

ಮೇಷ: ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರಲಿ. ಮನಸ್ತಾಪಗಳು ಮತ್ತು ಕಲಹಗಳು. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 7
ವೃಷಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಬಂಧು ಬಾಂಧವರಲ್ಲಿ ಬೇಸರ. ಅನಿರೀಕ್ಷಿತ ಧನ ನಷ್ಟ, ಸಾಲ ಮಾಡುವ ಸಂಭವ. ಶುಭಸಂಖ್ಯೆ: 7
ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ. ವಿದ್ಯಾರ್ಥಿಗಳಲ್ಲಿ ಹೊಸ ಆಸೆ ಮೂಡಲಿದೆ. ಸ್ವಂತ ವ್ಯಾಪಾರದಲ್ಲಿ ಅನುಕೂಲ. ಶುಭಸಂಖ್ಯೆ: 9
ಕಟಕ: ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು. ಕೆಲಸ ಕಾರ್ಯಗಳಿಗೆ ಅಡೆತಡೆ ಉಂಟಾಗಲಿದೆ. ಆತಂಕ ಮತ್ತು ಚಿಂತೆ. ಶುಭಸಂಖ್ಯೆ: 7
ಸಿಂಹ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಬೇಡ. ಅಧಿಕ ನಿದ್ರೆ, ಆರೋಗ್ಯ ಸಮಸ್ಯೆ. ಉದ್ಯೋಗದ ಚಿಂತೆ. ದೂರ ಪ್ರದೇಶಕ್ಕೆ ತೆರಳುವ ಆಸೆ. ಶುಭಸಂಖ್ಯೆ: 7
ಕನ್ಯಾ: ಉನ್ನತ ವಿದ್ಯಾಭ್ಯಾಸದ ಹಂಬಲ. ಮಿತ್ರರಿಂದ ಸಂಕಷ್ಟ, ಉದ್ಯೋಗ ಬದಲಾವಣೆಯಿಂದ ಉತ್ತಮ ಅವಕಾಶ ನಿಮ್ಮದಾಗಲಿದೆ. ಶುಭಸಂಖ್ಯೆ: 2
ತುಲಾ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮಾತಿನಿಂದ ತೊಂದರೆ, ಅನಿರೀಕ್ಷಿತವಾಗಿ ಅಧಿಕ ಖರ್ಚು. ಶುಭಸಂಖ್ಯೆ: 3
ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಚುರುಕುತನ ಅಗತ್ಯ. ಅಧಿಕ ಅನಾರೋಗ್ಯ. ಅಪಮಾನ, ವಿನಾಕಾರಣ ನಿಂದನೆ. ಪ್ರಯಾಣದಲ್ಲಿ ಅಡೆತಡೆ. ಶುಭಸಂಖ್ಯೆ: 4
ಧನುಸ್ಸು: ಅನಿರೀಕ್ಷಿತ ಘಟನೆಗಳಿಂದ ಮನೋವ್ಯಾಧಿ. ವಿದ್ಯಾರ್ಥಿಗಳಿಗೆ ಉಲ್ಲಾಸದಾಯಕ ದಿನ. ದೂರ ಪ್ರದೇಶದಲ್ಲಿ ಉದ್ಯೋಗದ ಆಸೆ. ಶುಭಸಂಖ್ಯೆ: 8
ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗಿಬರಲಿದೆ. ರಾಜಯೋಗದ ದಿವಸ. ಆರೋಗ್ಯದಲ್ಲಿ ಏರುಪೇರು ಆಗಬಹುದು. ಶುಭಸಂಖ್ಯೆ: 1
ಕುಂಭ: ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಳೆದುಕೊಳ್ಳಬೇಡಿ. ಕೆಲಸ ಮಾಡಬೇಕೆನ್ನುವ ಹಂಬಲ. ಮಿತ್ರರಿಂದ ಅನುಕೂಲ, ಸಾಂತ್ವನದ ಮಾತು. ಶುಭಸಂಖ್ಯೆ: 6
ಮೀನ: ಅತಿಯಾದ ಆಸೆಗೆ ಬಲಿಯಾದೀರಿ. ವಿದ್ಯಾಭ್ಯಾಸಕ್ಕೆ ತೊಡಕು. ಐಷಾರಾಮಿ ಜೀವನದತ್ತ ಒಲವು. ಉದ್ಯೋಗ ಸ್ಥಳದಲ್ಲಿ ಕಲಹ. ಶುಭಸಂಖ್ಯೆ: 9