

ಮೇಷ: ಪ್ರಭಾವೀ ವ್ಯಕ್ತಿಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕಾಗುವುದು. ಸಾಮಾಜಿಕ ಬದುಕಿನಲ್ಲಿ ಗೌರವಯುತವಾಗಿ ವರ್ತಿಸಿ. ಶುಭಸಂಖ್ಯೆ: 9
ವೃಷಭ: ವಿದ್ಯಾರ್ಥಿಗಳಿಗೆ ಸಾಧನೆಗೆ ಪೂರಕವಾದ ದಿನ. ಧನಾಗಮನದಲ್ಲಿ ವ್ಯತ್ಯಯ. ಸಿದ್ಧ ಉಡುಪು ಮಾರಾಟಗಾರರಿಗೆ ಶುಭದಿನ. ಶುಭಸಂಖ್ಯೆ:1
ಮಿಥುನ: ಕೆಲಸದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕು ಗುರಿ ಸಾಧನೆ ಇನ್ನೂ ಹತ್ತಿರವಾಗಲಿದೆ. ಸರ್ಕಾರಿ ಕೆಲಸದವರಿಗೆ ಅನುಕೂಲಕರ ದಿನ. ಶುಭಸಂಖ್ಯೆ: 5
ಕಟಕ: ಉದ್ಧಟತನ ಸೋಲಿಗೆ ಕಾರಣ. ಮನೆಯಲ್ಲಿ ಜವಾಬ್ದಾರಿ ಹೆಚ್ಚಲಿದೆ. ತಾತ್ಕಾಲಿಕ ಹುದ್ದೆಯಲ್ಲಿದ್ದವರಿಗೆ ಬದಲಾವಣೆ ಸೂಚನೆ. ಶುಭಸಂಖ್ಯೆ: 2
ಸಿಂಹ: ಅತಿ ಉತ್ಸಾಹದಿಂದ ಜೀವನದಲ್ಲಿ ಹೊಸ ತಿರುವು ಪಡೆದುಕೊಳ್ಳುವಿರಿ. ಧಾರ್ವಿುಕ ಮಾರ್ಗದರ್ಶಕರ ಸಹಾಯದಿಂದ ಸಮಾಧಾನ. ಶುಭಸಂಖ್ಯೆ: 7
ಕನ್ಯಾ: ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಸಾಧ್ಯತೆ. ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಿ. ಕನಸಿನ ಸಾಕಾರಕ್ಕೆ ಪರಿಶ್ರಮ ಬೇಕು. ಶುಭಸಂಖ್ಯೆ: 6
ತುಲಾ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭ್ಯ. ಜಟಿಲ ಸಮಸ್ಯೆಗಳನ್ನು ಸುಲಭವಾಗಿ ಬಗೆ ಹರಿಸಿಕೊಳ್ಳುವಿರಿ. ಶುಭಸಂಖ್ಯೆ:1
ವೃಶ್ಚಿಕ: ನಿರೀಕ್ಷಿಸಿದ ಕಾರ್ಯಗಳು ನೆರವೇರುವುದರಿಂದ ಮನಸ್ಸಿಗೆ ನೆಮ್ಮದಿ. ಬಿಡಿ ಯಂತ್ರೋಪಕರಣಗಳ ಮಾರಾಟದಿಂದ ಲಾಭ. ಶುಭಸಂಖ್ಯೆ: 4
ಧನುಸ್ಸು: ಅನುಮಾನಕ್ಕೆ ಎಡೆಮಾಡುವಂತಹ ಕೆಲಸ ನಿಮ್ಮಿಂದ ನಡೆಯಲಿದೆ. ಜಾಗ್ರತೆ. ಜನರೊಂದಿಗೆ ಹೆಚ್ಚು ಬೆರೆತರೆ ವ್ಯವಹಾರ ಸುಗಮ. ಶುಭಸಂಖ್ಯೆ: 9
ಮಕರ: ಮಂದಗತಿಯಲ್ಲಿರುವ ಕೆಲಸ ಬಿಟ್ಟುಬಿಡಿ. ಸಂತೋಷದ ಘಟನೆಗಳು ನಡೆಯಲಿವೆ. ವಿದ್ಯುತ್ ಉಪಕರಣ ಮಾರಾಟದಿಂದ ಲಾಭ. ಶುಭಸಂಖ್ಯೆ: 3
ಕುಂಭ: ಅತಿ ಓಡಾಟದಿಂದ ದೇಹಕ್ಕೆ ದಣಿವಾದರೂ ಮನಸ್ಸಿಗೆ ಹಿತವೆನಿಸುವುದು. ಸಾಂಸಾರಿಕವಾಗಿ ವೈದ್ಯಕೀಯ ಖರ್ಚು ಹೆಚ್ಚಲಿದೆ. ಶುಭಸಂಖ್ಯೆ: 3
ಮೀನ: ಕಚೇರಿ ಕೆಲಸಗಳಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ಇಷ್ಟು ದಿನ ನಿಮ್ಮಲ್ಲಿದ್ದ ಅಭದ್ರತೆಯ ಭಾವ ಬಿಟ್ಟು ಹೋಗಲಿದೆ. ಶುಭಸಂಖ್ಯೆ: 6