

ಮೇಷ: ಹೊಸ ಹೊಸ ಆಲೋಚನೆಗಳ ಮೂಲಕ ಕೆಲಸಕಾರ್ಯಗಳಿಗೂ ಹೊಸತನವನ್ನು ನೀಡಿ. ಲಾಭಕ್ಕೆ ದಾರಿ ತೆರೆದುಕೊಳ್ಳಲಿದೆ. ಶುಭಸಂಖ್ಯೆ: 8
ವೃಷಭ: ಪ್ರೀತಿಗೆ ಸಂಬಂಧಿಸಿದ ವಿಚಾರದಲ್ಲಿ ಹಲವರು ಹಳಿ ತಪ್ಪಿದ ಮಾರ್ಗವನ್ನೇ ತೋರಿಸಿಯಾರು. ಈ ಕುರಿತು ಎಚ್ಚರಿಕೆ ಇದ್ದಿರಲಿ. ಶುಭಸಂಖ್ಯೆ: 2
ಮಿಥುನ: ಆರೋಗ್ಯದ ವಿಚಾರದಲ್ಲಿ ಇದು ಸೂಕ್ಷ್ಮ ದಿನ. ಹೀಗಾಗಿ ಆಹಾರಸೇವನೆಯ ಬಗ್ಗೆ ಮಾತ್ರ ನಿರ್ಲಕ್ಷ್ಯನ್ನು ತೋರದಿರಿ. ಶುಭಸಂಖ್ಯೆ: 5
ಕಟಕ: ಕೃಷಿಭೂಮಿಯ ನೀರಿನ ವಿಚಾರದಲ್ಲಿನ ವಿವಾದವೊಂದು ಬಗೆಹರಿದು ನಿರಾಳತೆಯ ಅನುಭವ ಪಡೆಯಲಿದ್ದೀರಿ. ಶುಭಸಂಖ್ಯೆ: 3
ಸಿಂಹ: ಗಾಢ ಬಣ್ಣದ ಉಡುಪುಗಳನ್ನು ಧರಿಸುವುದು ಸದ್ಯಕ್ಕೆ ಉತ್ತಮ. ದೂರಪ್ರಯಾಣವನ್ನು ಮುಂದೂಡಿದರೆ ಕ್ಷೇಮವಿದೆ. ಶುಭಸಂಖ್ಯೆ: 9
ಕನ್ಯಾ: ಒಂದೇ ಒಂದು ಮಾತಿನಿಂದಾಗಿ ಅನೇಕ ದಿನಗಳ ಸ್ನೇಹ ಹಾಳಾದೀತು. ಮಾತಾಡುವಾಗ ಸಾಕಷ್ಟು ಜಾಗ್ರತೆ ವಹಿಸಿ. ಶುಭಸಂಖ್ಯೆ: 6
ತುಲಾ: ಕಲ್ಪನಾಲೋಕದಿಂದ ಹೊರಬಂದು ಎದುರಿಗಿರುವ ಕೆಲಸಗಳನ್ನು ಮಾಡಿ ಮುಗಿಸಿ. ಪ್ರಶಂಸೆಗೆ ಪಾತ್ರರಾಗುವಿರಿ. ಶುಭಸಂಖ್ಯೆ: 1
ವೃಶ್ಚಿಕ: ಮನೆ ಕಟ್ಟುವುದಕ್ಕೆ ಅಡ್ಡಿಯಾಗಿ ಪರಿಣಮಿಸಿದ್ದ ಅಡೆತಡೆಗಳು ಪೂರ್ಣ ನಿವಾರಣೆಯಾಗಲಿದೆ. ಇಷ್ಟದೇವತೆಯನ್ನು ಧ್ಯಾನಿಸಿ. ಶುಭಸಂಖ್ಯೆ: 4
ಧನುಸ್ಸು: ಸಿಡುಕುವುದರಿಂದ ಸುಸೂತ್ರವಾಗಿರುವ ಸಂಬಂಧ ಜಟಿಲವಾಗಬಹುದು. ಆದಷ್ಟು ವಿನಯದಿಂದ ವರ್ತಿಸಿ. ಶುಭಸಂಖ್ಯೆ: 7
ಮಕರ: ಹೊಸ ವಾಹನ ಖರೀದಿಸಲು ಬಯಸಿದ್ದೀರಿ. ಅದಕ್ಕೂ ಮೊದಲು ಅನುಭವಸ್ಥರ ಸಲಹೆ ಸೂಚನೆ ಪಡೆದುಕೊಳ್ಳಿ. ಶುಭಸಂಖ್ಯೆ: 8
ಕುಂಭ: ಕುಲದೇವರಿಗೆ ಸಿಹಿತಿನಿಸಿನ ನೈವೇದ್ಯವನ್ನು ಅರ್ಪಿಸಿ. ಆಸ್ತಿಗೆ ಸಂಬಂಧಿಸಿದ ವಿಚಾರಕ್ಕೆ ಮಹತ್ವದ ತಿರುವು ಲಭ್ಯ. ಶುಭಸಂಖ್ಯೆ: 2
ಮೀನ: ಕಾಡುವಂತಹ ಒತ್ತಡಗಳಿಗೆ ಅಲ್ಪ ವಿರಾಮ ದೊರೆಯಲಿದೆ. ಕುಟುಂಬದ ರೀತಿನೀತಿಗಳನ್ನು ಕಟ್ಟುನಿಟ್ಟಾಗಿ ಆಚರಿಸಿ. ಶುಭಸಂಖ್ಯೆ: 5