

ಮೇಷ: ವಿಶೇಷ ಯಶಸ್ಸಿನಿಂದ ಕುಟುಂಬದೊಂದಿಗೆ ಸಂಭ್ರಮ. ನಿಮ್ಮ ಮನಸ್ಥೈರ್ಯಕ್ಕೆ ಮೆಚ್ಚುಗೆ. ವೈದ್ಯರ ಸಲಹೆ ನಿರಾಕರಿಸಬೇಡಿ. ಶುಭಸಂಖ್ಯೆ:8
ವೃಷಭ: ಆತ್ಮವಿಶ್ವಾಸದಿಂದ ಕೆಲಸ ನಿರ್ವಹಣೆ ಮಾಡಿ. ಗೆಲುವು ನಿಮ್ಮದೇ. ದುಂದು ವೆಚ್ಚ ಮಾಡಬೇಡಿ. ಮಕ್ಕಳಿಂದ ಚಿಂತೆ. ಶುಭಸಂಖ್ಯೆ: 1
ಮಿಥುನ: ನಿಮ್ಮ ನಡವಳಿಕೆ ಮನಸ್ಸಿನ ನಿಯಂತ್ರಣದಲ್ಲಿರಲಿ. ಹೆಚ್ಚು ಮಾತು ಬೇಡ. ಹಲವು ದಿನಗಳಿಂದ ಪಟ್ಟ ಪ್ರಯತ್ನಕ್ಕೆ ತಕ್ಕ ಪ್ರತಿಫಲ. ಶುಭಸಂಖ್ಯೆ: 3
ಕಟಕ: ಶಿಫಾರಸಿಗೆ ಕಾಯಬೇಡಿ. ಪ್ರಯತ್ನ ಮುಂದುವರಿಸಿ. ಗುರುವಿನ ಬಲದಿಂದ ಜಯ ನಿಮ್ಮದೇ. ಆರೋಗ್ಯದಲ್ಲಿ ತೊಂದರೆ. ಶುಭಸಂಖ್ಯೆ: 6
ಸಿಂಹ: ನಿಮ್ಮ ಕಾರ್ಯಕ್ಕೆ ಆಕ್ಷೇಪ. ಸಂಗಾತಿಯಿಂದ ಸಲಹೆ ಪಡೆಯಿರಿ. ವಿದೇಶದಲ್ಲಿ ಓದಬೇಕೆಂಬ ಮಕ್ಕಳ ಕನಸು ನನಸು. ಶುಭಸಂಖ್ಯೆ: 7
ಕನ್ಯಾ: ನಿಮ್ಮ ಹಿರಿಯರ ಸಲಹೆಯನ್ನು ನಿರಾಕರಿಸಬೇಡಿ. ಆಸ್ತಿ ವಿಚಾರದಲ್ಲಿ ಕಿರಿಕಿರಿ ಸಾರ್ವಜನಿಕ ಜೀವನದಲ್ಲಿ ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 4
ತುಲಾ: ಕುಟುಂಬದಲ್ಲಿ ಶುಭಕಾರ್ಯ. ಆಕಸ್ಮಿಕ ಧನಲಾಭ. ಯಾವುದೇ ವಿಷಯವನ್ನು ಯೋಚಿಸಿ ನಿರ್ವಹಿಸಿ. ಧಾರ್ಮಿಕ ಕ್ಷೇತ್ರಕ್ಕೆ ಭೆೇಟಿ. ಶುಭಸಂಖ್ಯೆ: 5
ವೃಶ್ಚಿಕ: ನಿಮ್ಮ ನಿರೀಕ್ಷೆಗೂ ಮೀರಿ ನಿಮ್ಮ ಪ್ರಯತ್ನದ ಸಫಲತೆ. ಸ್ನೇಹಿತರಿಂದ ವಿಶೇಷ ಮನ್ನಣೆ. ಕುಟುಂಬದಲ್ಲಿ ವಿಶೇಷ ಗೌರವ. ಶುಭಸಂಖ್ಯೆ: 6
ಧನಸ್ಸು: ಕಷ್ಟಕಾಲದಲ್ಲಿ ಕುಟುಂಬದಿಂದ ಸಾಂತ್ವನ. ತಾಯಿಯಿಂದ ವಿಶೇಷ ಸಲಹೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ 7
ಮಕರ: ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ. ಮನಸ್ಸಿಗೆ ಸಮಾಧಾನ ಸಿಗುತ್ತದೆ. ಕಾರ್ಯದಲ್ಲಿ ವೈಲ್ಯ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ 6
ಕುಂಭ: ಅನಿರೀಕ್ಷಿತವಾಗಿ ಧನಲಾಭವಾಗಲಿದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ಮಹತ್ವದ ನಿರ್ಧಾರ. ಮಗಳಿಗೆ ಮದುವೆ ನಿಶ್ಚಯ. ಶುಭಸಂಖ್ಯೆ: 2
ಮೀನ : ಕಲಾವಿದರಿಗೆ ವಿಶೇಷ ದಿನ. ಬರಹಗಾರರಿಗೆ ಪಾರಿತೋಷಕ ದೊರೆಯುವ ಸಾಧ್ಯತೆ. ಸಾರ್ವಜನಿಕ ಕ್ಷೇತ್ರದಲ್ಲಿ ವಿಶೇಷ ಮನ್ನಣೆ. ಶುಭ ಸಂಖ್ಯೆ 9