ಈ ರಾಶಿಯವರು ಇಂದು ಇಚ್ಛಾಶಕ್ತಿಯಿಂದ ಹೊರಟರೆ ಎಲ್ಲವೂ ಸಾಧ್ಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಮಕ್ಕಳ ವೃತ್ತಿಜೀವನದ ಚಿಂತೆ ಕಾಡಬಹುದು. ಕೆಲಸದ ಸ್ಥಳದಲ್ಲಿ ಗೆಳೆಯರಿಂದ ಬೆಂಬಲ. ಶುಭಸಂಖ್ಯೆ: 9

ವೃಷಭ: ಯೋಚಿಸಿ ನಿರ್ಧಾರಕ್ಕೆ ಬನ್ನಿ. ಇಲ್ಲದಿದ್ದರೆ ದೊಡ್ಡನಷ್ಟವಾಗಬಹುದು. ಕುಟುಂಬದಲ್ಲಿ ಮನಸ್ತಾಪ. ಹಿರಿಯರಿಂದ ಸಮಾಧಾನ. ಶುಭಸಂಖ್ಯೆ: 2

ಮಿಥುನ: ಆಶ್ಚರ್ಯಗಳು ಎದುರಾಗಬಹುದು. ಹೆಚ್ಚಿನ ಸಂತೋಷ ಹೊಂದುತ್ತೀರಿ. ಹಣಕಾಸಿನ ಅಭಿವೃದ್ಧಿ . ಬಲಹೀನತೆಯ ಪ್ರದರ್ಶನ. ಶುಭಸಂಖ್ಯೆ: 4

ಕಟಕ: ಮನೆಯ ಹಿರಿಯರಿಗೆ ಅನಾರೋಗ್ಯ. ಮಕ್ಕಳ ಜೀವನದಲ್ಲಿ ಉತ್ತಮ ಬದಲಾವಣೆಯಿಂದ ಸಂತಸ. ವ್ಯಾಪಾರಸ್ಥರಿಗೆ ಕಿರಿಕಿರಿ. ಶುಭಸಂಖ್ಯೆ: 7

ಸಿಂಹ: ಗಳಿಕೆ ಹೆಚ್ಚಾಗುತ್ತದೆ, ವೆಚ್ಚವನ್ನು ನಿಯಂತ್ರಿಸಿ. ಬರಹಗಾರರು, ಪತ್ರಕರ್ತರಿಗೆ ವಿಶೇಷ ದಿನ. ಸಕಾರಾತ್ಮಕ ಚಿಂತನೆಯಿರಲಿ. ಶುಭಸಂಖ್ಯೆ: 6

ಕನ್ಯಾ: ನಿಮ್ಮ ಸಹೋದ್ಯೋಗಿಗಳಿಂದ ಸಹಕಾರ. ನಿಮ್ಮೊಳಗಿನ ಪ್ರತಿಭೆಯನ್ನು ಪ್ರದರ್ಶಿಸಿ. ಯಶಸ್ವಿಯಾಗುತ್ತದೆ. ಆರ್ಥಿಕ ಸಮಸ್ಯೆ. ಶುಭಸಂಖ್ಯೆ: 7

ತುಲಾ: ನಿಮಗಿದು ಶುಭ ದಿನ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸ್ಥಗಿತಗೊಂಡ ಕಾರ್ಯಕ್ಕೆ ಚಾಲನೆ. ಖರ್ಚಿನತ್ತ ಹಿಡಿತವಿರಲಿ. ಶುಭಸಂಖ್ಯೆ: 3

ವೃಶ್ಚಿಕ: ಕಚೇರಿಯ ವಾತಾವರಣ ನಿಮಗೆ ಪೂರಕ. ವಾದ-ವಿವಾದಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ. ಸಹೋದರನಿಂದ ಬೆಂಬಲ. ಶುಭಸಂಖ್ಯೆ:9

ಧನುಸ್ಸು: ನಿಮ್ಮ ಪ್ರಯತ್ನಗಳು ಇಂದು ಯಶಸ್ವಿಯಾಗಲಿವೆ. ಸವಾಲಿನ ದಿನ. ನಿಮ್ಮ ಪರಿಶ್ರಮಕ್ಕೆ ವಿಶೇಷ ಫಲ. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 2

ಮಕರ: ವ್ಯವಹಾರದಲ್ಲಿ ಬಹಳ ಜಾಗರೂಕರಾಗಿರಬೇಕು. ಶತ್ರುಗಳಿಂದ ನಿಮಗೆ ತೊಂದರೆಯಾಗುವ ಸಾಧ್ಯತೆ. ಖಾಸಗಿ ಕ್ಷೇತ್ರದಲ್ಲಿ ಪ್ರಗತಿ. ಶುಭಸಂಖ್ಯೆ: 2

ಕುಂಭ: ಈ ದಿನ ಸಂಚಾರಯೋಗವಿದೆ. ಕೆಲಸದಲ್ಲಿ ಉದಾಸೀನತೆ ಎದುರಾಗಬಹುದು. ಅಸ್ವಸ್ಥತೆ ಸ್ವಲ್ಪ ಕಾಡಬಹುದು. ಜಾಗ್ರತೆ ವಹಿಸಿ. ಶುಭಸಂಖ್ಯೆ: 3

ಮೀನ: ಒತ್ತಡಕ್ಕೆ ಒಳಗಾಗಬಹುದು. ಇಚ್ಛಾಶಕ್ತಿಯಿಂದ ಹೊರಟರೆ ಎಲ್ಲವೂ ಸಾಧ್ಯ. ನಿಮ್ಮ ನೆಚ್ಚಿನ ವ್ಯಕ್ತಿಯನ್ನು ಭೇಟಿ ಮಾಡುವಿರಿ. ಶುಭ ಸಂಖ್ಯೆ 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net