ನಿತ್ಯ ಭವಿಷ್ಯ| ಈ ರಾಶಿಯವರಿಗೆ ಇಂದು ಶುಭದಾಯಕ, ಅನಾರೋಗ್ಯದಿಂದ ವಿಮುಕ್ತಿ

Nitya-Bhavishya-vvani-1-2-1-1
Published on

ಮೇಷ: ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಗಮನಹರಿಸಿ. ಉದ್ಯೋಗ ಆಕಾಂಕ್ಷಿಗಳಿಗೆ ಯಶಸ್ಸು. ಶುಭಸಂಖ್ಯೆ:1

ವೃಷಭ: ವಕೀಲರಿಗೆ ಶುಭದಾಯಕ ದಿನ. ಉನ್ನತಾಧಿಕಾರಿಗಳಿಗೆ ಸುಸಮಯ. ಕಲಾವಿದರಿಗೆ ವಿಶೇಷ ಅವಕಾಶ, ಗೌರವ ಪ್ರಾಪ್ತಿ. ಶುಭಸಂಖ್ಯೆ: 4

ಮಿಥುನ: ಯಾವುದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳಬೇಡಿ. ಅನಗತ್ಯ, ಕೆಲಸಗಳನ್ನು ಮುಂದೂಡಿ. ಪ್ರತಿಭೆಗೆ ಸೂಕ್ತ ಮನ್ನಣೆ. ಶುಭಸಂಖ್ಯೆ: 8

ಕಟಕ: ಲೇವಾದೇವಿ ವ್ಯವಹಾರದಲ್ಲಿ ಲಾಭ. ಹೋಟೆಲ್ ವ್ಯಾಪಾರದಲ್ಲಿ ಉತ್ತಮ ಆದಾಯ. ಹಣವನ್ನು ಭವಿಷ್ಯದ ದಿನಗಳಿಗಾಗಿ ಉಳಿಸಿ. ಶುಭಸಂಖ್ಯೆ: 3

ಸಿಂಹ: ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ಅಹಂಕಾರ ಹೆಚ್ಚುವ ಸಾಧ್ಯತೆ. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಿರಿ. ಶುಭಸಂಖ್ಯೆ: 7

ಕನ್ಯಾ: ಭೂಮಿ ಅಥವಾ ಸ್ಥಿರಾಸ್ತಿ ಲಾಭವಿದೆ. ಜಾಣ್ಮೆಯಿಂದ ವ್ಯವಹರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ. ವಿವಾಹ ಯೋಗ. ಶುಭಸಂಖ್ಯೆ: 9

ತುಲಾ: ಯಂತ್ರ ತಯಾರಿಕೆಗೆ ಪ್ರೋತ್ಸಾಹ. ಭೂಮಿಯ ವ್ಯವಹಾರದಲ್ಲಿ ಲಾಭ. ಅತಿಯಾದ ಆತ್ಮವಿಶ್ವಾಸ ಅನಾಹುತ ಮಾಡಬಹುದು. ಶುಭಸಂಖ್ಯೆ: 2

ವೃಶ್ಚಿಕ: ಅಪನಿಂದನೆ. ಪರರ ವಿಷಯದಲ್ಲಿ ತಲೆಹಾಕಲು ಹೋಗುವುದು ಜಾಣರ ಲಕ್ಷಣವಲ್ಲ, ನೆನಪಿಡಿ. ಅಧಿಕಾರಿಗಳಿಗೆ ಒತ್ತಡ. ಶುಭಸಂಖ್ಯೆ: 8

ಧನುಸ್ಸು: ಗಣ್ಯ ವ್ಯಕ್ತಿಗಳ ಭೇಟಿಯಾಗಲಿದೆ. ಅನಾರೋಗ್ಯದಿಂದ ವಿಮುಕ್ತಿ ದೊರೆಯುವುದು. ವಿದ್ಯಾರ್ಜನೆಗಾಗಿ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 6

ಮಕರ: ಟ್ರಾವೆಲ್ ಏಜೆಂಟರಿಗೆ ಒಳ್ಳೆಯ ದಿನವಲ್ಲ. ವ್ಯಾಪಾರಸ್ಥರಿಗೆ ಸಾಲಬಾಧೆ. ವಾಹನ ಅಪಘಾತವಾದೀತು, ಜಾಗ್ರತೆಯಿಂದಿರಿ. ಶುಭಸಂಖ್ಯೆ: 7

ಕುಂಭ: ಬ್ಯಾಂಕಿಂಗ್ ಸಂಸ್ಥೆಗಳಿಗೆ ಆದಾಯ ಹೆಚ್ಚಲಿದೆ. ಕೋಪದ ಮೇಲೆ ಸದಾ ನಿಯಂತ್ರಣವಿರಲಿ. ಅವಕಾಶಕ್ಕಾಗಿ ಪ್ರಯತ್ನ ಅಗತ್ಯ. ಶುಭಸಂಖ್ಯೆ: 1

ಮೀನ: ವ್ಯಾಪಾರದಲ್ಲಿ ಚೇತರಿಕೆ. ಪತ್ನಿಯಿಂದ ಧನ ಸಹಾಯ ಪಡೆಯುವಿರಿ. ಮಾನಸಿಕ ಒತ್ತಡ ನಿವಾರಣೆಗೆ ಧ್ಯಾನದ ಮೊರೆಹೋಗಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net