

ಮೇಷ: ವಿಶೇಷ ಅತಿಥಿಗಳ ಆಗಮನದಿಂದ ಸಂತೋಷ. ಸಹೋದರಿಯರಿಂದ ವಿಶೇಷ ಸಲಹೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7
ವೃಷಭ: ಹಿತಶತ್ರುಗಳಿಂದ ತೊಂದರೆ. ನಂಬಿದವರಿಂದಲೇ ಮೋಸ ಸಾಧ್ಯತೆ. ಮಾತಿನ ಮೇಲೆ ನಿಗಾ ಇರಲಿ. ಸಮಾಧಾನ ಚಿತ್ತರಾಗಿರಿ. ಶುಭಸಂಖ್ಯೆ: 6
ಮಿಥುನ: ಮಕ್ಕಳಿಂದ ಸಮಸ್ಯೆ ಬರಬಹುದು. ಅನವಶ್ಯಕ ವಾಗ್ವಾದಕ್ಕೆ ಆಸ್ಪದ ಕೊಡಬೇಡಿ. ಅದರಿಂದ ಹೊಸ ಸಮಸ್ಯೆ ಶುರುವಾದೀತು. ಶುಭಸಂಖ್ಯೆ: 8
ಕಟಕ: ಆತ್ಮೀಯರೊಂದಿಗೆ ಕಾಲ ಕಳೆಯುವಿರಿ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 4
ಸಿಂಹ: ನೂತನ ವಾಹನ ಖರೀದಿಯ ಬಗ್ಗೆ ಗೆಳೆಯರೊಂದಿಗೆ ಸಮಾಲೋಚನೆ. ಆತ್ಮೀಯರ ಸಮಾಗಮ. ಸಂಜೆ ವಿಹಾರ. ಶುಭಸಂಖ್ಯೆ: 3
ಕನ್ಯಾ: ಸಹೋದರರೊಂದಿಗೆ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ. ಆಸ್ತಿ ವಿಚಾರದಲ್ಲಿ ತಾಳ್ಮೆ ಇದ್ದಷ್ಟೂ ಕಡಿಮೆಯೇ. ಹುಷಾರಾಗಿರಿ. ಶುಭಸಂಖ್ಯೆ: 4
ತುಲಾ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಲಾವಿದರಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಕುಟುಂಬದೊಂದಿಗೆ ಸಂತೋಷಕೂಟ. ಶುಭಸಂಖ್ಯೆ: 2
ವೃಶ್ಚಿಕ: ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ. ಹಿರಿಯರ ಆಶೀರ್ವಾದ. ದಿನಾಂತ್ಯಕ್ಕೆ ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 7
ಧನುಸ್ಸು: ರಾಶ್ಯಾಧಿಪತಿಯ ನೀಚತ್ವದಿಂದ ಕೆಲಸಗಳಲ್ಲಿ ಅಭಿವೃದ್ಧಿ ಇಲ್ಲ. ಹಿತೈಷಿಗಳ ಸಲಹೆ ಪಡೆದುಕೊಳ್ಳಿ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 6
ಮಕರ: ಮಾನಸಿಕ ಅಶಾಂತಿ. ವೈದ್ಯರ ಸಲಹೆಯನ್ನು ಪಾಲಿಸದಿದ್ದಲ್ಲಿ ಆರೋಗ್ಯ ಹದಗೆಟ್ಟೀತು. ಎಚ್ಚರ. ಕೃಷಿಕರಿಗೆ ವಿಶೇಷ ದಿನ. ಶುಭಸಂಖ್ಯೆ: 3
ಕುಂಭ: ಕುಟುಂಬದವರ ಬಗ್ಗೆ ಮೃದುಧೋರಣೆ ಅನುಸರಿಸಿ. ಹಿತಶತ್ರುಗಳ ಬಗ್ಗೆ ಯಾವುದೇ ಅನುಕಂಪ ತೋರಿಸಬೇಡಿ. ಶುಭಸಂಖ್ಯೆ: 7
ಮೀನ: ಅನಿರೀಕ್ಷಿತ ಧನಲಾಭವಾಗಿ ಸಂತೋಷ. ಆಪ್ತ ಸ್ನೇಹಿತರಿಂದ ಪ್ರಶಂಸೆ. ಸಂಜೆಯ ವೇಳೆಗೆ ವಿಪರೀತ ಆಯಾಸ. ಶುಭಸಂಖ್ಯೆ: 8