುಭಸಂಖ್ಯೆ: 7

ಕನ್ಯಾ: ವ್ಯಾಸಂಗಕ್ಕೆ ತೊಂದರೆ. ದಾಯಾದಿಗಳ ಕಲಹ. ಸಲ್ಲದ ಅಪವಾದ ಬಂದೀತು. ಯತ್ನ ಕಾರ್ಯದಲ್ಲಿ ಜಯ. ವ್ಯರ್ಥ ಧನಹಾನಿ. ಶುಭಸಂಖ್ಯೆ: 3

ತುಲಾ: ಸಾಧಾರಣ ಲಾಭ ಬರಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣುವುದು. ವೃಥಾ ತಿರುಗಾಟ ಮಾಡುವಿರಿ. ಬಂಧುಗಳಲ್ಲಿ ಮನಸ್ತಾಪ. ಶುಭಸಂಖ್ಯೆ: 9

ವೃಶ್ಚಿಕ: ಅಲ್ಪ ಪ್ರಗತಿ ಕಾಣಿಸಲಿದೆ. ಸೇವಕರಿಂದ ತೊಂದರೆಯ ಸಾಧ್ಯತೆ. ಮಿತ್ರರಲ್ಲಿ ವಿರೋಧ ಉಂಟಾದೀತು. ಕೃಷಿಕರಿಗೆ ಅಲ್ಪ ಲಾಭ. ಶುಭಸಂಖ್ಯೆ: 6

ಧನುಸ್ಸು: ಕುಟುಂಬದಲ್ಲಿ ಸೌಖ್ಯ. ವಿವಾಹ-ಮಂಗಳ ಕಾರ್ಯಗಳಲ್ಲಿ ಭಾಗಿ. ಮಾನಸಿಕ ನೆಮ್ಮದಿ. ಹಣಕಾಸು ಖರ್ಚು. ಈ ದಿನ ಮಿಶ್ರ ಫಲ. ಶುಭಸಂಖ್ಯೆ: 6

ಮಕರ: ಈ ದಿನ ಅಲ್ಪಮಟ್ಟದ ಪ್ರಗತಿ ಆಗಲಿದೆ. ಮಿತ್ರರಲ್ಲಿ ಮಾತಿನ ಚಕಮಕಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 4

ಕುಂಭ: ಇಲ್ಲ ಸಲ್ಲದ ಅಪವಾದ. ಮಹಿಳೆಯರಿಗೆ ಶುಭ ಫಲ. ಚಂಚಲ ಮನಸ್ಸು. ಕಾರ್ಯಗಳಲ್ಲಿ ಎಚ್ಚರ. ನಂಬಿಕಸ್ಥರಿಂದ ಮೋಸ ಸಾಧ್ಯತೆ. ಶುಭಸಂಖ್ಯೆ: 2

ಮೀನ: ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ದೃಷ್ಟಿ ದೋಷ ಕಾಡಬಹುದು. ಗೆಳೆಯರಿಂದ ಅನರ್ಥ. ವಿದೇಶ ಪ್ರಯಾಣ. ವಿವಾಹ ಯೋಗ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net