ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಹತ್ತಿರದ ಜನರೇ ವಿನಾಕಾರಣ ಜಗಳ ಆಡಲಿದ್ದಾರೆ

Nitya-Bhavishya-vvani-1-2-1
Published on

ಮೇಷ: ಹಳೆಯ ವಿವಾದಗಳು ಬಳಲಿಕೆ ತರಿಸುತ್ತಿವೆ. ಆದರೆ ಶಾಂತಿಯಿಂದಿರಿ. ಮಾತುಕತೆಗೂ ಅವಕಾಶ ಲಭ್ಯವಾಗಲಿದೆ. ಶುಭಸಂಖ್ಯೆ: 6

ವೃಷಭ: ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಇದರಿಂದ ಪದೋನ್ನತಿಗೆ ಕೂಡ ದಾರಿ ನಿರಾಳವಾಗಿದೆ. ಶುಭಸಂಖ್ಯೆ: 1

ಮಿಥುನ: ಆಕಸ್ಮಿಕವಾದ ಆಘಾತ ಎದುರಾದೀತು. ಆದರೂ ಕೂಡ ತಾಳ್ಮೆಯನ್ನು ಕಳೆದುಕೊಳ್ಳದಿರಿ. ಅಂತಿಮ ಗೆಲುವು ಮಾತ್ರ ನಿಮಗೇ ಸಿಗಲಿದೆ. ಶುಭಸಂಖ್ಯೆ: 9

ಕಟಕ: ನಿಮ್ಮ ಮಾತಿಗೆ ಬೆಲೆ ಇರುವುದು ನಿಜವೇ ಆದರೂ ಸ್ವೀಕರಿಸುವ ಜನ ಒಂದೇ ರೀತಿ ಇರಲಾರರು ಎಂದು ಅರಿತಿರಿ. ಶುಭಸಂಖ್ಯೆ: 4

ಸಿಂಹ : ಯಾರು ಏನೆಂದರೂ ನಾನು ಹೀಗೆಯೇ ಇರುವುದು ಎಂಬ ನಿಲುವು ಬಿಡಿ. ಇಲ್ಲವಾದರೆ ತೊಂದರೆ ಎದುರಾದೀತು. ಶುಭಸಂಖ್ಯೆ: 2

ಕನ್ಯಾ: ಹತ್ತಿರದ ಜನರೇ ವಿನಾಕಾರಣ ಜಗಳ ಮಾಡುವುದಕ್ಕೆ ಮುಂದಾಗಬಹುದು. ಬೇಸರಪಡದಿರಿ. ತಾಳ್ಮೆ ಅಗತ್ಯ. ಶುಭಸಂಖ್ಯೆ: 7

ತುಲಾ: ದೂರದ ಬಂಧುಗಳಿಂದ ಕೊಂಕು ಮಾತುಗಳು ಎದುರಾಗಬಹುದು. ಪ್ರತಿಕ್ರಿಯಿಸದೆ ನಸುನಕ್ಕು ಸುಮ್ಮನಿದ್ದುಬಿಡಿ, ಸಾಕು. ಶುಭಸಂಖ್ಯೆ: 5

ವೃಶ್ಚಿಕ: ಗುರಿಯ ಹಿಂದೆ ಹೊರಟಿರುವಂತಹ ನೀವು ಸೋಲಿಗೆ ಅಂಜಬೇಡಿ. ಮುನ್ನುಗ್ಗಿ ನಡೆದರೆ ನಿಶ್ಚಿತವಾಗಿ ಯಶಸ್ಸು ಲಭ್ಯ. ಶುಭಸಂಖ್ಯೆ: 8

ಧನುಸ್ಸು: ಎಷ್ಟೋ ಥರದ ಜನರನ್ನು ನೋಡಿದ್ದೀರಿ. ಆದರೆ ಇಂದು ಸಿಗುವವರು ಎಂದಿಗಿಂತ ಭಿನ್ನ ಎಂಬುದು ನೆನಪಿರಲಿ. ಶುಭಸಂಖ್ಯೆ: 3

ಮಕರ : ಹಿರಿಯರ ಆರೋಗ್ಯದಲ್ಲಿ ತುಸು ವ್ಯತ್ಯಾಸ ಉಂಟಾಗಬಹುದು. ಜಗನ್ಮಾತೆಯಾದ ಅಂಬಾಭವಾನಿಯನ್ನು ಸ್ಮರಿಸಿ. ಶುಭಸಂಖ್ಯೆ: 9

ಕುಂಭ: ಬರಬೇಕಾದ ಹಣವನ್ನು ಮರಳಿ ಪಡೆಯಲು ಪ್ರಯತ್ನಿಸಿ. ಶ್ರೀಹರಿಯ ಅನುಗ್ರಹವಿದೆ. ನಿರಾಳತೆಯಿಂದಲೇ ಇರಿ. ಶುಭಸಂಖ್ಯೆ: 6

ಮೀನ : ಥಟ್ಟನೆ ನಿರ್ಣಯ ಮಾಡುವ ಅವಸರ ಬೇಡ. ಮಹತ್ವದ ಬೇರೊಂದು ಜವಾಬ್ದಾರಿ ಹೊರಬೇಕಾದ ಸಾಧ್ಯತೆ ಇದೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net