

ಮೇಷ: ಬಂಧುಗಳ ಸಮಾಗಮ, ಕುಟುಂಬದಲ್ಲಿ ಚೇತೋಹಾರಿ ವಾತಾವರಣ. ಸಂಬಂಧವಿಲ್ಲದ ವಿಷಯಗಳಲ್ಲಿ ಮೂಗು ತೂರಿಸಬೇಡಿ. ಶುಭಸಂಖ್ಯೆ: 2
ವೃಷಭ: ಆರ್ಥಿಕ ವ್ಯವಹಾರಗಳಲ್ಲಿ ಯತ್ನ ಕಾರ್ಯ ವಿಫಲ. ಕುಟುಂಬದ ಹಿರಿಯರ ಅಗಲಿಕೆ. ಹೊಸ ಮನೆ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 7
ಮಿಥುನ: ಅಹಂಭಾವದ ಪ್ರದರ್ಶನ ಬೇಡ. ಪತ್ನಿ ಮೂಲದ ಧನಪ್ರಾಪ್ತಿ. ಉದ್ಯೋಗಿಗಳಿಗೆ ಕಾರ್ಯದೊತ್ತಡ. ಅಧಿಕಾರದಲ್ಲಿ ಆತಂಕ. ಶುಭಸಂಖ್ಯೆ: 2
ಕಟಕ: ಹಿರಿಯರಿಗೆ ಗೌರವ ಕೊಡಿ. ತಾಯಿಯ ಆರೋಗ್ಯದಲ್ಲಿ ಏರುಪೇರು. ಸ್ಥಗಿತಗೊಂಡ ಕಾರ್ಯಕ್ಕೆ ವೇಗ. ಜವಾಬ್ದಾರಿ ನಿರ್ವಹಿಸಿ. ಶುಭಸಂಖ್ಯೆ: 9
ಸಿಂಹ: ಭೂ ವ್ಯವಹಾರದಲ್ಲಿ ಮೋಸದ ಸಾಧ್ಯತೆ. ಹಲವುದಿನಗಳಿಂದ ಪಟ್ಟ ಪರಿಶ್ರಮಕ್ಕೆ ಸೂಕ್ತ ಫಲ. ಕಲಾವಿದರಿಗೆ ವಿಶೇಷ ದಿನ. ಶುಭಸಂಖ್ಯೆ: 5
ಕನ್ಯಾ: ಅನವಶ್ಯಕ ತಿರುಗಾಟ. ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿ. ಹಳೆಯ ಸಹಪಾಠಿಯ ಭೆೇಟಿ. ಧಾರ್ವಿುಕ ಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ: 6
ತುಲಾ: ಹಲವು ದಿನಗಳ ಪ್ರಯತ್ನಕ್ಕೆ ಇಂದು ಫಲ. ಕಚೇರಿಯಲ್ಲಿ ಇಂದು ಸವಾಲಿನ ದಿನ. ದಿನಾಂತ್ಯದಲ್ಲಿ ಸಿಹಿ ವಾರ್ತೆ ಕೇಳಲಿದ್ದೀರಿ. ಶುಭಸಂಖ್ಯೆ: 3
ವೃಶ್ಚಿಕ: ಸಾಮಾಜಿಕ ಗೌರವ ತರುವ ದಿನ. ವೆಚ್ಚವನ್ನು ನಿಯಂತ್ರಿಸಿ. ಬರಹಗಾರರಿಗೆ ಕೀರ್ತಿ. ನಕಾರಾತ್ಮಕ ಚಿಂತನೆಯಿಂದ ತುಮುಲ. ಶುಭಸಂಖ್ಯೆ: 6
ಧನುಸ್ಸು: ಹಿರಿಯರಿಗೆ ಅನಾರೋಗ್ಯದ ಸಮಸ್ಯೆ. ಆಕಸ್ಮಿಕ ಘಟನೆ ಸಾಧ್ಯತೆ. ಸಾಲಗಾರರಿಂದ ಕಿರಿಕಿರಿ. ಮಕ್ಕಳ ವಿಷಯದಲ್ಲಿ ಗೊಂದಲ. ಶುಭಸಂಖ್ಯೆ: 9
ಮಕರ: ಉದ್ದಿಮೆಯಲ್ಲಿ ಸಲಕರಣೆಗಳ ಕೊರತೆಯಿಂದ ನಷ್ಟ. ಮಕ್ಕಳ ಭವಿಷ್ಯದ ಚಿಂತೆ ಕಾಡಬಹುದು. ಗುರುಗಳ ಸಲಹೆ ಪಡೆದುಕೊಳ್ಳಿ. ಶುಭಸಂಖ್ಯೆ: 1
ಕುಂಭ: ಬಂಧು-ಮಿತ್ರರಿಂದ ಆರ್ಥಿಕ ಸಹಾಯ. ಮೇಲಧಿಕಾರಿಗಳಿಂದ ಪ್ರಶಂಸೆ. ಸಂಗಾತಿಯ ಅನಾರೋಗ್ಯ. ವಿಶೇಷ ಪುರಸ್ಕಾರ. ಶುಭಸಂಖ್ಯೆ: 8
ಮೀನ: ಸೌಂದರ್ಯವರ್ಧಕಗಳ ವ್ಯಾಪಾರಿಗಳಿಗೆ ವಿಶೇಷ ಲಾಭ. ಅನಿರೀಕ್ಷಿತ ಖರ್ಚು ಸಾಧ್ಯತೆ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗಿ. ಶುಭಸಂಖ್ಯೆ: 1