

ಮೇಷ: ಕೃಷಿ ಕ್ಷೇತ್ರದಲ್ಲಿ ವಿಶೇಷ ಲಾಭ. ರಾಜಕೀಯ ಸಮೂಹದವರು ಎಚ್ಚರದಿಂದ ಇರುವುದು ಒಳ್ಳೆಯದು. ಮದುವೆಗೆ ಸಕಾಲ. ಶುಭಸಂಖ್ಯೆ: 9
ವೃಷಭ: ವಿದ್ಯಾಭ್ಯಾಸದಲ್ಲಿ ಕಾಳಜಿ ಅಗತ್ಯ. ಪ್ರಭಾವಿ ವ್ಯಕ್ತಿಯನ್ನು ಭೇಟಿ ಮಾಡುವಿರಿ. ಆರ್ಥಿಕತೆಯಲ್ಲಿ ಸುಧಾರಣೆಯಾಗಲಿದೆ. ಶುಭಸಂಖ್ಯೆ: 1
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಅಡೆತಡೆ ಉಂಟಾಗಬಹುದು. ವಿವಾಹ ಕಾರ್ಯ ಜರುಗಲಿದೆ. ಪಾಲುದಾರಿಕೆಯಲ್ಲಿ ಉತ್ತಮ ಗಳಿಕೆ. ಶುಭಸಂಖ್ಯೆ: 5
ಕಟಕ: ವಿವಾಹಕ್ಕೆ ಅಡ್ಡಿ ಉಂಟಾಗಬಹುದು. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ. ಶುಭಸಂಖ್ಯೆ: 8
ಸಿಂಹ: ಉದ್ಯೋಗ ಬದಲಿಸಲು ಇದು ಸೂಕ್ತ ಸಮಯವಲ್ಲ. ಬಟ್ಟೆ ವ್ಯಾಪಾರಸ್ಥರಿಗೆ ಶುಭ ಸಮಾಚಾರ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 2
ಕನ್ಯಾ: ತೀರ್ಮಾನಗಳಲ್ಲಿ ಎಚ್ಚರವಿರಲಿ. ರಂಗಕರ್ವಿುಗಳಿಗೆ ಹೆಚ್ಚಿನ ಲಾಭವಾಗಲಿದೆ. ಗೃಹ ನಿರ್ವಣಕ್ಕೆ ಅನುಕೂಲಕರ ವಾತಾವರಣ. ಶುಭಸಂಖ್ಯೆ: 4
ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಗೌರವ. ವಿಜ್ಞಾನಿಗಳಿಗೆ ನಿರೀಕ್ಷಿತ ಯಶಸ್ಸು ದೊರೆತು ಸಂತಸ. ಆರೋಗ್ಯದ ಕಡೆ ವಿಶೇಷ ಗಮನವಿರಲಿ. ಶುಭಸಂಖ್ಯೆ: 3
ವೃಶ್ಚಿಕ: ಔಷಧಿ ಮಾರಾಟದವರಿಗೆ ಬೇಡಿಕೆ. ಅಧಿಕಾರಿಗಳೊಂದಿಗೆ ವಾದ ವಿವಾದ. ಲೇವಾದೇವಿ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ. ಶುಭಸಂಖ್ಯೆ: 9
ಧನುಸ್ಸು: ಶ್ರಮಕ್ಕೆ ಯಶಸ್ಸು ದೊರೆಯಲಿದೆ. ಹಿರಿಯ ಅಧಿಕಾರಿಗಳಿಂದ ಕಿರುಕುಳ ಅನುಭವಿಸಬೇಕಾದೀತು. ವಕೀಲರಿಗೆ ಉತ್ತಮ ಸಮಯ. ಶುಭಸಂಖ್ಯೆ: 6
ಮಕರ: ಕಾರ್ಯದಲ್ಲಿ ಅತಿ ಒತ್ತಡದಿಂದ ಗೊಂದಲ. ವೈದ್ಯರಿಗೆ ಪ್ರತಿಷ್ಠೆ ಹೆಚ್ಚುತ್ತದೆ. ಗುತ್ತಿಗೆ ಕೆಲಸದಾರರಿಗೆ ಉತ್ತಮ ಆದಾಯವಿದೆ. ಶುಭಸಂಖ್ಯೆ: 5
ಕುಂಭ: ಯಂತ್ರೋಪಕರಣ ವಿಷಯದಲ್ಲಿ ಹುಷಾರಾಗಿರಿ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುವುದು. ಕೆಲಸಗಳ ಬಗ್ಗೆ ಗಮನವಿರಲಿ. ಶುಭಸಂಖ್ಯೆ: 4
ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ. ವ್ಯವಹಾರದಲ್ಲಿ ಯಶಸ್ಸು ನಿಮ್ಮದಾಗಲಿದೆ. ದಿನಸಿ ವ್ಯಾಪಾರಿಗಳಿಗೆ ಹೆಚ್ಚು ಆದಾಯ. ಶುಭಸಂಖ್ಯೆ: 8