ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಲಾಭವಾಗಲಿದೆ...

Nitya-Bhavishya-vvani-1-2-1-1
Published on

ಮೇಷ: ವಿಶೇಷ ಅತಿಥಿಗಳು ಅನಿರೀಕ್ಷಿತವಾಗಿ ಮನೆಗೆ ಬರುವರು. ಸಹೋದರಿಯರಿಂದ ವಿಶೇಷ ಸಲಹೆ. ದಿನಾಂತ್ಯದಲ್ಲಿ ಶುಭವಾಗಲಿದೆ. ಶುಭಸಂಖ್ಯೆ: 7.

ವೃಷಭ: ಹಿತಶತ್ರುಗಳಿಂದ ತೊಂದರೆ. ನಂಬಿದವರಿಂದಲೇ ಮೋಸವಾಗುವ ಸಾಧ್ಯತೆ ಜಾಸ್ತಿ. ಹುಷಾರಾಗಿರಿ. ಮಾತಿನ ಬಗ್ಗೆ ನಿಗಾ ಇರಲಿ . ಶುಭಸಂಖ್ಯೆ: 6.

ಮಿಥುನ: ಮಕ್ಕಳಿಂದ ಸಮಸ್ಯೆ ಬರಬಹುದು. ಮೃದು ಮಾತುಗಳಿಂದಲೇ ಬಗೆಹರಿಸಿ. ಅನವಶ್ಯಕ ವಾಗ್ವಾದಗಳಿಗೆ ಆಸ್ಪದ ಬೇಡ. ಶುಭಸಂಖ್ಯೆ: 8.

ಕಟಕ: ಆತ್ಮೀಯರೊಂದಿಗೆ ಕಾಲ ಕಳೆಯುವಿರಿ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 4

ಸಿಂಹ: ನೂತನ ವಾಹನ ಖರೀದಿ ಕುರಿತು ಸಮಾಲೋಚನೆ. ಆತ್ಮೀಯರ ಸಮಾಗಮ. ದಿನಾಂತ್ಯದಲ್ಲಿ ವಿಹಾರ. ಶುಭಸಂಖ್ಯೆ: 3.

ಕನ್ಯಾ: ಸಹೋದರರೊಂದಿಗೆ ಘರ್ಷಣೆ ಉಂಟಾಗುವ ಸಂಭವ. ಆಸ್ತಿ ವಿಚಾರದಲ್ಲಿ ತಾಳ್ಮೆಯಿಂದಿರಿ. ಮಾತಿನ ಮೇಲೆ ಹಿಡಿತವಿರಲಿ. ಶುಭಸಂಖ್ಯೆ: 4.

ತುಲಾ: ಆರೋಗ್ಯದ ಬಗ್ಗೆ ವೈದ್ಯರ ಸಲಹೆ ಪಡೆಯಿರಿ. ಕಲಾವಿದರಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಸಂತೋಷಕೂಟ. ಶುಭಸಂಖ್ಯೆ: 2.

ವೃಶ್ಚಿಕ: ಬಹಳ ದಿನದಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗಲಿದೆ. ಹಿರಿಯರ ಆಶೀರ್ವಾದ. ದಿನಾಂತ್ಯದಲ್ಲಿ ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 7.

ಧನಸ್ಸು: ರಾಶ್ಯಾಧಿಪತಿ ನೀಚತ್ವದಿಂದ ಯಾವ ಕೆಲಸದಲ್ಲೂ ಅಭಿವೃದ್ಧಿ ಇಲ್ಲ. ಹಿತೈಷಿಗಳ ಸಲಹೆ ಪಡೆದುಕೊಳ್ಳಿ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 6.

ಮಕರ: ಮಾನಸಿಕ ಅಶಾಂತಿ. ವೈದ್ಯರ ಸಲಹೆಯನ್ನು ಪಾಲಿಸದಿದ್ದರೆ ಆರೋಗ್ಯ ಹದಗೆಡಬಹುದು. ಕೃಷಿಕರಿಗೆ ಖುಷಿಯ ದಿನ. ಶುಭಸಂಖ್ಯೆ: 3.

ಕುಂಭ: ಕುಟುಂಬದವರ ಬಗ್ಗೆ ಮೃದುಧೋರಣೆ ಅನುಸರಿಸಿ. ಹಿತಶತ್ರುಗಳ ಬಗ್ಗೆ ಅನುಕಂಪ ತೋರಿಸಲು ಹೋಗಬೇಡಿ. b

ಮೀನ : ಅನಿರೀಕ್ಷಿತ ಧನಲಾಭ. ಸ್ನೇಹಿತರಿಂದ ಪ್ರಶಂಸೆ. ಮಾನಸಿಕ ನೆಮ್ಮದಿ. ಸಂಜೆಯ ಹೊತ್ತಿಗೆ ವಿಪರೀತ ಆಯಾಸದಿಂದ ಬೇಸರ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net